ದೆಹಲಿಯಲ್ಲಿ ಮಳೆ ಪ್ರವಾಹ; ರಸ್ತೆಗಳೆಲ್ಲಾ ಜಲಾವೃತ, ಸಂಚಾರ ಸ್ಥಗಿತ, ನೀರಿನಲ್ಲಿ ಮುಳುಗಿದ ನೂರಾರು ಕಾರುಗಳು…

ನವ ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಬುಧವಾರ ಬೆಳಗ್ಗೆ ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗಿದೆ. ಇದರಿಂದಾಗಿ ದೆಹಲಿಯ ಹಲವು ಭಾಗಗಳು ಜಲಾವೃತಗೊಂಡಿವೆ. ರಸ್ತೆಗಳೆಲ್ಲ ಜಲಾವೃತವಾದ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ. ನೂರಾರು ಕಾರುಗಳು ನೀರಿನ ಮೇಲೆ ತೇಲುತ್ತಿವೆ. ಕಾರಿನ ಮೇಲ್ಭಾಗವನ್ನು ಹೊರತುಪಡಿಸಿ, ಏನೂ ಗೋಚರಿಸುವುದಿಲ್ಲ. ಇದರಿಂದ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮತ್ತೊಂದೆಡೆ ಯಮುನಾ ನದಿಯಲ್ಲಿ … Continue reading ದೆಹಲಿಯಲ್ಲಿ ಮಳೆ ಪ್ರವಾಹ; ರಸ್ತೆಗಳೆಲ್ಲಾ ಜಲಾವೃತ, ಸಂಚಾರ ಸ್ಥಗಿತ, ನೀರಿನಲ್ಲಿ ಮುಳುಗಿದ ನೂರಾರು ಕಾರುಗಳು…