More

    ಈ ಎರಡು ಬ್ಯಾಂಕ್​ಗಳ ಷೇರುಗಳಲ್ಲಿ 10 ಸಾವಿರ ಕೋಟಿ ರೂಪಾಯಿ ಹೂಡಿಕೆ: ಸ್ಟಾಕ್​ ಬೆಲೆ ಕುಸಿದಾಗ ಖರೀದಿಸುವ ಜಾಣತನ ತೋರುತ್ತಿವೆಯೇ ಎಂಎಫ್​ಗಳು?

    ಮುಂಬೈ: ಕಳೆದ ಕೆಲವು ದಿನಗಳಿಂದ ಷೇರು ಮಾರುಕಟ್ಟೆಯಲ್ಲಿ ಎರಡೂ ಬ್ಯಾಂಕಿಂಗ್ ದೈತ್ಯ ಕಂಪನಿಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಇದರ ಹೊರತಾಗಿಯೂ, ಮ್ಯೂಚುವಲ್ ಫಂಡ್‌ಗಳು (ಎಂಎಫ್) ಈ ಎರಡು ಬ್ಯಾಂಕ್‌ಗಳಲ್ಲಿ ದೊಡ್ಡ ಬೆಟ್ಟಿಂಗ್‌ಗಳನ್ನು ಹಾಕುವ ರಿಸ್ಕ್​ ತೆಗೆದುಕೊಂಡಿವೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಷೇರುಗಳು ಈ ವರ್ಷ ದೀಪಾವಳಿಯವರೆಗೆ ಮಿಂಚಬಹುದು ಮತ್ತು ರೂ. 1800 ಗುರಿಯನ್ನು ಮುಟ್ಟಬಹುದು ಎಂದು ಷೇರು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

    ಕಳೆದ ತಿಂಗಳು ಕೋಟಕ್ ಬ್ಯಾಂಕ್ ಷೇರುಗಳ ಶೇ. 9ರಷ್ಟು ಕುಸಿತದ ಲಾಭ ಪಡೆದು ಮ್ಯೂಚುವಲ್ ಫಂಡ್​ಗಳು 4.65 ಕೋಟಿ ಷೇರುಗಳನ್ನು ಖರೀದಿಸಿದ್ದು, ಇದರ ಮೇಲೆ ರೂ. 7884 ಕೋಟಿ ಹೂಡಿಕೆ ಮಾಡಲಾಗಿದೆ.

    ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಂದರ್ಭದಲ್ಲಿ, ಮ್ಯೂಚುವಲ್ ಫಂಡ್ 1.02 ಕೋಟಿ ಷೇರುಗಳನ್ನು ಖರೀದಿಸಿದೆ. ಇದರಲ್ಲಿ 1860 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಅವಧಿಯಲ್ಲಿ ಮ್ಯೂಚುವಲ್ ಫಂಡ್‌ಗಳು 1634 ಕೋಟಿ ರೂಪಾಯಿ ಮೌಲ್ಯದ ಎಸ್‌ಬಿಐ ಷೇರುಗಳನ್ನು ಮಾರಾಟ ಮಾಡಿವೆ. ಇದರೊಂದಿಗೆ, ಜಿಯೋ ಫೈನಾನ್ಷಿಯಲ್‌ನ 1271 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಾಗಿದೆ. ಮ್ಯೂಚುವಲ್ ಫಂಡ್‌ಗಳು ಬಜಾಜ್ ಫೈನಾನ್ಸ್‌ನಲ್ಲಿ 1140 ಕೋಟಿ ರೂಪಾಯಿಗಳನ್ನು ಖರೀದಿಸಿವೆ.

    ಕಳೆದ ಎರಡು-ಮೂರು ವರ್ಷಗಳಲ್ಲಿ ಅನೇಕ ನಕಾರಾತ್ಮಕ ಸುದ್ದಿಗಳಿಂದಾಗಿ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಷೇರುಗಳಲ್ಲಿ ಕುಸಿತ ಕಂಡುಬಂದಿದೆ. ಷೇರು ಮಾರುಕಟ್ಟೆಯಲ್ಲಿನ ಏರಿಳಿತಗಳ ನಡುವೆ, ಮ್ಯೂಚುವಲ್ ಫಂಡ್‌ಗಳು ಐಸಿಐಸಿಐ ಬ್ಯಾಂಕ್‌ನಲ್ಲಿ ಅಂತಹ ದೊಡ್ಡ ಬಾಜಿ ಕಟ್ಟಿಲ್ಲ. ಏಕೆಂದರೆ ಅದು ಈಗಾಗಲೇ ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿದೆ. ಕಷ್ಟಕರವಾದ ದೇಶೀಯ ಪರಿಸ್ಥಿತಿಗಳಲ್ಲಿ ಬರುತ್ತಿರುವ ನಕಾರಾತ್ಮಕ ಸುದ್ದಿಗಳಿಂದಾಗಿ, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಷೇರುಗಳ ಬೆಲೆ ಕುಸಿತ ಕಮಡಿವೆ ಎಂದು ಷೇರು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ, ಮ್ಯೂಚುವಲ್ ಫಂಡ್ ಮ್ಯಾನೇಜರ್‌ಗಳು ಈ ಎರಡೂ ಬ್ಯಾಂಕ್‌ಗಳ ಷೇರುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಉತ್ತಮ ಅವಕಾಶವನ್ನು ಹೊಂದಿದ್ದಾರೆ. ಕಳೆದ 3 ವರ್ಷಗಳಲ್ಲಿ, ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಷೇರುಗಳ ಬೆಲೆ ಅಂದಾಜು ಮೂರು ಪ್ರತಿಶತದಷ್ಟು ದುರ್ಬಲಗೊಂಡಿದೆ. ಇದೇ ವೇಳೆ, ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಬೆಲೆ ಕೇವಲ ನಾಲ್ಕು ಪ್ರತಿಶತದಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಶೇ. 50ರಷ್ಟು ಹೆಚ್ಚಳ ಕಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts