ಪಾಕ್​ಗೆ ತೆರಳಿದ ಭಾರತದ ಅಂಜು ಇನ್ಮುಂದೆ ಫಾತಿಮಾ: ಮತಾಂತರಗೊಂಡು ನಸ್ರುಲ್ಲಾನನ್ನು ಮದ್ವೆಯಾದ ವಿವಾಹಿತೆ!

ನವದೆಹಲಿ: ಫೇಸ್​ಬುಕ್​ ಗೆಳೆಯ ನಸ್ರುಲ್ಲಾನನ್ನು ನೋಡಲೆಂದು ಪಾಕಿಸ್ತಾನಕ್ಕೆ ತೆರಳಿದ್ದ ವಿವಾಹಿತೆ ಅಂಜು ಕೊನೆಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆತನನ್ನೇ ಮದುವೆಯಾಗಿದ್ದಾಳೆ. ಮಾತ್ರವಲ್ಲ, ಆಕೆ ತನ್ನ ಹೆಸರನ್ನು ಫಾತಿಮಾ ಎಂಬುದಾಗಿ ಬದಲಿಸಿಕೊಂಡಿದ್ದಾಳೆ.

34 ವರ್ಷದ ಅಂಜು ಫೇಸ್​ಬುಕ್​ನಲ್ಲಿ ಪರಿಚಿತನಾಗಿ ಸ್ನೇಹಿತನಾದ 29 ವರ್ಷದ ನಸ್ರುಲ್ಲಾನನ್ನು ಭೇಟಿಯಾಗಲೆಂದು ಪಾಕಿಸ್ತಾನಕ್ಕೆ ತೆರಳಿದ್ದಳು. ಒಂದು ತಿಂಗಳಮಟ್ಟಿಗೆ ಗೆಳೆಯನನ್ನು ನೋಡಲು ಹೋಗಿದ್ದು, ಮದುವೆಯಾಗುವ ಉದ್ದೇಶವಿಲ್ಲ ಎಂದು ಅವರಿಬ್ಬರು ಹೇಳಿದ್ದು ಸುದ್ದಿಯಾಗಿತ್ತು. ಆದರೆ ಕ್ರೈಸ್ತ ಧರ್ಮೀಯಳಾದ ಈಕೆ ಮತಾಂತರಗೊಂಡು ಫಾತಿಮಾ ಆಗಿ ಇಂದು ನಸ್ರುಲ್ಲಾನನ್ನೇ ಮದುವೆಯಾಗಿದ್ದಾಳೆ. ಸದ್ಯದಲ್ಲೇ ಇಬ್ಬರೂ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಫೇಸ್​ಬುಕ್​ ಫ್ರೆಂಡ್​ಗಾಗಿ ಪಾಕಿಸ್ತಾನಕ್ಕೆ ಪರಾರಿಯಾದ ಅಂಜುವಿನ ಅಸಲಿ ಕತೆ ಬಿಚ್ಚಿಟ್ಟ ತಂದೆ ಥಾಮಸ್​!

ಅಂಜು ಉತ್ತರ ಪ್ರದೇಶದ ಕೈಲೋರ್​ ಗ್ರಾಮದಲ್ಲಿ ಜನಿಸಿದ್ದು, ರಾಜಸ್ಥಾನದ ಅಲ್ವಾರ್​ನಲ್ಲಿ ವಾಸವಿದ್ದಳು. ಅಂಜು ಮತ್ತು ಪಾಕಿಸ್ತಾನದ ನಸ್ರುಲ್ಲಾ 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಪರಿಚಯ ಪ್ರೀತಿಗೆ ತಿರುಗಿ, ಅಂಜು ನಸ್ರುಲ್ಲಾನನ್ನು ಭೇಟಿಯಾಗಲು ಅಧಿಕೃತ ಪಾಕಿಸ್ತಾನ ವೀಸಾದಿಂದ ಪಾಕಿಸ್ತಾನದ ಖೈಬರ್​ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಅಪ್ಪರ್​ ದೀರ್​ ಜಿಲ್ಲೆಯ ಕುಗ್ರಾಮವೊಂದಕ್ಕೆ ತೆರಳಿದ್ದಳು. ಇಬ್ಬರಿಗೂ ಮದುವೆಯಾಗುವ ಉದ್ದೇಶವಿಲ್ಲ ಎಂದು ಈ ಮೊದಲು ಹೇಳಲಾಗಿತ್ತಾದರೂ ಈಗ ಇಬ್ಬರೂ ಮದುವೆಯಾಗಿದ್ದಾರೆ.

ಇದನ್ನೂ ಓದಿ: VIDEO | ಸೀಟ್​​ಗಾಗಿ ‘ಶಕ್ತಿ’ ಪ್ರಯೋಗ: ಬಸ್​​ನೊಳಗೇ ಜಡೆ ಹಿಡಿದು ಜಗಳವಾಡಿದ ಮಹಿಳೆಯರು!

ಅಂಜು ಇಸ್ಲಾಮ್​ಗೆ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಿಸಿಕೊಂಡು ನಸ್ರುಲ್ಲಾನನ್ನು ಮದುವೆ ಆಗಿರುವುದಾಗಿ ಪಾಕಿಸ್ತಾನದ ದೀರ್​ನ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಂಜುಗೆ ಅರವಿಂದ ಎಂಬಾತನೊಂದಿಗೆ ಈ ಮೊದಲೇ ಮದುವೆಯಾಗಿದ್ದು, ಈ ದಂಪತಿಗೆ 15 ವರ್ಷದ ಮಗಳು ಹಾಗೂ 6 ವರ್ಷದ ಮಗನಿದ್ದಾನೆ. ಜೈಪುರಕ್ಕೆ ಹೋಗಿ ಬರುವುದಾಗಿ ಪತಿ ಬಳಿ ಹೇಳಿ ಹೊರಟಿದ್ದ ಅಂಜು, ಬಳಿಕ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಳು.

ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

Share This Article

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…