More

    ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದರೆ ಸೋಲಾರ್ ಷೇರುಗಳಿಗೆ ಭರ್ಜರಿ ಡಿಮ್ಯಾಂಡು: ಈ 4 ಸ್ಟಾಕ್​ ಖರೀದಿಸಲು ತಜ್ಞರ ಸಲಹೆ

    ಮುಂಬೈ: ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ ಎಂದು ಬಹುತೇಕ ಟ್ರೆಂಡ್‌ಗಳು ಭವಿಷ್ಯ ನುಡಿದಿವೆ.

    ಎರಡನೇ ಅವಧಿಯ ಬಿಜೆಪಿ ಸರ್ಕಾರದ ಗಮನ ಸೌರಶಕ್ತಿಯ ಮೇಲೆ ಕೇಂದ್ರೀಕೃತವಾಗಿದೆ. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೌರ ಫಲಕಗಳಿಂದ ಚಾಲಿತ ಎಲ್ಲಾ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸಲು ವಾಗ್ದಾನ ಮಾಡಿದ ನಂತರ ಇತ್ತೀಚಿನ ವಾರಗಳಲ್ಲಿ ಭಾರತೀಯ ಸೌರ ಸ್ಟಾಕ್​ಗಳು ​​ಗಮನ ಸೆಳೆದಿವೆ. ಬಿಜೆಪಿಯ ಮೂರನೇ ಅವಧಿಯಲ್ಲಿ ಸೌರಶಕ್ತಿ ಯೋಜನೆಗಳು ಮತ್ತು ಸಂಬಂಧಿತ ಕಂಪನಿಗಳಿಗೆ ಉತ್ತೇಜನ ಸಿಗಬಹುದು.

    2024ರ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಂತರ ಸೌರಶಕ್ತಿಯನ್ನು ಹೆಚ್ಚಿಸಿದರೆ ಈ ನಾಲ್ಕು ಷೇರುಗಳ ಬೆಲೆ ಏರುವುದು ಖಚಿತ. ವಿಶ್ಲೇಷಕರು ಸೌರ ಶಕ್ತಿ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಅಂದಾಜು ಮಾಡುತ್ತಿದ್ದು, ಈ ಷೇರುಗಳನ್ನು ಖರೀದಿಸಲು ಸಲಹೆ ನೀಡುತ್ತಿದ್ದಾರೆ.

    1) ಟಾಟಾ ಪವರ್ ಕಂಪನಿ ಲಿಮಿಟೆಡ್​ (Tata Power Company Ltd):

    ಮುಂದಿನ ದಿನಗಳಲ್ಲಿ ಟಾಟಾ ಪವರ್ ಕಂಪನಿಯ ಷೇರುಗಳು ಉತ್ತಮ ಪ್ರದರ್ಶನ ನೀಡಬಹುದು. ಈ ಷೇರು ಈಗಾಗಲೇ ತನ್ನ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದೆ. ಈ ಸ್ಟಾಕ್ ಕಳೆದ ಆರು ತಿಂಗಳಲ್ಲಿ ಶೇಕಡಾ 88 ರಷ್ಟು ಏರಿಕೆಯನ್ನು ಕಂಡಿದೆ. ಟಾಟಾ ಪವರ್‌ನ ಷೇರುಗಳ ಬೆಲೆ ಸೌರಶಕ್ತಿಯ ಪ್ರಚಾರದ ವಾತಾವರಣದಲ್ಲಿ ಇನ್ನಷ್ಟು ಏರಿಕೆಯಾಗಬಹುದು.

    2) ಎನ್​ಟಿಪಿಸಿ ಲಿಮಿಟೆಡ್​ (NTPC Ltd.):

    ಭಾರತದಲ್ಲಿ ಅತ್ಯಂತ ಹಳೆಯ ಮತ್ತು ಪ್ರಸ್ತುತ ಅತಿದೊಡ್ಡ ವಿದ್ಯುತ್ ಉತ್ಪಾದಿಸುವ ಕಂಪನಿಗಳಲ್ಲಿ ಎನ್​ಟಿಪಿಸಿ ಒಂದಾಗಿದೆ. ಇದು 15 ಸೌರ ಪಿವಿ ಮತ್ತು 42 ಇತರ ಜಂಟಿ ಉದ್ಯಮ ವಿದ್ಯುತ್ ಕೇಂದ್ರಗಳು ಮತ್ತು 16 ಸೌರ ಪಿವಿ ಅಂಗಸಂಸ್ಥೆಗಳು ಸೇರಿದಂತೆ ಒಟ್ಟು 51 ವಿದ್ಯುತ್ ಕೇಂದ್ರಗಳನ್ನು ಹೊಂದಿದೆ.

    2032 ರ ವೇಳೆಗೆ ಸ್ಥಾಪಿತ ಸಾಮರ್ಥ್ಯವನ್ನು 130 GW ಗೆ ಹೆಚ್ಚಿಸುವ ಗುರಿಯನ್ನು ಎನ್​ಟಿಪಿಸಿ ಹೊಂದಿದೆ. ಇದು ಕಳೆದ ವರ್ಷ 21.16 ಶತಕೋಟಿ ಡಾಲರ್​ ಆದಾಯವನ್ನು ಗಳಿಸಿದೆ. 2020 ರಲ್ಲಿನ 15.52 ಶತಕೋಟಿ ಡಾಲರ್​ಗಿಂತ ಇದು ಗಮನಾರ್ಹವಾಗಿ ಹೆಚ್ಚಾಗಿದೆ.

    ಎನ್‌ಟಿಪಿಸಿಯ ಮಾರುಕಟ್ಟೆ ಮೌಲ್ಯ 3.52 ಲಕ್ಷ ಕೋಟಿ ರೂ. ಇದೆ. ಟ್ರೆಂಡ್‌ಲೈನ್ ಡೇಟಾ ಪ್ರಕಾರ, 19 ವಿಶ್ಲೇಷಕರು ಈ ಷೇರುಗಳನ್ನು ಖರೀದಿಸಲು ಸಲಹೆ ನೀಡುತ್ತಿದ್ದಾರೆ.

    3) ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್​ (Adani Green Energy Ltd):

    ಅದಾನಿ ಗ್ರೀನ್ ಷೇರುಗಳು ಸಹ ಆಕರ್ಷಕವಾಗಿವೆ. ಏಕೆಂದರೆ ಕಂಪನಿಯ ಆಡಳಿತವು ಕಂಪನಿಯ ಡೆಟ್​ ಟು ಇಕ್ವಿಟಿ ( ಸಾಲ- ಷೇರು) ಅನುಪಾತವನ್ನು ಗರಿಷ್ಠ 45 ರಿಂದ ಈಗ 9ಕ್ಕೆ ಇಳಿಸಿದೆ. ಅಂದರೆ, ಸಾಲ ಪ್ರಮಾಣವನ್ನು ಸಾಕಷ್ಟು ಕಡಿತಗೊಳಿಸಿದೆ.

    ಭಾರತೀಯ ನವೀಕರಿಸಬಹುದಾದ ಇಂಧನ ಕಂಪನಿಯು ಕಳೆದ ವರ್ಷ ತನ್ನ ಮಾರಾಟವನ್ನು ಅಂದಾಜು 52% ರಷ್ಟು ಹೆಚ್ಚಿಸಿದೆ, ಇದರ ನಿವ್ವಳ ಲಾಭವು 2023 ರಲ್ಲಿ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

    4) ಜೆಎಸ್​ಡಬ್ಲ್ಯು ಎನರ್ಜಿ ಲಿಮಿಟೆಡ್​ (JSW Energy Ltd):

    ಅನೇಕ ವಿಶ್ಲೇಷಕರು ಬಹಳ ಹಿಂದಿನಿಂದಲೂ 2024 ರಲ್ಲಿ JSW ಷೇರು ಖರೀದಿಸಲು ಶಿಫಾರಸು ಮಾಡುತ್ತಿದ್ದಾರೆ. ಇದು ಸೌರ ಶಕ್ತಿ ವಲಯದಲ್ಲಿ ಟಾಪ್ ಪಿಕ್ ಸ್ಟಾಕ್ ಎಂದು ಪರಿಗಣಿಸಲಾಗಿದೆ.

    ಭಾರತದ ಮಹಾರಾಷ್ಟ್ರ ಮೂಲದ 13 ಶತಕೋಟಿ ಡಾಲರ್​ನ ಈ​ ಕಂಪನಿಯು ಒಟ್ಟು 6,677 MW ಸಾಮರ್ಥ್ಯವನ್ನು ಹೊಂದಿದೆ. ಅದರಲ್ಲಿ ಸೌರಶಕ್ತಿ ಅಂದಾಜು 667 MW ಆಗಿದೆ. ಇದು ನವೀಕರಿಸಬಹುದಾದ ಶಕ್ತಿಯ ಬೆಳವಣಿಗೆಗೆ ಗಮನಾರ್ಹ ಕೊಡುಗೆಯನ್ನು ಸೂಚಿಸುತ್ತದೆ.

    JSW ಷೇರುಗಳು 2024 ಕ್ಕೆ ಉತ್ತಮ ಆಯ್ಕೆಯಾಗಿರಬಹುದು. ವಿಶೇಷವಾಗಿ ಅವರು ಉಷ್ಣ ವಿದ್ಯುತ್​ನಲ್ಲಿ ಸಹ ಹೂಡಿಕೆಗಳನ್ನು ಮಾಡುತ್ತಿದ್ದಾರೆ. ಜನವರಿಯಲ್ಲಿ, ಭಾರತೀಯ ವಿದ್ಯುತ್ ಕಂಪನಿಯು ತನ್ನ ಮೂರನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ 13% ಮತ್ತು ನಿವ್ವಳ ಲಾಭದಲ್ಲಿ 28% ಹೆಚ್ಚಳವನ್ನು ವರದಿ ಮಾಡಿದೆ.

    ಟ್ರೆಂಡ್‌ಲೈನ್ ಡೇಟಾ ಪ್ರಕಾರ, 5 ವಿಶ್ಲೇಷಕರು ಈ ಸ್ಟಾಕ್ ಅನ್ನು ಖರೀದಿಸಲು ಸಲಹೆ ನೀಡುತ್ತಿದ್ದಾರೆ.

    ರೂ. 1633 ಅಗ್ಗವಾಯ್ತು ಚಿನ್ನದ ಬೆಲೆ; ಬೆಳ್ಳಿ ದರ ಕೂಡ 3585 ರೂ. ಇಳಿಕೆ: ಬಂಗಾರದ ಬೆಲೆ ಕುಸಿತಕ್ಕೆ ಕಾರಣವೇನು?

    137 ರಿಂದ 19 ರೂಪಾಯಿಗೆ ಕುಸಿದ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ಹೂಡಿಕೆದಾರರು ಈಗ ಮುಗಿಬಿದ್ದು ಖರೀದಿಸುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts