More

    ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

    ನವದೆಹಲಿ: ಸಾಕಷ್ಟು ಸಂಗತಿ-ಸಾಧನೆಗಳು ಗಿನ್ನೆಸ್​ ರೆಕಾರ್ಡ್ಸ್​​ನಲ್ಲಿ ದಾಖಲಾಗುತ್ತವೆ. ಅವುಗಳಲ್ಲಿ ಸಾಮಾನ್ಯವಾಗಿ ಹಲವು ಸಾರ್ವಜನಿಕವಾಗಿ ಅಂಥ ಪ್ರಯೋಜನಕ್ಕೆ ಬರದಂಥವೂ ಇರುತ್ತವೆ. ಆದರೆ ಇಲ್ಲೊಬ್ಬಳು ತಾಯಿಯ ಗಿನ್ನೆಸ್​ ದಾಖಲೆ ಆಕೆಯನ್ನು ಮಹಾತಾಯಿ ಎಂದು ಕರೆಯುವಂತೆ ಮಾಡಿದೆ.

    ಎರಡು ಮಕ್ಕಳ ತಾಯಿ ಆಗಿರುವ ಈಕೆ ಅವಧಿಪೂರ್ವವಾಗಿ ಜನಿಸಿದ ಸಾವಿರಾರು ಶಿಶುಗಳಿಗಾಗಿ ಎದೆಹಾಲು ನೀಡುವ ಮೂಲಕ ಮಹಾತಾಯಿ ಎನಿಸಿಕೊಂಡಿದ್ದಾರೆ. ಮಾತ್ರವಲ್ಲ, ಹೀಗೆ ಎದೆಹಾಲು ನೀಡಿದ್ದಕ್ಕೇ ಗಿನ್ನೆಸ್ ದಾಖಲೆಗೂ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ರಾತ್ರಿ ಲೈಟ್ ಆನ್​ ಮಾಡಿಟ್ಟು ಮಲಗಿದರೆ ಏನಾಗುತ್ತೆ?; ಆರೋಗ್ಯದ ಮೇಲೆ ಏನು ಪರಿಣಾಮ?

    ಎಲಿಜಬೆತ್ ಆ್ಯಂಡರ್​ಸನ್​ ಸಿಯೆರಾ ಎಂಬ ಈಕೆ ಅತ್ಯಧಿಕ ಪ್ರಮಾಣದಲ್ಲಿ ಎದೆಹಾಲು ದೇಣಿಗೆಯಾಗಿ ನೀಡಿ ಗಿನ್ನೆಸ್​ ದಾಖಲೆ ಪಟ್ಟಿಯಲ್ಲಿ ಸೇರಿದ್ದಾರೆ. ಯುನೈಟೆಡ್ ಸ್ಟೇಟ್ಸ್​ನ ಒರೆಗಾಂವ್​ನ ಅಲೊಹಾ ನಿವಾಸಿಯಾಗಿರುವ ಎಲಿಜಬೆತ್, 2015ರ ಫೆಬ್ರವರಿ 20ರಿಂದ 2018ರ ಜೂ. 20ರ ವರೆಗೆ 1599.68 ಲೀಟರ್​ ಎದೆಹಾಲನ್ನು ನೀಡಿದ್ದಾರೆ. ಆ ಮೂಲಕ ಅವಧಿಪೂರ್ವವಾಗಿ ಜನಿಸಿದ್ದ ಸಾವಿರಾರು ಶಿಶುಗಳ ಬದುಕು ಉಳಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

    ಇದನ್ನೂ ಓದಿ: ಯಂಗ್​ ಆಗಿಯೇ ಇರಲು ಕೋಟ್ಯಂತರ ರೂ. ಖರ್ಚು ಮಾಡಿದ, ಮಗನ ರಕ್ತ ತನ್ನ ದೇಹಕ್ಕೆ ಸೇರಿಸಿಕೊಂಡ: ಕೊನೆಗೆ ಆಗಿದ್ದೇನು?

    ಇದು ನಾನು 2015ರಿಂದ 2018ರ ಮಧ್ಯೆ ನೀಡಿದ್ದ ಹಾಲಿನ ಪ್ರಮಾಣವಷ್ಟೇ ಎಂದಿರುವ ಎಲಿಜಬೆತ್, ಇದುವರೆಗೆ ಒಟ್ಟು 3.5 ಲಕ್ಷ ಔನ್ಸ್​ಗಳಿಗೂ ಅಧಿಕ ಎದೆಹಾಲು ನೀಡಿದ್ದಾರಂತೆ. ನನ್ನ ದೇಹ ಪ್ರೊಲ್ಯಾಕ್ಟಿನ್ ಎಂಬ ಹಾರ್ಮೋನನ್ನು ಅಧಿಕ ಪ್ರಮಾಣದಲ್ಲಿ ಸ್ರವಿಸುತ್ತಿರುವುದರಿಂದ ಇಷ್ಟೊಂದು ಹಾಲು ಉತ್ಪಾದನೆ ಆಗುತ್ತಿದೆ ಎಂದಿರುವ ಎಲಿಜಬೆತ್, ತನ್ನ ಈ ದಾಖಲೆಯಲ್ಲಿ ಮಿಲ್ಕ್ ಪಂಪ್ ಉಪಕರಣದ ಮಹತ್ವವನ್ನೂ ಹೇಳಿಕೊಂಡಿದ್ದಾರೆ. –ಏಜೆನ್ಸೀಸ್

    ಬೆಂಗಳೂರಿನ ಎಲ್ಲ ಆಸ್ತಿಗಳ ದಾಖಲೆ ಸಂಗ್ರಹಿಸಿ ಸ್ಕ್ಯಾನ್​ ಮಾಡಲಿದೆ ಸರ್ಕಾರ: ಉದ್ದೇಶ ಏನೆಂದು ತಿಳಿಸಿದ ಡಿಸಿಎಂ

    ಭೀಕರ ಅಪಘಾತ: ಆ್ಯಂಬುಲೆನ್ಸ್‌ನಲ್ಲಿದ್ದ ಒಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts