More

    137 ರಿಂದ 19 ರೂಪಾಯಿಗೆ ಕುಸಿದ ಷೇರು ಅಪ್ಪರ್​ ಸರ್ಕ್ಯೂಟ್​ ಹಿಟ್​: ಹೂಡಿಕೆದಾರರು ಈಗ ಮುಗಿಬಿದ್ದು ಖರೀದಿಸುತ್ತಿರುವುದೇಕೆ?

    ಮುಂಬೈ: ವಿದ್ಯುತ್ ವಲಯಕ್ಕೆ ಸಂಬಂಧಿಸಿದ ಕಂಪನಿ- ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್ (ಜೆಪಿ ಪವರ್ Jaiprakash power Ltd.) ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ಲಾಭ ಹೆಚ್ಚಾಗಿದೆ. ತ್ರೈಮಾಸಿಕ ಫಲಿತಾಂಶಗಳ ಪ್ರಕಟಣೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಂಗಳವಾರ ಜೈಪ್ರಕಾಶ್ ಪವರ್ ಷೇರುಗಳ ಮೇಲೆ ಮುಗಿಬಿದ್ದರು. ವಾರದ ಎರಡನೇ ವಹಿವಾಟಿನ ದಿನದಲ್ಲಿ ಈ ಸ್ಟಾಕ್‌ ಬೆಲೆ 5% ಏರಿಕೆ ಕಂಡಿತು. ಈ ಮೂಲಕ ಅಪ್ಪರ್ ಸರ್ಕ್ಯೂಟ್ ಹಿಟ್​ ಆಗಿ ಈ ಷೇರಿನ ಬೆಲೆ 19.99 ರೂ.ಗೆ ತಲುಪಿತು.

    ಫೆಬ್ರವರಿ 12, 2024 ರಂದು ಈ ಷೇರಿನ ಬೆಲೆ ರೂ 23.99 ತಲುಪಿತ್ತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಮೇ 2023 ರಲ್ಲಿ ಈ ಷೇರಿನ ಬೆಲೆ 5.57 ರೂ. ತಲುಪಿತ್ತು. ಇದು ಈ ಷೇರಿನ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಈ ವಿದ್ಯುತ್ ಕಂಪನಿಯ ಷೇರುಗಳ ಬೆಲೆ ಜನವರಿ 4, 2008 ರಂದು 137 ರೂ. ಮುಟ್ಟಿತ್ತು. ಕಂಪನಿಯ ಷೇರುಗಳ ಬೆಲೆ ಮಾರ್ಚ್ 2020 ರಲ್ಲಿ ಶೇಕಡಾ 99 ಕ್ಕಿಂತ ಹೆಚ್ಚು ಕುಸಿದು 60 ಪೈಸೆ ತಲುಪಿತ್ತು.

    ನಷ್ಟದಿಂದ ಲಾಭದತ್ತ ಕಂಪನಿ:

    2024 ಮಾರ್ಚ್​ಗೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ಜೈಪ್ರಕಾಶ್ ಪವರ್ ವೆಂಚರ್ಸ್ ಲಿಮಿಟೆಡ್​ನ ಲಾಭ 588.79 ಕೋಟಿ ರೂ. ಆಗಿದೆ. ಕಂಪನಿಯ ಲಾಭವು ಮುಖ್ಯವಾಗಿ ಆದಾಯದ ಹೆಚ್ಚಳದಿಂದ ಬಂದಿದೆ. ಮಾರ್ಚ್ 31, 2023ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯು ರೂ 43.99 ಕೋಟಿ ನಷ್ಟವನ್ನು ಅನುಭವಿಸಿತ್ತು. ಮಾರ್ಚ್​ ತ್ರೈಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 1,863.63 ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2022-23 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಒಂದು ವರ್ಷದ ಹಿಂದಿನ ಅವಧಿಗೆ ಇದು 1,385.41 ಕೋಟಿ ರೂ. ಇತ್ತು. ಇದರ ನಿವ್ವಳ ಲಾಭವು 2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ 1,021.95 ಕೋಟಿ ರೂ. ಆಗಿದೆ. ಈ ಹಿಂದೆ 2022-23ರ ಹಣಕಾಸು ವರ್ಷದಲ್ಲಿ ಈ ಲಾಭವು 55.42 ಕೋಟಿ ರೂ. ಇತ್ತು. ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 7,151.29 ಕೋಟಿ ರೂ.ಗೆ ಏರಿಕೆಯಾಗಿದ್ದು, ಒಂದು ವರ್ಷದ ಹಿಂದೆ ಇದು 5,922.15 ಕೋಟಿ ರೂ. ಇತ್ತು.

    ದಾಖಲೆ ಬೆಲೆ ಮುಟ್ಟಿದ ಟಾಟಾ ಷೇರು: ಬೇಸಿಗೆ ಕಾಲದಲ್ಲಿ ಬೇಡಿಕೆಯಿಂದ ಇನ್ನಷ್ಟು ಏರಿಕೆಯ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts