More

    ಉಡುಪಿಯ ಟಾಯ್ಲೆಟ್​ ಪ್ರಕರಣದ ಬಗ್ಗೆ ಮಹಿಳಾ ಆಯೋಗದ ಮುಖ್ಯಸ್ಥೆ ಹೇಳಿದ್ದೇನು? ಎತ್ತ ಸಾಗುತ್ತಿದೆ ವಿವಾದ?

    ಉಡುಪಿ: ಕೆಲ ದಿನಗಳ ಹಿಂದೆ ಉಡುಪಿ ಕಾಲೇಜಿನಲ್ಲಿ ಟಾಯ್ಲೆಟ್​ನಲ್ಲಿ ಹಿಂದೂ ವಿದ್ಯಾರ್ಥಿನಿಯ ವಿಡಿಯೋ ರೆಕಾರ್ಡ್ ಮಾಡಿರುವ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. ಈ ಕುರಿತಾಗಿ ರಾಜ್ಯ ನಾಯಕರೂ ಮಾತಿಗೆ ಮಾತು ಬೆಳೆಸಿರುವುದು ಸುಳ್ಳಲ್ಲ.

    ಈ ಪ್ರಕರಣದ ಹಿನ್ನೆಲೆಯಲ್ಲಿ, ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ. ಅದರೊಂದಿಗೆ ಉಡುಪಿಗೆ ನಿನ್ನೆ ರಾಷ್ಟ್ರೀಯ ಮಹಿಳಾ ಆಯೋಗವೂ ಎಂಟ್ರಿ ಕೊಟ್ಟಿದ್ದು, ಪ್ರಕರಣದ ತನಿಖೆ ಇನ್ನಷ್ಟು ತೀವ್ರಗೊಂಡಿದೆ.

    ಇದನ್ನೂ ಓದಿ: Kushboo Briefs About Udupi College Case Investigation | ಉಡುಪಿ ಕಾಲೇಜ್​ ಕೇಸ್​ ವಿಚಾರಣೆ ಬಗ್ಗೆ ಖುಷ್ಬೂ ಡೀಟೇಲ್ಸ್​​…

    ಈಗಾಗಲೇ ಪೊಲೀಸರ ವಶಕ್ಕೆ ಕಾಲೇಜು ಆಡಳಿತ ಮಂಡಳಿ, ಮೂರು ಮೊಬೈಲ್​ಗಳನ್ನು ನೀಡಿದ್ದು ಮೊಬೈಲ್ ಜಾಲಡಿದರೂ ಇನ್ನೂ ಏನು ಪತ್ತೆಯಾಗಿಲ್ಲ. ಹೀಗಾಗಿ ಮೊಬೈಲ್​ಗಳನ್ನು ಹೆಚ್ಚಿನ ಬೆಂಗಳೂರು ಎಫ್​​ಎಸ್​​​ಎಲ್​ಗೆ ಉಡುಪಿ ಪೊಲೀಸರು ಕಳುಹಿಸಲಿದ್ದಾರೆ. ಅಲ್ಲಿ ಮೊಬೈಲ್​ನಲ್ಲಿ ದಾಖಲಾಗಿರುವ ಎಲ್ಲಾ ವಿಡಿಯೋ ಚಿತ್ರಗಳನ್ನು ಪೊಲೀಸರು ರಿಟ್ರೈವ್ ಮಾಡಲಿದ್ದಾರೆ.

    ಉಡುಪಿ ಪೊಲೀಸರು ಈವರೆಗೂ ಆರೋಪಿತ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸದೇ ಇದ್ದು ಗುರುವಾರ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆರೋಪಿತ ವಿದ್ಯಾರ್ಥಿನಿಯರ ಚಲನ ವಲನ ಗಮನಿಸಲು ಕಾಲೇಜಿನ ಸಿಸಿ ಟಿವಿ ಪುಟೇಜ್​ಅನ್ನು ಪೊಲೀಸರು ಸಂಗ್ರಹಿಸಲಿದ್ದಾರೆ.

    ಮಹಿಳಾ ಆಯೋಗದ ಮುಖ್ಯಸ್ತೆ ಏನು ಮಾಡಲಿದ್ದಾರೆ?

    ಇಂದು ಕಾಲೇಜು ಆಡಳಿತ ಮಂಡಳಿ ಜತೆ ಖುಷ್ಬು ಮಾತುಕತೆ ನಡೆಸಲಿದ್ದು ಕಾಲೇಜಿಗೆ ರಜೆ ನೀಡಲಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭೇಟಿ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಉಡುಪಿಯಲ್ಲೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ತಂಗಲಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದಿಂದ ತನಿಖೆ ನಡೆಸಲು ಶುರು ಮಾಡಿದ್ದು, ನೇತ್ರ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

    ಇದನ್ನೂ ಓದಿ: ಉಡುಪಿ ಹಾಸ್ಟೆಲ್​ ಟಾಯ್ಲೆಟ್​​ನಲ್ಲಿ ವಿಡಿಯೋ ಪ್ರಕರಣ: ಡಿಸಿ-ಎಸ್​ಪಿ ಜತೆ ಖುಷ್​ಬೂ ಸುದೀರ್ಘ ಸಭೆ ಮುಕ್ತಾಯ; ಇಲ್ಲಿದೆ ವಿವರ..

    ಖುಷ್ಬೂ ಸುಂದರ್​ ಹೇಳಿದ್ದೇನು? ಮಹಿಳಾ ಆಯೋಗದ ಮುಖ್ಯಸ್ಥೆ ಪ್ರಕಾರ ಪ್ರಕರಣ ಯಾವ ಕಡೆಗೆ ತೆರಳುತ್ತಿದೆ?

    ಈ ಕುರಿತಾಗಿ ಹೇಳಿಕೆ ನೀಡಿದ ಖುಷ್ಬೂ ಸುಂದರ್, “ನಮ್ಮ ತನಿಖೆ ಜಾರಿಯಲ್ಲಿದೆ. ಇನ್ನು ಕೂಡ ತನಿಖೆ ಪೂರ್ಣಗೊಂಡಿಲ್ಲ. ಕಾಲೇಜಿಗೆ ಭೇಟಿ ನೀಡಿ ಮತ್ತಷ್ಟು ಮಾಹಿತಿ ಸಂಗ್ರಹಿಸಬೇಕು. ವಿದ್ಯಾರ್ಥಿನಿಯರ ಜತೆಗೂ ನಾನು ಮಾತನಾಡಬೇಕು. ಇನ್ನೂ ಸಾಕಷ್ಟು ಮಾಹಿತಿ ಸಂಗ್ರಹ ಆಗುವುದು ಬಾಕಿ ಇದೆ. ಪೊಲೀಸರ ಒಂದು ಭೇಟಿಯಿಂದ ಎಲ್ಲಾ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅವರು ತಕ್ಷಣವೇ ಇದರ ಫಲಿತಾಂಶ ಸಿಗಬೇಕು ಎಂದು ಬಯಸುತ್ತಾರೆ.

    ಇದನ್ನೂ ಓದಿ: ವಿಡಿಯೋ ಕಾಲ್​ ಮಾಡಿ ಅಶ್ಲೀಲ ದೃಶ್ಯ ತೋರಿಸಿ ಶಾಸಕರಿಗೇ ಬೆದರಿಕೆ! ಇಬ್ಬರ ಬಂಧನ

    ಸರಕಾರ ಮತ್ತು ಕಾನೂನಿಗೆ ಅನುಗುಣವಾಗಿ ನಾವು ಕೆಲಸ ಮಾಡಬೇಕಿದೆ. ಕಾನೂನು ಮತ್ತು ಸುವ್ಯವಸ್ಥೆ ನಮಗೆ ಮುಖ್ಯ. ಅದಕ್ಕೆ ಸರಿಯಾಗಿ ನಮ್ಮ ತನಿಖೆ ಇರುತ್ತೆ. ಹುಡುಗಿಯ ಸೇಫ್ಟಿಯೂ ನಮಗೆ ಮುಖ್ಯ. ಈ ತರದ ಪ್ರಕರಣಗಳು ಹುಡುಗಿಯರನ್ನು ಖಿನ್ನಗೊಳಿಸುತ್ತದೆ. ಹುಡುಗಿ ನಾರ್ಮಲ್ ಆಗಿರಬೇಕು. ಅವರು ಮಾನಸಿಕ ಒತ್ತಡಕ್ಕೆ ಬರಬಾರದು.

    ಇದನ್ನೂ ಓದಿ: Bommai Reacts On Udupi College Case | ಉಡುಪಿ ಕಾಲೇಜ್​​ ಪ್ರಕರಣದ ಬಗ್ಗೆ ಬೊಮ್ಮಾಯಿ ಹೇಳಿದ್ದೇನು?

    ಪ್ರಕರಣದ ಕುರಿತಾಗಿ ಎಲ್ಲಿಯಾದರೂ ಸಾಕ್ಷಿ ಇದೆಯಾ? ಸಾಕ್ಷಿ ಇಲ್ಲದೆ ಪ್ರಕರಣ ದಾಖಲೆ ಮಾಡುವುದು ಹೇಗೆ.? ವಿಡಿಯೋ ಯಾರಾದ್ರೂ ನೋಡಿದರಾ. ಸಂತ್ರಸ್ತ ಯುವತಿ ಕಾಲೇಜಿಗೆ ಲಿಖಿತವಾಗಿ “ಇಲ್ಲೇ ಈ ವಿಚಾರವನ್ನು ಮುಗಿಸಿ ಬಿಡಿ” ಎಂದು ಕೊಟ್ಟಿದ್ದಾಳೆ. ನನಗೆ ದೂರು ಕೊಡುವುದೇ ಇಷ್ಟವಿಲ್ಲ ಎಂದು ಹುಡುಗಿ ಹೇಳಿರುವುದರಿಂದ ಈ ಪ್ರಕರಣ ಇಲ್ಲಿಗೆ ಮುಗಿಸಬೇಕು ಎಂಬುದು ಆಕೆಯ ಬಯಕೆ

    ನನ್ನ ಬಳಿ ಎಲ್ಲ ವಿವರ ಇದೆ ನಾನು ಯಾವುದೇ ವರದಿಯನ್ನು ನಿರಾಕರಿಸಲು ಬಂದಿಲ್ಲ. ಅದಕ್ಕಾಗಿ ಎರಡು ಗಂಟೆ ಪೊಲೀಸರ ಜತೆ ಸಮಾಲೋಚನೆ ನಡೆಸಿದ್ದೇನೆ. ದಯವಿಟ್ಟು ಕಾನೂನನ್ನು ಅರ್ಥ ಮಾಡಿಕೊಳ್ಳಿ, ಜನರ ಪರ ಮಾತನಾಡಿದರೆ ಸಾಲೋದಿಲ್ಲ. ಸಂವಿಧಾನಾತ್ಮಕ ಕಾನೂನುಗಳಿವೆ ಅದಕ್ಕೆ ಅನುಗುಣವಾಗಿ ನಾವು ಕೆಲಸ ಮಾಡಬೇಕು. ಪೊಲೀಸರು ಅವರ ಕರ್ತವ್ಯ ಮಾಡುತ್ತಿದ್ದಾರೆ. ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಅನಗತ್ಯವಾದ ಫೇಕ್ ಸುದ್ದಿಗಳು, ಫೇಕ್ ವಾಟ್ಸಪ್​ಗಳು, ಫೇಕ್ ವಿಡಿಯೋಗಳು ಇವೆ” ಎಂದು ಹೇಳಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts