More

    ಬರ ಪರಿಹಾರ ಎಲ್ಲಾ ರೈತರಿಗೂ ತಲುಪಿಸಬೇಕು


    ಗದಗ: ಬರ ಪರಿಹಾರ ಎಲ್ಲಾ ರೈತರಿಗೂ ತಲುಪಿಸಬೇಕು ಮತ್ತು ಗ್ರಾಹಕರ ಆಹಾರ ಧಾನ್ಯಗಳ ಬೆಲೆ ನಿಯಂತ್ರಣ ಮಾಡಲು ಆಗ್ರಹಿಸಿ ಮುಂಡರಗಿ ತಾಲೂಕ ಸಾರ್ವಜನಿಕ ಹೋರಾಟ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
    ಬರ ಪರಿಹಾರ ಹಂಚಿಕೆಯಲ್ಲಿ ತಾರ್ಯತಮ್ಯ ಆಗಿದೆ. ರೈತರ ಎಲ್ಲಾ ಕೃಷಿ ಜಮೀನಿನ ರಿ.ಸ.ನಂ. ಅನುಸಾರವಾಗಿ ಹಣ ಹಂಚಿಕೆ ಮಾಡಿದೆ ಕೇವಲ ಬೆರಳೆಣಿಕೆಯಷ್ಟು ರೈತರಿಗೆ ಹಣ ಸಂದಾಯ ಆಗಿರುತ್ತದೆ. ಎಲ್ಲಾ ಜಿಲ್ಲೆಗೆ ರೈತರ ರಿ.ಸ.ನಂ.ಗೆ ಹಣ ಸಂದಾಯ ಮಾಡಬೇಕು. ಬಿತ್ತಿದ ಬೆಳೆ ಹಾಳಾದ ರೈತರಿಗೆ ಹೆಚ್ಚಿನ ಹಣ ಸಂದಾಯ ಆಗಬೇಕು. ಆದರೆ ಕರ್ನಾಟಕ ರಾಜ್ಯಾದ್ಯಂತ ೨೩೬ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಬರಚಾಯೆ ಕಾಣಿಸಿಕೊಂಡಿದ್ದು ರೈತರ ಬದುಕು ಬಹಳ ಕಷ್ಟಕರ ಆಗಿರುತ್ತದೆ. ಗ್ರಾಮೀಣ ಪ್ರದೇಶದ ರೈತರು ಈಗಾಗಲೇ ಹೊಟ್ಟೆ ಪಾಡಿಗಾಗಿ ಗುಳೇ ಹೋಗುತ್ತಿದ್ದಾರೆ. ರೈತರ ಬದುಕು ಹಸನವಾಗಬೇಕಾದರೆ ರೈತರಿಗೆ ವೈಜ್ಞಾನಿಕ ಬರಪರಿಹಾರ ಸರಕಾರದಿಂದ ಹಂಚಿಕೆ ಆಗಬೇಕು. ಮತ್ತು ರೈತರ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇರುವ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು. ಮತ್ತು ಗ್ರಾಹಕರ ಆಹಾರ ಧಾನ್ಯಗಳಾದ ಬೆಲೆ ಪೇಟೆಯಲ್ಲಿ ಗಗನಕ್ಕೇರಿದೆ. ಹಾಲಿನ ದರ ಲೀಟರ್‌ಗೆ ೭೦ರೂ ಆಗಿದೆ, ಕೆ.ಜಿ. ತೊಗರಿ ಬೇಳೆ ಗೆ ೧೮೦ರೂ ಆಗಿದೆ, ಕೆ.ಜಿ. ಶೇಂಗಾ ಎಣ್ಣೆ ೨೮೦ರೂ ಆಗಿದೆ ಹೀಗೆ ಎಲ್ಲಾ ದಿನನಿತ್ಯ ಪದಾರ್ಥಗಳ ಬೆಲೆ ಬಂಗಾರಕ್ಕಿAತ ಹೆಚ್ಚಾಗುತ್ತಿದೆ. ದರ ನಿಯಂತ್ರಣ ಕಾಯ್ದೆ ದೇಶದಾದ್ಯಂತ ಉಲ್ಲಂಘನೆ ಆಗಿರುವುದರಿಂದ ಆಹಾರ ಧಾನ್ಯಗಳು ಬ್ಲಾಕ್ ಮಾರ್ಕೇಟ್‌ನಲ್ಲಿ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿವೆ. ಇದನ್ನು ಕಾನೂನುಬದ್ಧವಾಗಿ ನಿಯಂತ್ರಣ ಮಾಡದಿದ್ದರೆ ಜೂ.೨೭ ರಂದು ಬೆಂಗಳೂರು ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು. ಧರಣಿ ಸತ್ಯಾಗ್ರಹ ಜಾತಾ ಜೂ.೨೬ ರಂದು ಸಾಯಂಕಾಲ ೫ಕ್ಕೆ ಗದಗ-ಬೆಟಗೇರಿ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಹೋಗುವ ರೈಲ್ವೆ ಮುಖಾಂತರ ಬೆಂಗಳೂರಿಗೆ ತೆರಳಾಗುತ್ತದೆ ಎಂದು ಮನವಿ ಮೂಲಕ ಒತ್ತಾಯಿಸಿದರು.
    ಸಂಚಾಲಕ ಬಸವರಾಜ ನವಲಗುಂದ, ಬಸಪ್ಪ ವಡ್ಡರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts