ನವದೆಹಲಿ: ತಂತ್ರಜ್ಞಾನದ ಅತ್ಯಾಧುನಿಕತೆ ಕುರಿತು ಮಾತುಗಳು ಉತ್ಪ್ರೇಕ್ಷೆಗೆ ತಲುಪಿದಾಗೆಲ್ಲ ‘ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬಂದರೂ ಅಚ್ಚರಿ ಇಲ್ಲ’ ಎನ್ನುವ ಮಾತೊಂದನ್ನು ಅಲ್ಲಿ ಇಲ್ಲಿ ಕೇಳಿರುತ್ತೇವೆ. ಅಂಥ ಕಾಲ ಬರುತ್ತದೋ ಇಲ್ಲವೋ.. ಈಗಲೇ ಆ ಕುರಿತು ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಆದರೆ ಅಪ್ಪ-ಅಮ್ಮ ಇಲ್ಲದೆ ಮಕ್ಕಳನ್ನು ಹುಟ್ಟಿಸುವ ಪ್ರಯತ್ನವೊಂದು ಈ ಮಧ್ಯೆ ನಡೆಯುತ್ತಿದೆ.
ಇಲ್ಲಿ ಮಗು ಹುಟ್ಟಲು ಎರಡು ದೇಹಗಳ ಸಮಾಗಮ ಆಗಬೇಕಾಗಿಲ್ಲ. ಅಷ್ಟಕ್ಕೂ ಇಲ್ಲಿ ಅಪ್ಪ-ಅಮ್ಮನೇ ಬೇಕಾಗಿಲ್ಲ. ಒಂದೇ ಒಂದು ಕೋಶದಿಂದ ಮಗುವನ್ನು ಸೃಷ್ಟಿಸುವಂಥ ಪ್ರಯತ್ನ ನಡೆಯುತ್ತಿದ್ದು, ಇದು ಸಾಧ್ಯವಾದರೆ ಇಲ್ಲಿ ಹುಟ್ಟುವ ಪ್ರತಿ ಮಗುವಿಗೂ ವಿಜ್ಞಾನಿಗಳೇ ತಂದೆ-ತಾಯಿ!
ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಇನ್ವಿಟ್ರೊ ಗೆಮೆಟೊಜೆನಿಸಿಸ್ (ಐವಿಜಿ) ಎಂದು ಕರೆಯಲಾಗುವ ಈ ತಂತ್ರಜ್ಞಾನದ ಮೂಲಕ ಗಂಡು-ಹೆಣ್ಣಿನ ಅಗತ್ಯವೇ ಇರದೆ ಮಗುವನ್ನು ಹುಟ್ಟಿಸುವ ಪ್ರಯತ್ನವೊಂದಕ್ಕೆ ಕಂಪನಿಯೊಂದು ಮುಂದಾಗಿದೆ. ಕ್ಯಾಲಿಫೋರ್ನಿಯಾದ ಸ್ಟಾರ್ಟಪ್ ಆಗಿರುವ, ಕಾನ್ಸೆಪ್ಷನ್ ಎಂಬ ಬಯೋಟೆಕ್ ಕಂಪನಿಯೊಂದು ಇಂಥ ಪ್ರಯತ್ನದಲ್ಲಿದೆ.
ಇದನ್ನೂ ಓದಿ: ರಾತ್ರಿ ಲೈಟ್ ಆನ್ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?
ಯಾರದ್ದೇ ದೇಹದ ಯಾವುದೇ ಭಾಗದಿಂದ ಜೀವಕೋಶವನ್ನು ಪಡೆದು ಅದರಿಂದ ಕೃತಕವಾಗಿ ಅಂಡಾಣು ಹಾಗೂ ವೀರ್ಯಾಣು ಎರಡನ್ನೂ ಸೃಷ್ಟಿಸಿ ಪ್ರಯೋಗಾಲಯದಲ್ಲೇ ಮಗುವನ್ನು ಹುಟ್ಟಿಸುವಂಥ ಪ್ರಯತ್ನಕ್ಕೆ ಈ ಕಂಪನಿ ಮುಂದಾಗಿದೆ. ಇದು ಸಾಧ್ಯವಾದರೆ ಮಕ್ಕಳಿಲ್ಲದ ದಂಪತಿಗೆ ಇದು ವರವಾಗಿ ಪರಿಣಮಿಸಲಿದೆ ಎನ್ನಲಾಗುತ್ತಿದೆ. ಮಾತ್ರವಲ್ಲ ತೃತೀಯಲಿಂಗಿ ದಂಪತಿ, ತಮ್ಮನ್ನು ತಾವೇ ಮದುವೆಯಾಗುವಂಥ ವಿಚಿತ್ರ ವ್ಯಕ್ತಿಗಳಿಗೂ ಇದು ಮಕ್ಕಳನ್ನು ಪಡೆಯಲು ನೆರವಾಗುತ್ತದೆ.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?
ಸದ್ಯ ಇಬ್ಬರು ಜೈವಿಕ ತಂದೆಯರಿಂದ ಇಲಿಯನ್ನು ಹುಟ್ಟಿಸುವಲ್ಲಿ ಈ ತಂತ್ರಜ್ಞಾನ ಯಶಸ್ವಿಯಾಗಿದ್ದು, ಮಾನವರಲ್ಲಿ ಇದನ್ನು ಅಳವಡಿಸುವ ಕುರಿತ ಸಂಶೋಧನೆಗಳು ನಡೆಯುತ್ತಿವೆ, ಅದಕ್ಕೆ ಕೆಲವು ವರ್ಷಗಳೇ ಬೇಕಾಗುತ್ತವೆ ಎಂದು ಕಾನ್ಸೆಪ್ಷನ್ ಸಂಸ್ಥೆಯ ಸಹ ಸಂಸ್ಥಾಪಕ ಮ್ಯಾಟ್ ಕ್ರಿಸಿಲಾಫ್ ಹೇಳಿದ್ದಾರೆ.
ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!
ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?