More

    ‘ಎಲ್ಲರಿಗಿಂತ ಬೆಳ್ಳಗಿದ್ದಾಳೆ’ ಎಂದು ಯುವತಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ಕಂಪನಿ!

    ಬೆಂಗಳೂರು: ನೋಡಲು ತೆಳ್ಳಗೆ, ಬೆಳ್ಳಗೆ, ಚೆನ್ನಾಗಿರಬೇಕು ಎಂದು ಕೆಲವೊಂದು ಉದ್ಯೋಗ ನೀಡುವಾಗ ಪರಿಗಣಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬಳು ಯುವತಿಯನ್ನು ಎಲ್ಲರಿಗಿಂತ ಬೆಳ್ಳಗಿದ್ದಾಳೆ ಎಂಬ ಕಾರಣಕ್ಕೆ ಉದ್ಯೋಗಕ್ಕೆ ತೆಗೆದುಕೊಳ್ಳಲು ಕಂಪನಿಯೊಂದು ನಿರಾಕರಿಸಿದೆ.

    ಈ ಕುರಿತು ಆ ಯುವತಿಯೇ ಲಿಂಕ್ಡ್​ಇನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾಳೆ. ಪ್ರತೀಕ್ಷಾ ಜಿಚ್ಕರ್ ಎಂಬ ಈಕೆ ನಾನು ಸಂದರ್ಶನದ ಅಂತಿಮ ಸುತ್ತಿಗೆ ಬಂದಿದ್ದು, ಅವರ ಟೀಮ್​ನಲ್ಲಿನ ಎಲ್ಲರಿಗಿಂತ ಬೆಳ್ಳಗಿದ್ದೇನೆ ಎಂಬ ಕಾರಣಕ್ಕೆ ನನಗೆ ಉದ್ಯೋಗ ನಿರಾಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾಳೆ.

    ಮೂರು ಸುತ್ತಿನ ಸಂದರ್ಶನ ನಡೆದು, ಒಂದು ಸುತ್ತಿನ ಅಸೈನ್​ಮೆಂಟ್ ಕೂಡ ಆಗಿ, ಎಲ್ಲ ಅಗತ್ಯ ಕೌಶಲ, ಅರ್ಹತೆ ಹಾಗೂ ಅನುಭವ ಇದ್ದರೂ ನಾನು ಅಲ್ಲಿನ ಕೆಲಸಕ್ಕೆ ಯೋಗ್ಯಳಾಗಿಲ್ಲವಂತೆ. ಈಗ ಅಲ್ಲಿ ಕೆಲಸದಲ್ಲಿರುವ ಟೀಮ್​ನಲ್ಲಿನ ಎಲ್ಲರಿಗಿಂತ ನಾನು ಬೆಳ್ಳಗಿದ್ದೇನೆ ಎಂಬುದೇ ಅದಕ್ಕೆ ಕಾರಣವಂತೆ ಎಂಬುದಾಗಿ ಈಕೆ ಹೇಳಿಕೊಂಡಿದ್ದಾಳೆ.

    ನಾವು ಎಂಥ ಜಗತ್ತಿನಲ್ಲಿದ್ದೇವೆ ಎಂದು ನಾನು ಆಘಾತಕ್ಕೆ ಒಳಗಾಗಿದ್ದೇನೆ. ಬಣ್ಣ, ಜಾತಿ, ಧರ್ಮ ಇತ್ಯಾದಿಗಳಿಂದ ಮನುಷ್ಯರನ್ನು ನಿರ್ಧರಿಸುವ ಪರಿಸ್ಥಿತಿ ಬಗ್ಗೆ ಈಕೆ ಬೇಸರ ವ್ಯಕ್ತಪಡಿಸಿರುವ ಈಕೆ, ಆ ಕಂಪನಿಯಿಂದ ಬಂದಿರುವ ಮೇಲ್​ನ ಸ್ಕ್ರೀನ್​ಶಾಟ್ ಕೂಡ ಹಂಚಿಕೊಂಡಿದ್ದಾಳೆ.

    ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts