ಬೆಂಗಳೂರು: ತಂದೆ-ತಾಯಿಯರಿಂದ ತನ್ನನ್ನು ದೂರ ಮಾಡಿದ್ದಕ್ಕೆ ಪತ್ನಿಯಿಂದ ದೂರವಾಗಲು ನಿರ್ಧರಿಸಿದ್ದಲ್ಲದೆ ಆಕೆಯನ್ನು ಕೊಲೆ ಮಾಡಿಸಲಿಕ್ಕೂ ಪತಿ ಪ್ರಯತ್ನ ಮಾಡಿದ ಪ್ರಕರಣವೊಂದು ನಡೆದಿದೆ. ಆದರೆ ಎಲ್ಲವೂ ಅಂದುಕೊಂಡಂತೆಯೇ ಆಗದ್ದರಿಂದ ಆರು ತಿಂಗಳ ಬಳಿಕ ಸಂಕಷ್ಟ ಎದುರಾಗಿದೆ.
ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅರವಿಂದ ಹಾಗೂ ಉದಯಕುಮಾರ್ ಬಂಧಿತರು. ಅರವಿಂದ ಹಾಗೂ ಚೈತನ್ಯ ಎಂಬ ದಂಪತಿಗೆ ಸಂಬಂಧಿತ ಪ್ರಕರಣ ಇದಾಗಿದೆ. ಅರವಿಂದ ಒಂದೂವರೆ ವರ್ಷದ ಹಿಂದೆ ಚೈತನ್ಯಳನ್ನು ಮದುವೆಯಾಗಿದ್ದ.
ಇದನ್ನೂ ಓದಿ: ನಾಳೆ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ; ಈ ಸಂಭ್ರಮದಲ್ಲಿ ಇದೇ ಮೊದಲ ಸಲ ಸಿಎಂ ಉಪಸ್ಥಿತಿ!
ಮದುವೆ ಬಳಿಕ ಅರವಿಂದ ತನ್ನ ತಂದೆ-ತಾಯಿಯಿಂದ ಬೇರೆ ಆಗುವಂತಾಗಿತ್ತು. ಇದೇ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ತಂದೆ-ತಾಯಿಯಿಂದ ಬೇರೆ ಮಾಡಿದ್ದಕ್ಕೆ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದ. ಆದರೆ ಪತಿಯನ್ನು ತೀವ್ರವಾಗಿ ಪ್ರೀತಿಸುತ್ತಿದ್ದ ಚೈತನ್ಯ ವಿಚ್ಛೇದನ ಕೊಡಲು ಸಿದ್ಧಳಿರಲಿಲ್ಲ.
ಇದನ್ನೂ ಓದಿ: ಯಂಗ್ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?
ಹೀಗಾಗಿ ಜಗಳವಾಡಿ ತನ್ನನ್ನು ತಂದೆ-ತಾಯಿಯಿಂದ ದೂರ ಆಗುವಂತೆ ಮಾಡಿದ ಪತ್ನಿಯನ್ನು ಉಳಿಸಬಾರದು ಎಂದು ನಿರ್ಧರಿಸಿದ್ದ ಅರವಿಂದ, ಪತ್ನಿಯನ್ನೇ ಕೊಲೆ ಮಾಡಿಸಲು ತೀರ್ಮಾನಿಸಿದ್ದ. ಅದಕ್ಕಾಗಿ ಹಳೆಯದೊಂದು ಟಾಟಾ ಸುಮೋ ಖರೀದಿಸಿ, ಅದಕ್ಕೊಬ್ಬ ಚಾಲಕನನ್ನೂ ನೇಮಿಸಿದ್ದ. ಉದಯಕುಮಾರ್ ಎಂಬ ಆ ಚಾಲಕನಿಗೆ ಅಪಘಾತವಾದ ರೀತಿಯಲ್ಲಿ ಪತ್ನಿಯನ್ನು ಕೊಲೆ ಮಾಡಿಸುವಂತೆ ಹೇಳಿದ್ದ.
ಇದನ್ನೂ ಓದಿ: ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?
ಅರವಿಂದ್ ಸೂಚನೆಯಂತೆ ಉದಯ್ಕುಮಾರ್ ಸಿಸಿಟಿವಿ ಇರದಂಥ ಜಾಗವೊಂದನ್ನು ಗುರುತಿಸಿ ಅಲ್ಲಿ ಚೈತನ್ಯಳನ್ನು ಆ್ಯಕ್ಸಿಡೆಂಟ್ ಮಾದರಿಯಲ್ಲಿ ಕೊಲೆ ಮಾಡಲು ಯತ್ನಿಸುತ್ತಾನೆ. ಆದರೆ ಆಕೆ ಸಣ್ಣಪುಟ್ಟ ಗಾಯಗಳಿಂದಾಗಿ ಬದುಕುಳಿಯುತ್ತಾಳೆ. ಈ ಸಂಬಂಧ ಅಪಘಾತ ಪ್ರಕರಣ ದಾಖಲಾದ್ದರಿಂದ, ಪೊಲೀಸರು ಕಾರು ಪತ್ತೆಗೆ ಮುಂದಾಗಿದ್ದರು. ಆಗ ಉದಯಕುಮಾರ್ ಜಾಡು ಪತ್ತೆ ಮಾಡಿದ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ನಿಜಾಂಶ ಬಯಲಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!