More

  ಉಡುಪಿ ಹಾಸ್ಟೆಲ್​ ಟಾಯ್ಲೆಟ್​​ನಲ್ಲಿ ವಿಡಿಯೋ ಪ್ರಕರಣ: ಡಿಸಿ-ಎಸ್​ಪಿ ಜತೆ ಖುಷ್​ಬೂ ಸುದೀರ್ಘ ಸಭೆ ಮುಕ್ತಾಯ; ಇಲ್ಲಿದೆ ವಿವರ..

  ಉಡುಪಿ: ಕಾಲೇಜಿನ ಹಾಸ್ಟೆಲ್​ವೊಂದರ ಟಾಯ್ಲೆಟ್​ನಲ್ಲಿ ವಿದ್ಯಾರ್ಥಿನಿಯರೇ ಕ್ಯಾಮರಾ ಇಟ್ಟು ಇತರ ವಿದ್ಯಾರ್ಥಿನಿಯರ ವೀಡಿಯೊ ಮಾಡಿದ್ದ ಪ್ರಕರಣ ದೇಶದ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್​ಬೂ ಇಂದು ಉಡುಪಿಗೆ ಆಗಮಿಸಿದ್ದರು.

  ಖುಷ್​ಬೂ ಇಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಜತೆ ಸುಮಾರು ಒಂದೂವರೆ ಗಂಟೆಗಳ ಸುದೀರ್ಘ ಸಭೆ ನಡೆಸಿದ್ದಾರೆ. ಈಗಷ್ಟೇ ಸಭೆ ಮುಕ್ತಾಯಗೊಂಡಿದ್ದು, ಅಲ್ಲಿನ ಮಾತುಕತೆ ಇತ್ಯಾದಿ ವಿವರ ಇಲ್ಲಿದೆ.

  ಈ ಪ್ರಕರಣ ಇಷ್ಟೊಂದು ವೈರಲ್ ಆಗಲು ಕಾರಣವೇನು ಎನ್ನುವುದರ ಬಗ್ಗೆ ಗಮನ ಹರಿಸಬೇಕು. ಅನೇಕ ಸಂಗತಿಗಳ ತನಿಖೆ ಆಗಬೇಕಾಗಿದೆ, ಪೂರಕ ಸಾಕ್ಷಿಗಳ ಸಂಗ್ರಹ ಮಾಡಬೇಕಾಗಿದೆ. ನಾಳೆ ನಾನು ಕಾಲೇಜಿಗೆ ಭೇಟಿಯಾಗಿ ಆಡಳಿತ ಮಂಡಳಿಯ ಜೊತೆ ಮಾತನಾಡಬೇಕಿದೆ, ಆ ಬಳಿಕ ಘಟನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಖುಷ್​ಬೂ ಹೇಳಿದರು.

  ಉಡುಪಿಯ ಈ ಘಟನೆಯನ್ನು ಇಟ್ಟುಕೊಂಡು ಅನೇಕ ಫೇಕ್ ವೀಡಿಯೊಗಳು ಹರಿದಾಡುತ್ತಿವೆ. ಆ ವೀಡಿಯೊಗಳಲ್ಲಿ ಯಾವುದೂ ಸತ್ಯವಲ್ಲ. ಇವರಿಗೆ ಯಾವುದೇ ವೀಡಿಯೊ ಸಾಕ್ಷ್ಯ ಲಭ್ಯವಾಗಿಲ್ಲ. ವಿದ್ಯಾರ್ಥಿನಿಯರ ಮೊಬೈಲ್​ಫೋನ್​ನಲ್ಲಿ ಯಾವುದೇ ವಿಡಿಯೋ ಕಂಡು ಬಂದಿಲ್ಲ. ಸಂಬಂಧಪಟ್ಟ ಮೊಬೈಲ್​ಫೋನ್​ಗಳನ್ನು ಪೊಲೀಸರು 40 ಗಂಟೆಗಳ ಕಾಲ ರಿಟ್ರೀವ್ ಮಾಡಿದ್ದರೂ ಏನೂ ಪತ್ತೆಯಾಗಿಲ್ಲ ಎಂದು ಖುಷ್​ಬೂ ಹೇಳಿದ್ದಾರೆ.

  ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

  ಮೂರು ಮೊಬೈಲ್​​ಫೋನ್​ಗಳ ಡೇಟಾ ಸಂಗ್ರಹಿಸಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್​​ಫೋನ್​ ಕಳುಹಿಸಬೇಕಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಬಗ್ಗೆ ಸ್ಷಷ್ಟತೆ ಸಿಗಬಹುದು. ಸೂಕ್ತ ಸಾಕ್ಷ್ಯ ಸಿಗದೇ ಹೋದರೆ ಚಾರ್ಜ್​​ಶೀಟ್ ಮಾಡಲು ಸಾಧ್ಯವಿಲ್ಲ. ಸಾಕ್ಷ್ಯವಿಲ್ಲದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದ್ಯ ಆ ವಿದ್ಯಾರ್ಥಿನಿಯರನ್ನು ನಾವು ಆರೋಪಿಗಳು ಎನ್ನಬಹುದು ಅಷ್ಟೇ. ಈ ಪ್ರಕರಣದಲ್ಲಿ ಭಾಗಿಯಾದ ಆ ಮೂರು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದೆ ಎಂದರು.

  ಈ ಪ್ರಕರಣಕ್ಕೆ ಟೆರರ್ ಲಿಂಕ್ ಇದೆ ಎಂದು ವಾಟ್ಸ್​ಆ್ಯಪ್​ ಸಂದೇಶಗಳು ಹರಿದಾಡುತ್ತಿವೆ. ಪ್ರಕರಣದ ಹಿಂದೆ ಅನೇಕ ಸಂಶಯಾಸ್ಪದ ಸಂಗತಿಗಳನ್ನು ಹರಿಯಬಿಡಲಾಗಿದೆ. ಘಟನೆಯ ಹಿಂದೆ ಭಾರಿ ವಿಷಯ ಇದೆ ಎಂದು ಸದ್ಯ ಭಾವಿಸುವುದು ಬೇಡ. ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಅಗತ್ಯವಿಲ್ಲ. ಮಹಿಳಾ ಆಯೋಗ ಮತ್ತು ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಎಳೆಯ ಮನಸ್ಸುಗಳು ಒಳಗೊಂಡಿವೆ. ಸರಿಯಾದ ಹಾದಿಯಲ್ಲಿ ಪ್ರಕರಣದ ತನಿಖೆ ಆಗಬೇಕು. ತನಿಖೆಗೆ ಮೊದಲೇ ಯಾವುದೇ ತೀರ್ಮಾನಕ್ಕೆ ಬರುವುದು ಬೇಡ ಎಂದರು.

  ಇದನ್ನೂ ಓದಿ: ಯಾರೂ ಸಾವಿಗೀಡಾಗದಿರಲಿ ಎಂದು ಜನರನ್ನು ಸೇರಿಸಿ ಮೃತ್ಯುಂಜಯ ಜಪ ಮಾಡಿಸಿದ ವ್ಯಕ್ತಿ ಮೇಲೆ ಕೇಸ್​ ದಾಖಲು!

  ಮಹಿಳಾ ಆಯೋಗ ಪ್ರತಿಭಟನೆ ಮಾಡಲು ಇರುವ ಸಂಸ್ಥೆಯೆಲ್ಲ. ಮಹಿಳಾ ಆಯೋಗ ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಲು ಬಂದಿಲ್ಲ. ನಮ್ಮದು ಮಹಿಳೆಯರ ರಕ್ಷಣೆಗೆ ಇರುವ ಸಂಸ್ಥೆ, ಯಾವುದೇ ರಾಜಕೀಯ ಒತ್ತಡವಿಲ್ಲದೆ, ಕೋಮು ಪ್ರಭಾವವಿಲ್ಲದೆ ತನಿಖೆ ನಡೆಸುತ್ತೇವೆ. ಯಾವುದೇ ಒಂದು ನಿರ್ದಿಷ್ಟ ಕೋಮಿನ ಮಹಿಳೆಯ ರಕ್ಷಣೆಗೆ ನಾವು ಬಂದಿಲ್ಲ. ದಯವಿಟ್ಟು ಈ ಪ್ರಕರಣಕ್ಕೆ ಯಾವುದೇ ಕೋಮು ಬಣ್ಣ ಬಳಿಯಬೇಡಿ ಎಂದು ಖುಷ್​ಬೂ ಕೋರಿಕೊಂಡರು.

  ಇದನ್ನೂ ಓದಿ: ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

  ಸಂತ್ರಸ್ತೆ ದೂರು ಕೊಟ್ಟಿಲ್ಲ, ತಾನು ದೂರ ನೀಡಲು ಬಯಸುವುದಿಲ್ಲ ಎಂದು ಸಂತ್ರಸ್ತೆ ಪತ್ರದ ಮೂಲಕ ಹೇಳಿದ್ದಾರೆ. ಕಾಲೇಜು ಆಡಳಿತ ಮಂಡಳಿ ಸುದ್ದಿಗೋಷ್ಠಿ ನಂತರ ಪ್ರಕರಣ ದಾಖಲಿಸಿದ್ದಾರೆ. ವಿಡಿಯೋ ಇತ್ತು ಮತ್ತು ಅದನ್ನು ನಾವು ಡಿಲೀಟ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ವಿಡಿಯೋ ಡಿಲೀಟ್ ಆಗಿದೆ ಎಂಬ ವಿಚಾರ ಬೆಳಕಿಗೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ. ಯಾವುದೇ ಸುಳಿವು ಇಲ್ಲದೆ ಪೊಲೀಸರು ಪ್ರಕರಣ ದಾಖಲಿಸುವುದು ಹೇಗೆ? ಹಿಂದೆ ನಿಂತು ಪೊಲೀಸರನ್ನು ದೂರುವುದು ಸುಲಭ. ಪೊಲೀಸರು ತನಿಖೆ ಆರಂಭಿಸಿದ್ದಾರೆ, ಅವರಿಗೆ ಸ್ವಾತಂತ್ರ್ಯ ನೀಡಬೇಕು. ಪ್ರಕರಣದ ತನಿಖೆಯಲ್ಲಿ ವಿಳಂಬವಾದರೆ ಮಹಿಳಾ ಆಯೋಗ ಕ್ರಮ ಕೈಗೊಳ್ಳುತ್ತದೆ. ಸದ್ಯ ನಾವು ಸುಮೋಟೋ ಪ್ರಕರಣ ದಾಖಲಿಸಲು ನಿರ್ಧರಿಸಿಲ್ಲ. ಮಾಹಿತಿ ಸಂಗ್ರಹದ ಬಳಿಕ ನಿರ್ಧಾರ ತಿಳಿಸುತ್ತೇವೆ ಎಂದೂ ಹೇಳಿದರು.

  ಟಿಕೆಟ್ ತೆಗೆದುಕೊಳ್ಳಲು ಹೇಳಿದ್ದಕ್ಕೆ ಕಂಡಕ್ಟರ್​ ಹತ್ತಿರ ಜಗಳವಾಡಿದ ಯುವತಿ; ಕೇಂದ್ರ ಸರ್ಕಾರಿ ಉದ್ಯೋಗಿ ಎಂದು ರಂಪ

  ‘ಎಲ್ಲರಿಗಿಂತ ಬೆಳ್ಳಗಿದ್ದಾಳೆ’ ಎಂದು ಯುವತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ಕಂಪನಿ!

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts