More

  ದೇಸಾಯಿ ಚಲನಚಿತ್ರ ತೆರೆಗೆ 21ಕ್ಕೆ

  ದಾವಣಗೆರೆ: ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್ ಫಿಲ್ಮ್ಸ್ ನಿರ್ಮಾಣದ ‘ದೇಸಾಯಿ’ ಚಲನಚಿತ್ರವು ಜೂ.21ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಮಹಾಂತೇಶ ವಿ. ಚೊಳಚಗುಡ್ಡ ಹೇಳಿದರು.
  ಕೌಟುಂಬಿಕ ಸಿನಿಮಾಗಳ ಕೊರತೆ ಕಾಡುತ್ತಿರುವ ಸಂದರ್ಭದಲ್ಲಿ ಮೂರು ತಲೆಮಾರಿನ ಸಾಂಸಾರಿಕ ಕಥಾ ಹಂದರದ ಸಿನಿಮಾ ನಿರ್ಮಿಸಲಾಗಿದ್ದು, ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
  ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಚಿತ್ರವನ್ನು ಬಾಗಲಕೋಟೆ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಜಯಪ್ರಕಾಶ್ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ ಎಂದರು.
  ನಾಗಿರೆಡ್ಡಿ ಚಿತ್ರವನ್ನು ನಿರ್ದೇಶಿಸಿದ್ದು, ಪಿಕೆಎಚ್ ದಾಸ್ ಛಾಯಾಗ್ರಹಣ, ಸಾಯಿ ಕಾರ್ತಿಕ್ ಸಂಗೀತ ನೀಡಿದ್ದಾರೆ. ಪ್ರವೀಣ್‌ಕುಮಾರ್, ರಾಧ್ಯ, ಒರಟ ಪ್ರಶಾಂತ್, ಚೆಲುವರಾಜ್, ಹರಿಣಿ ಇತರರು ತಾರಾಗಣದಲ್ಲಿದ್ದಾರೆ ಎಂದು ಹೇಳಿದರು.
  ರಾಜ್ಯದ ಸುಮಾರು 150 ಥೇಟರ್‌ಗಳಲ್ಲಿ ಚಿತ್ರವು ಬಿಡುಗಡೆಯಾಗಲಿದ್ದು, ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
  ಚಿತ್ರದ ನಾಯಕ ನಟ ಪ್ರವೀಣ್‌ಕುಮಾರ್, ಉಮಾ ವೀರಭದ್ರಪ್ಪ, ಪುರಂದರ್ ಲೋಕಿಕೆರೆ, ರಾಜಪ್ಪ, ಜಿ.ಬಿ.ಹಾವೇರಿ ಸುದ್ದಿಗೋಷ್ಠಿಯಲ್ಲಿದ್ದರು.

  See also  ಅಭಿವೃದ್ಧಿಗೆ ಅಂಕಿ ಅಂಶಗಳೇ ಅಡಿಪಾಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts