More

    ಈ ದಿನಾಂಕದೊಳಗೆ ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದರೆ ಮಾತ್ರ ಆಗಸ್ಟ್​ನಲ್ಲಿನ ವಿದ್ಯುತ್ ಬಿಲ್​ ಶೂನ್ಯ; ವಿವರ ಇಲ್ಲಿದೆ…

    ಬೆಂಗಳೂರು: ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಪ್ರತಿ ಮನೆಗೆ ಮಾಸಿಕ 200 ಯುನಿಟ್ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಇದೇ ತಿಂಗಳಿನಿಂದ ಜಾರಿಗೆ ಬಂದಿದೆ. ಅಂದರೆ 200 ಯುನಿಟ್​ ಒಳಗೆ ವಿದ್ಯುತ್​ ಬಳಸಿದವರು ಆಗಸ್ಟ್​​ ತಿಂಗಳಲ್ಲಿ ವಿದ್ಯುತ್ ಬಿಲ್ ಪಾವತಿಸುವ ಅಗತ್ಯ ಇರುವುದಿಲ್ಲ.

    ಅದಾಗ್ಯೂ ಕೆಲವರು ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ. ಏಕೆಂದರೆ ಗೃಹಜ್ಯೋತಿ ಯೋಜನೆಯ ಫಲಾನುಭವಿ ಆಗಬೇಕಾದರೆ ನೋಂದಣಿ ಕಡ್ಡಾಯವಾಗಿದ್ದು, ಒಂದು ವೇಳೆ ನೋಂದಣಿ ಮಾಡಿಕೊಳ್ಳದಿದ್ದರೆ ಅಂಥವರನ್ನು ಯೋಜನೆಯ ಫಲಾನುಭವಿ ಎಂದು ಪರಿಗಣಿಸುವುದಿಲ್ಲ ಎಂದು ಈಗಾಗಲೇ ಹೇಳಲಾಗಿದೆ.

    ಇದನ್ನೂ ಓದಿ: ಆ ‘ಜ್ಯೋತಿ’ ಇದೆ ಎಂದು ಗೃಹಜ್ಯೋತಿ ನೋಂದಣಿ ಕಡೆಗಣಿಸಬೇಡಿ!; ಇಲ್ಲಿದೆ ವಿವರ ಗಮನಿಸಿ..

    ಹೀಗಾಗಿ ಗೃಹಜ್ಯೋತಿ ಯೋಜನೆ ಸಂಬಂಧ ಮೊದಲ ತಿಂಗಳಿನಿಂದಲೇ ಪ್ರಯೋಜನ ಪಡೆಯಬೇಕಾದರೆ ಈ ಜುಲೈನಲ್ಲೇ ನೋಂದಣಿ ಮಾಡಿಸಿಕೊಂಡಿರಬೇಕಾಗುತ್ತದೆ. ಈ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಇಂದು ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

    ಗೃಹಜ್ಯೋತಿ ನೋಂದಣಿಗೆ ಕೊನೆಯ ದಿನಾಂಕ ಇಲ್ಲವಾದರೂ ಆಗಸ್ಟ್ ತಿಂಗಳಲ್ಲಿ ಶೂನ್ಯ ಬಿಲ್ ಪಡೆಯಬೇಕಾದರೆ ನಿಗದಿತ ಅವಧಿಗೂ ಮೊದಲೇ ನೋಂದಣಿ ಮಾಡಿಸಿಕೊಂಡಿರಬೇಕು. ಅಂದರೆ ಜುಲೈ 26 ಅಥವಾ 27ರ ಒಳಗೆ ನೋಂದಣಿ ಮಾಡಿಸಿಕೊಂಡಿದ್ದರೆ ಮಾತ್ರ ಆಗಸ್ಟ್​ನಲ್ಲಿ ಶೂನ್ಯ ಬಿಲ್ ಬರಲಿದೆ. ಇಲ್ಲವಾದಲ್ಲಿ ಎಂದಿನಂತೆ ಬಿಲ್ ಬರಲಿದ್ದು, ಸಾರ್ವಜನಿಕರು ಅದನ್ನು ಪಾವತಿಸುವುದು ಅನಿವಾರ್ಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

    ಗೃಹಜ್ಯೋತಿ ನೋಂದಣಿಗೆ ಈ ಲಿಂಕ್ ಬಳಸಿ: https://sevasindhugs.karnataka.gov.in

    ಗೃಹಜ್ಯೋತಿ ನೋಂದಣಿ ಸ್ಟೇಟಸ್​ ಪರೀಕ್ಷಿಸಿಕೊಳ್ಳಲು ಈ ಲಿಂಕ್ ಬಳಸಿ: https://sevasindhu.karnataka.gov.in/statucTrack/Track_Status

     

    ಅಂತ್ಯಸಂಸ್ಕಾರದ ಬಳಿಕ ವಾಗ್ವಾದ: ಆಕೆಯ ಸಾವಿಗೆ ಕಾರಣ ಹೊಟ್ಟೆನೋವೋ, ಆತನೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts