More

    ಪತ್ನಿ ತಂದ ವರದಕ್ಷಿಣೆಯಲ್ಲಿ ಪತಿಗೆ ಹಕ್ಕಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

    ದೆಹಲಿ: ಪತ್ನಿಯ ವರದಕ್ಷಿಣೆಯ ಮೇಲೆ ಪತಿಗೆ ಯಾವುದೇ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ. ಸಂಕಷ್ಟದ ಸಮಯದಲ್ಲಿ ಅದನ್ನು ಬಳಸಿದರೂ ಅದನ್ನು ಹೆಂಡತಿಗೆ ಹಿಂತಿರುಗಿಸಬೇಕು. ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಪೀಠ ಮಹಿಳೆ ಕಳೆದುಕೊಂಡ ಚಿನ್ನಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿದೆ.

    ಇದನ್ನೂ ಓದಿ: ‘ಲಂಚವಿಲ್ಲದೇ ಬಂಗಾಳದಲ್ಲಿ ಏನೂ ಆಗುವುದಿಲ್ಲ’: ಮಮತಾ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಕೇರಳದ ಮಹಿಳೆಯೊಬ್ಬರು ತಮ್ಮ ತಂದೆ-ತಾಯಿ ಕೊಟ್ಟ 89 ಗ್ರಾಂ ಚಿನ್ನವನ್ನು ಪತಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

    ಮದುವೆಯಾದ ಮೊದಲ ರಾತ್ರಿಯೇ ಪತಿ ತನ್ನ ಎಲ್ಲಾ ಆಭರಣಗಳನ್ನು ತೆಗೆದುಕೊಂಡು ಆತನ ತಾಯಿಗೆ ಹಸ್ತಾಂತರಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು.

    ಚಿನ್ನವನ್ನು ಈಗಾಗಲೇ ಕುಟುಂಬದ ಸಾಲ ತೀರಿಸಲು ಬಳಸಲಾಗಿದೆ. ಚಿನ್ನದ ಬಗ್ಗೆ ಕೇಳಿದರೆ ಪತಿ ಮತ್ತು ಆತನ ಚಿಕ್ಕಮ್ಮ ಬೆದರಿಕೆ ಹಾಕುತ್ತಿದ್ದಾರೆ ಎಂದು ಮಹಿಳೆ ಮತ್ತು ಆಕೆಯ ಪಾಲಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಪತಿ ಮಾಡಿದ್ದು ತಪ್ಪು ಎಂದು ತೀರ್ಪು ನೀಡಿತ್ತು.

    ಈ ತೀರ್ಪು ಪ್ರಶ್ನಿಸಿ ಆಕೆಯ ಪತಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದ. ಹೈಕೋರ್ಟ್ ಪತಿ ಪರ ತೀರ್ಪು ನೀಡಿತ್ತು. ಆಭರಣಗಳನ್ನು ಪತಿ ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿಲ್ಲ ಎಂದು ಪತ್ನಿ ಅರ್ಜಿಯನ್ನು ವಜಾಗೊಳಿಸಿತ್ತು. ಪತ್ನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಳು.

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿತು.

    ಹೋಟೆಲ್​ಗಳಿಗೆ ಉಂಡೇನಾಮ ಹಾಕ್ತಿದ್ದ ಖತರ್​ನಾಕ್​ ದಂಪತಿ ಅರೆಸ್ಟ್​! ಊಟದ ಬಿಲ್ ಎಷ್ಟು ಲಕ್ಷ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts