More

  ತಾರತಮ್ಯ ಹೋಗಲಾಡಿಸಲು ಸರ್ಕಾರ ಮುಂದಾಗಲಿ

  ಕೋಲಾರ: ಜಾತಿ, ಧರ್ಮದ ಆಧಾರದ ಮೇಲೆ ಕಾನೂನು, ಕಾಯ್ದೆಗಳು ರಚನೆಯಾಗುತ್ತಿದ್ದು, ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಸಂಸ್ಕೃತಿ ದಿವಾಳಿತನಕ್ಕೆ ಕಾರಣವಾಗುತ್ತಿದೆ. ಜಾತಿ, ಧರ್ಮ ತಾರತಮ್ಯವನ್ನು ಹೋಗಲಾಡಿಸಲು ಸರ್ಕಾರ ಮುಂದಾಗಲಿ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

  ನಗರದ ನಚಿಕೇತನ ನಿಲಯದಲ್ಲಿ ಬುಡ್ಡಿದೀಪ ವತಿಯಿಂದ ಅಂಬೇಡ್ಕರ್ ಓದು-2ನೇ ಕಾರ್ಯಕ್ರಮದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ `ಅಂಬೇಡ್ಕರ್ ಕಂಡ ಕನಸುಗಳು’ ಮತ್ತು ಸಂವಿಧಾನ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆ ಗ್ರಾಮಗಳಲ್ಲಿ ನ್ಯಾಯದ ಕಟ್ಟೆಗಳು ಇದ್ದವು, ಇದರ ಪರಿಣಾಮ ನನ್ನ ವೃತ್ತಿಯ ಮೇಲೂ ಬೀರಿದೆ. ಗ್ರಾಮಾಂತರ ಪ್ರದೇಶದಲ್ಲಿ ಸತ್ಯ ಕಂಡು ಹಿಡಿಯುವುದೇ ಕಟ್ಟೆಯ ನ್ಯಾಯ. ಅವರಿಗೆ ಯಾವುದೇ ಕಾನೂನು, ಕಾಯ್ದೆಗಳ ಬಗ್ಗೆ ಅರಿವು ಇರಲಿಲ್ಲ. ಹಿರಿಯರು ಹೇಳಿದ ಕತೆಗಳು ವೃತ್ತಿಯಲ್ಲಿ ಪತಿಣಾಮ ಬೀರಿತು ಎಂದು ಮೆಲುಕು ಹಾಕಿದರು.

  ಅಂಬೇಡ್ಕರ್ ಕನಸುಗಳ ಬಗ್ಗೆ ಒಂದು ಉಪನ್ಯಾಸದಲ್ಲಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಕಲಿಕೆ ಎಂಬುದು ಮನುಷ್ಯ ಜೀವನದಲ್ಲಿ ನಿರಂತರವಾಗಿರುತ್ತದೆ. ಸಂವಿಧಾನ ಓದುವುದು ಎಂದರೆ ಅಂಬೇಡ್ಕರ್ ಅವರನ್ನು ಓದುವುದು ಎಂದರ್ಥ, ಅಶಯಗಳು, ಕನಸುಗಳು, ಸಮಾಜದಲ್ಲಿ ಏನೆಲ್ಲ ಉದ್ದೇಶಗಳು ಈಡೇರಬೇಕು ಎಂಬುದು ಸಂವಿಧಾನದಲ್ಲಿ ಇದೆ ಎಂದು ತಿಳಿಸಿದರು.

  ಎಲ್ಲ ಅಕ್ಷರಸ್ಥರಿಗೂ ಕಾನೂನು, ಸಂವಿಧಾನ ಅಗತ್ಯ ಬೇಕಾಗಿದೆ. ಸರ್ಕಾರಗಳು ಅವುಗಳನ್ನು ಜನರಿಗೆ ತಿಳಿಪಡಿಸುವ ಪ್ರಯತ್ನ ಮಾಡಲಿಲ್ಲ. ನಾವೆಲ್ಲರೂ ಮಾರುಕಟ್ಟೆಯಲ್ಲಿ ಪುಸ್ತಕ ಓದಿ ಜಾಗೃತರಾಗಲು ಮುಂದಾಗಲಿಲ್ಲ. ಸಂವಿಧಾನ ಎಂದರೆ ಕತೆ, ಕಾದಂಬರಿ, ಸಿನಿಮಾ ಅಲ್ಲ. ಮೊದಲು ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಜನರ ಸಂಸ್ಕೃತಿ, ಮೌಲ್ಯ, ಜಾತಿ, ರಾಜಕೀಯ ಬಗ್ಗೆ ತಿಳಿದು, ಸಂವಿಧಾನ ಪ್ರವೇಶ ಮಾಡಿದರೆ ಅರ್ಥವಾಗುತ್ತದೆ ಎಂದು ಹೇಳಿದರು.

  ಕಾನೂನಿನಲ್ಲಿ ಸಮಾನ ಅವಕಾಶಗಳು:
  ಸಮಾಜದಲ್ಲಿ ೪೬೩೫ ಜಾತಿ ಮತ್ತು ಉಪಜಾತಿಗಳಿವೆ. ಇದರಲ್ಲಿ ಮೇಲ್ಜಾತಿ, ಕೆಳ ಜಾತಿಗಳಿದ್ದು, ಇದರ ನಡುವೆ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಅಸಮಾನತೆಗಳು ಇವೆ. ಎಷ್ಟೇ ಹುಡುಕಿದರು ಏಕ ಸಂಸ್ಕೃತಿ ಹೊಂದಿರುವರು ದೊರೆಯುವುದಿಲ್ಲ. ವಿವಿಧ ರೀತಿ ಊಟದ ಶೈಲಿ, ಮಾತು ವಿಭಿನ್ನವಾಗಿದ್ದರು, ಜನತೆ ಒಟ್ಟಿಗೆ ಬದುಕುತಿಲ್ಲವೆ.?. ಕಾನೂನುದೃಷ್ಟಿಯಲ್ಲಿ ಸಮಾನ ಅವಕಾಶಗಳು ಇವೆ ಎಂದು ಪ್ರತಿಯೊಬ್ಬರು ಅರಿತುಕೊಳ್ಳಬೇಕು ಎಂದು ನಾಗಮೋಹನ್‌ದಾಸ್ ಎಚ್ಚರಿಸಿದರು.

  ಅಗತ್ಯ ವಿಚಾರಗಳು ಚರ್ಚೆಯಾಗುತ್ತಿಲ್ಲ:
  ಕುಟುಂಬ, ಊರು, ರಾಜ್ಯ, ದೇಶವನ್ನು ಅರ್ಥ ಮಾಡಿಕೊಂಡರೆ ಸಂವಿಧಾನ ಅರ್ಥ ಮಾಡಿಕೊಳ್ಳಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ವ್ಯವಸ್ಥೆಗಳಿವೆ. ನ್ಯಾಯಾಂಗದ ವ್ಯವಸ್ಥೆಯಲ್ಲಿ ಸುಪ್ರೀಂ, ಹೈಕೋರ್ಟ್, ಜಿಲ್ಲಾ, ತಾಲೂಕು ನ್ಯಾಯಾಲಯಗಳಿವೆ. ಕಾರ್ಯಾಂಗರದಲ್ಲಿ ಸಂಸತ್, ವಿಧಾನಸಭೆ, ಜಿಲ್ಲಾಡಳಿತ, ಜಿ.ಪಂ, ತಾ.ಪಂ ಗ್ರಾಪಂ ಇವೆ. ಇದರಲ್ಲಿ ದೇಶದ ಜನ ಭಾಗಿಯಾಗುತ್ತಿದ್ದು, ಜನತೆಗೆ ಅಗತ್ಯವಾಗಿ ಬೇಕಾಗಿರುವ ವಿಚಾರಗಳು ಚರ್ಚೆಯಾಗುತ್ತಿಲ್ಲ ಎಂದು ನಾಗಮೋಹನ್‌ದಾಸ್ ಅಸಮಾಧಾನವ್ಯಕ್ತಪಡಿಸಿದರು.

  • ಯುವಕರು ಸಂವಿಧಾನ ರಕ್ಷಣೆಗೆ ಮುಂದಾಗಿ:
   ಭಯೋತ್ಪಾದನೆ, ಮೂಲಭೂತವಾದ, ಸಾಂಸ್ಕೃತಿಕ, ದಿವಾಳಿತನ ಈ ರೀತಿ ಅನೇಕ ಸವಾಲುಗಳಿವೆ. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ದುಡಿಯುವ, ಮಹಿಳೆಯರ ಬಗ್ಗೆ ಕಾಳಜಿ ಹೊಂದಬೇಕು. ಆಗ ಯುವ ಜನರು ಸಂವಿಧಾನ ರಕ್ಷಣೆ ಮಾಡಬಹುದು. ಅಸ್ಪÈಶ್ಯರ ನೋವು ಅರ್ಥ ಮಾಡಿಕೊಳ್ಳಬೇಕು. ಚರ್ಚೆ, ಸಂವಾದದ ಮೂಲಕ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಅಂಬೇಡ್ಕರ್ ಪ್ರಕಾರ ರಾಜಕೀಯ, ಅರ್ಥಿಕ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವ ಒಳಗೊಂಡಿದೆ. ಇದುವರೆಗೂ ರಾಜಕೀಯ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಆರ್ಥಿಕ, ಸಾಮಾಜಿಕ ಬಗ್ಗೆ ಚರ್ಚೆಯಾಗುತ್ತಿಲ್ಲ. ಸರ್ಕಾರ ಧರ್ಮ, ಜಾತಿ ತಾರತಮ್ಯವನ್ನು ಬಗೆಹರಿಸಲು ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.
  • ಧರ್ಮ, ಜಾತಿ ಆಧಾರದ ಮೇಲೆ ಕಾನೂನು ರಚನೆಯಾಗಬಾರದು
   ಧರ್ಮ, ಜಾತಿ ಆಧಾರದ ಮೇಲೆ ಕಾನೂನು ರಚನೆಯಾಗುವುದು ದೂರವಾಗಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಾಗಬೇಕು. ಅನ್ಯಾಯಕ್ಕೆ ಒಳಗಾದವರಿಗೆ ಸಾಮಾಜಿಕ ನ್ಯಾಯ ದೊರಕಿಸುವುದು ಎಂದರ್ಥ ಮೀಸಲಾತಿ ಎಂದು ಸಂವಿಧಾನದಲ್ಲಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿ ಬಿಕ್ಕಟ್ಟಿನಲ್ಲಿದೆ, ನಿರುದ್ಯೋಗ ಸಮಸ್ಯೆ ಇದೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದೆ. ಮಹಿಳೆಯರ, ನಿರುದ್ಯೋಗಿಗಳ, ವೃದ್ಧರ ನೆರವಿಗೆ ಹೋಗುವುದು ಸಾಮಾಜಿಕ ನ್ಯಾಯ ಅಲ್ಲವೇ ಎಂದು ಜಸ್ಟೀಸ್ ನಾಗಮೋಹನ್‌ದಾಸ್ ಪ್ರಶ್ನಿಸಿದರು.
  • ಜ್ಞಾನಕೇಂದ್ರ ಕಸದ ತೊಟ್ಟಿಯಾಗಿದೆ:
   ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ಗ್ರಾಮಗಳಲ್ಲಿ ಕಿರು ನ್ಯಾಯಾಲಯಗಳಾಗಿದ್ದ ಪಂಚಾಯಿತಿ ಕಟ್ಟೆಗಳು ಜಾತಿ ಮಧ್ಯೆ ಹೊಡೆದುಹೋಗಿವೆ. ಮುಂದಿನ ಪೀಳಿಗೆಯನ್ನು ಜಾಗೃತಿಗೊಳಿಸಲು ಮುಕ್ತ ಚರ್ಚೆ ವೇದಿಕೆಯಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಬೆಟ್ಟದ ಮೇಲೆ ಬೀಳುತ್ತಿದ್ದ ಗಾಜಿನ ಚೂರುಗಳನ್ನು ನೋಡಿ ಕಣ್ಣೀರು ಬಂದಿತು. ಇದರಿಂದ ಬೇಸತ್ತು ನಚಿಕೇತನ ನಿಲಯ ಆವರಣಕ್ಕೆ ಬಂದಾಗ ಕಂಡಿದ್ದು ಕಸದ ತಿಪ್ಪೆಯಂತಿದ್ದ ವಿದ್ಯಾರ್ಥಿ ನಿಲಯವನ್ನು, ಇದನ್ನು ಜ್ಞಾನಕೇಂದ್ರವನ್ನಾಗಿ ಮಾಡಲು ಪಣತೊಟ್ಟಿದ್ದು, ಯುವಕರು ಸಹಕಾರ ನೀಡಬೇಕು ಎಂದು ಕೋರಿದರು.
   ಉಪನ್ಯಾಸಕರಾದ ಪ್ರೊ.ಅರಿವು ಶಿವಪ್ಪ, ಪ್ರೊ.ಪ್ರಸನ್ನಕುಮಾರಿ, ಪತ್ರಕರ್ತ ಕೆ.ಎಸ್.ಗಣೇಶ್ ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts