More

    ರೂ. 1633 ಅಗ್ಗವಾಯ್ತು ಚಿನ್ನದ ಬೆಲೆ; ಬೆಳ್ಳಿ ದರ ಕೂಡ 3585 ರೂ. ಇಳಿಕೆ: ಬಂಗಾರದ ಬೆಲೆ ಕುಸಿತಕ್ಕೆ ಕಾರಣವೇನು?

    ಮುಂಬೈ: ಮಂಗಳವಾರ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತಿದೆ. 24 ಕ್ಯಾರೆಟ್ ಚಿನ್ನವು 10 ಗ್ರಾಂಗೆ 410 ರೂಪಾಯಿಗಳಷ್ಟು ಅಗ್ಗವಾಗಿ 71963 ರೂಪಾಯಿಗಳಲ್ಲಿ ಪ್ರಾರಂಭವಾಯಿತು. ಬೆಳ್ಳಿ ಪ್ರತಿ ಕೆಜಿಗೆ ರೂ 1081 ರಷ್ಟು ಕಡಿಮೆಯಾಗಿ, ರೂ 80047 ದರದಲ್ಲಿ ಪ್ರಾರಂಭವಾಯಿತು. ಲಖನೌ, ದೆಹಲಿ, ಕಾನ್ಪುರ, ಕೋಲ್ಕತ್ತಾ, ಇಂದೋರ್, ಗೋರಖ್‌ಪುರ, ಅಹಮದಾಬಾದ್‌ನಿಂದ ಚೆನ್ನೈ ಮುಂತಾದೆಡೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಈ ಇಳಿಕೆಯಾಗಿದೆ.

    ಏಪ್ರಿಲ್ 19 ರಂದು ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 73596 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಈಗ ಚಿನ್ನ 1633 ರೂ.ಗಳಷ್ಟು ಅಗ್ಗವಾಗಿದೆ. ಆದರೆ, ಏಪ್ರಿಲ್ 16 ರಂದು ಸಾರ್ವಕಾಲಿಕ ಗರಿಷ್ಠ ಬೆಲೆಯಾದ 83632 ರೂ.ಗಳಿಗೆ ಹೋಲಿಸಿದರೆ ಪ್ರತಿ ಕೆಜಿಗೆ 3585 ರೂ.ಗಳಷ್ಟು ಬೆಳ್ಳಿ ಬೆಲೆ ಅಗ್ಗವಾಗಿದೆ.

    ಇಂಡಿಯನ್​ ಬುಲಿಯನ್​ ಆ್ಯಂಡ್​ ಜುವೆಲ್ಲರಿ ಅಸೋಸಿಯೇಷನ್​ (IBJA) ಮಂಗಳವಾರ ಬಿಡುಗಡೆ ಮಾಡಿದ ದರದ ಪ್ರಕಾರ, ಏಪ್ರಿಲ್ 30 ರಂದು, 23 ಕ್ಯಾರೆಟ್ ಚಿನ್ನವು 10 ಗ್ರಾಂಗೆ 408 ರೂ. ಅಗ್ಗವಾಗಿ 71675 ರೂ. ಆಗಿದೆ. 22 ಕ್ಯಾರೆಟ್ ಚಿನ್ನವು 10 ಗ್ರಾಂಗೆ 376 ರೂ. ಅಗ್ಗವಾಗಿ 65918 ರೂ ಮುಟ್ಟಿದೆ. 18 ಕ್ಯಾರೆಟ್ ಚಿನ್ನದ ದರ ಕೂಡ 308 ರೂಪಾಯಿ ಇಳಿಕೆಯಾಗಿ 53972 ರೂಪಾಯಿಗಳಿಗೆ ತಲುಪಿದೆ. 14 ಕ್ಯಾರೆಟ್ ಚಿನ್ನದ ಬೆಲೆ 241 ರೂಪಾಯಿ ಇಳಿಕೆಯಾಗಿ 42098 ರೂಪಾಯಿಗಳಿಗೆ ತಲುಪಿದೆ.

    ಚಿನ್ನ ಮತ್ತು ಬೆಳ್ಳಿಯ ಈ ದರಗಳನ್ನು IBJA ನೀಡುತ್ತದೆ. ಆದರೆ, ಇದರ ಮೇಲೆ ಜಿಎಸ್‌ಟಿ ಮತ್ತು ಆಭರಣ ತಯಾರಿಕೆ ಶುಲ್ಕ ಇರುವುದಿಲ್ಲ. ನಿಮ್ಮ ನಗರದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ 1000 ರಿಂದ 2000 ರೂಪಾಯಿಗಳ ವ್ಯತ್ಯಾಸವಿರಬಹುದು. ಮದುವೆ ಸೀಸನ್‌ ಕಳೆದ ಕೂಡಲೇ ಚಿನ್ನ, ಬೆಳ್ಳಿಯ ಬೆಲೆ ಕುಸಿದಿದೆ ಎಂಬುದು ಗಮನಾರ್ಹ.

    137 ರಿಂದ 19 ರೂಪಾಯಿಗೆ ಕುಸಿದ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ಹೂಡಿಕೆದಾರರು ಈಗ ಮುಗಿಬಿದ್ದು ಖರೀದಿಸುತ್ತಿರುವುದೇಕೆ?

    ಅಮೆರಿಕದ ಮಾರುಕಟ್ಟೆ ತಜ್ಞ ಮಾರ್ಕ್ ಮೊಬಿಯಸ್: ಈತ ಆಯ್ಕೆ ಮಾಡಿದ ಭಾರತೀಯ ಷೇರುಗಳು ಯಾವವು ಗೊತ್ತೆ?

    ದಾಖಲೆ ಬೆಲೆ ಮುಟ್ಟಿದ ಟಾಟಾ ಷೇರು: ಬೇಸಿಗೆ ಕಾಲದಲ್ಲಿ ಬೇಡಿಕೆಯಿಂದ ಇನ್ನಷ್ಟು ಏರಿಕೆಯ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts