More

    ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?

    ಬೆಂಗಳೂರು: ರಾತ್ರಿ ಮಲಗುವ ಮುನ್ನ ಲೈಟ್​ ಆಫ್​ ಮಾಡುವುದು ಎಲ್ಲರ ಮನೆಯಲ್ಲೂ ಇರುವ ಪದ್ಧತಿ. ಅದರಲ್ಲೂ ಮಕ್ಕಳು ಮಲಗುವ ಮುನ್ನ ಅವರ ಬಳಿ ‘ಲೈಟ್​ ಆಫ್ ಮಾಡು’ ಎಂದು ಹಿರಿಯರು ಹೇಳುವುದು ಕೂಡ ಸರ್ವೇಸಾಮಾನ್ಯ.

    ಹೀಗೆ ಹೇಳುವುದಕ್ಕೆ ಇರುವ ಪ್ರಮುಖ ಕಾರಣಗಳಲ್ಲಿ ವಿದ್ಯುತ್ ಪೋಲಾಗಬಾರದು ಎಂಬುದು ಕೂಡ ಒಂದಾಗಿದ್ದರೂ, ಇತರ ಕಾರಣಗಳು ಕೂಡ ಇವೆ. ಅದಾಗ್ಯೂ ಕೆಲವರ ಕೋಣೆಯಲ್ಲಿ ರಾತ್ರಿ ಮಲಗಿದ್ದಾಗಲೂ ಲೈಟ್ ಉರಿಯುತ್ತಿರುತ್ತದೆ. ಹಾಗೆ ಲೈಟ್ ಆನ್ ಇಟ್ಟುಕೊಂಡೇ ಮಲಗಿದರೆ ಏನಾಗುತ್ತದೆ ಎಂಬ ಬಗ್ಗೆ ಪರಿಣತರು ಒಂದಷ್ಟು ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

    ಲೈಟ್ ಆನ್ ಇಟ್ಟುಕೊಂಡು ಮಲಗುವುದರಿಂದ ನಿದ್ರೆಯ ಗುಣಮಟ್ಟ ಕಡಿಮೆ ಆಗುವುದಷ್ಟೇ ಅಲ್ಲದೆ ಅದು ಒಟ್ಟಾರೆ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೃತಕ ಬೆಳಕಿಗೆ ಒಡ್ಡಿಕೊಳ್ಳುವುದು, ವಿಶೇಷವಾಗಿ ಮೊಬೈಲ್​​ಫೋನ್​, ಲ್ಯಾಪ್​ಟಾಪ್ ಮುಂತಾದ ಕೆಲವು ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಕೆಲವು ರೀತಿಯ ಬಲ್ಬ್​ಗಳು ಹೊರಸೂಸುವ ಪ್ರಕಾಶಮಾನ ಅಥವಾ ನೀಲಿ ಬೆಳಕು ದೇಹದ ಸಹಜ ನಿದ್ರೆಯ ಲಯಕ್ಕೆ ಅಡ್ಡಿ ಆಗಬಹುದು.

    ಇದನ್ನೂ ಓದಿ: ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ಸಿರ್ಕಾಡಿಯನ್ ರಿದಮ್ ಎಂದು ಕರೆಯಲ್ಪಡುವ ನಿದ್ರೆಯ ಲಯ ಮೆಲಟೋನಿನ್ ಹಾರ್ಮೋನ್ ಬಿಡುಗಡೆಯಿಂದ ನಿಯಂತ್ರಿಸಲ್ಪಡುತ್ತದೆ. ಅಷ್ಟಕ್ಕೂ ಈ ಹಾರ್ಮೋನ್​ ಬೆಳಕಿನಿಂದ ನಿಗ್ರಹಿಸಲ್ಪಡುತ್ತದೆ. ಅದಾಗ್ಯೂ ಈ ರಿದಮ್​ನಲ್ಲಿನ ಏರುಪೇರು ಬೊಜ್ಜು, ಮಧುಮೇಹ, ಹೃದಯರಕ್ತನಾಳದ ಕಾಯಿಲೆಗಳು ಮತ್ತು ಕೆಲವು ರೀತಿಯ ಕ್ಯಾನ್ಸರ್ ಸಾಧ್ಯತೆಯನ್ನು ಅಧಿಕಗೊಳಿಸುತ್ತದೆ. ಆದರೆ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದೆ.

    ಲೈಟ್​ ಆನ್ ಮಾಡಿ ಮಲಗುವುದು ಖಿನ್ನತೆ ಮತ್ತು ಆತಂಕಕ್ಕೂ ಕಾರಣವಾಗಬಹುದು. ಬೆಳಕಿನ ಕಾರಣಕ್ಕೆ ಸರಿಯಾದ ನಿದ್ರೆ ಆಗದ್ದರಿಂದ ನ್ಯೂರೋಟ್ರಾನ್ಸ್​​ಮಿಟರ್ ಸಮತೋಲನಕ್ಕೂ ಅಡ್ಡಿ ಆಗುವ ಜತೆಗೆ ಭಾವನಾತ್ಮಕ ನಿಯಂತ್ರಣದ ಮೇಲೆ ಪರಿಣಾಮ ಬೀರಬಹುದು, ಇದು ಮಾನಸಿಕ ಅನಾರೋಗ್ಯಗಳಿಗೂ ಕಾರಣವಾಗಬಹುದು ಎಂದು ಹೇಳಲಾಗಿದೆ.

    ಇದನ್ನೂ ಓದಿ: ರಾತ್ರಿ ಪಾಳಿಯಲ್ಲಿ ನಿದ್ರಿಸುತ್ತಿದ್ದ ಪೊಲೀಸರಿಬ್ಬರ ಅಮಾನತು!

    ಮಂದ ಬೆಳಕು ಸಹ ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದರ ಪರಿಣಾಮವಾಗಿ ಗಾಢವಲ್ಲದ, ಕಡಿಮೆ ಆರ್​​ಇಎಂ (ರಾಪಿಡ್ ಐ ಮೂವ್​ಮೆಂಟ್​) ನಿದ್ರೆ ಮತ್ತು ಒಟ್ಟಾರೆ ಕಡಿಮೆ ವಿಶ್ರಾಂತಿಯ ನಿದ್ರೆಯ ಅನುಭವವಾಗುತ್ತದೆ.

    ರಾತ್ರಿ ಲೈಟ್​ ಆನ್​ ಇರಿಸಿಕೊಂಡು ನಿದ್ರೆ ಮಾಡುವುದರಿಂದ ಆಯಾಸ, ದಣಿವು ಮತ್ತು ಹಗಲಿನಲ್ಲಿ ಕಡಿಮೆ ಮಾನಸಿಕವಾಗಿ ಸದೃಢತೆ ಉಂಟುಮಾಡಬಹುದು. ರಾತ್ರಿಯಲ್ಲಿ ದೀರ್ಘಕಾಲದವರೆಗೆ ಬೆಳಕಿಗೆ ಒಡ್ಡಿಕೊಳ್ಳುವುದು ನಿದ್ರಾಹೀನತೆಯಂಥ ನಿದ್ರೆಗೆ ಸಂಬಂಧಿತ ಅಸ್ವಸ್ಥತೆಗಳನ್ನು ಉಂಟಾಗಿಸುವ ಸಾಧ್ಯತೆಯೂ ಅಧಿಕ. ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಮೆದುಳು ನಿದ್ರೆಗೆ ಅಣಿಯಾಗಲು ವಿಳಂಬವಾಗಬಹುದು ಎಂದೂ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ. –ಏಜೆನ್ಸೀಸ್

    ಪತಿಯ ಕಣ್ಣಿಗೆ ಕಾರದ ಪುಡಿ ಎರಚಿ, ಪತ್ನಿಯನ್ನು ಹೊತ್ತೊಯ್ದರು: ಪ್ರೇಮವಿವಾಹವಾದ ಒಂದೇ ತಿಂಗಳಲ್ಲಿ ದಂಪತಿಗೆ ಆಪತ್ತು

    ಈ ದಿನಾಂಕದೊಳಗೆ ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದರೆ ಮಾತ್ರ ಆಗಸ್ಟ್​ನಲ್ಲಿನ ವಿದ್ಯುತ್ ಬಿಲ್​ ಶೂನ್ಯ; ವಿವರ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts