More

    ನೇರಳೆ ಹಣ್ಣುಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?: ಆರೋಗ್ಯಕ್ಕೇನು ತೊಂದರೆ?

    ಬೆಂಗಳೂರು: ಕೆಲವು ದಿನಗಳಿಂದ ನೇರಳೆಹಣ್ಣು ಎಲ್ಲೆಂದರಲ್ಲಿ ಕಾಣಿಸತೊಡಗಿದೆ. ಒಂದಷ್ಟು ದಿನಗಳ ಹಿಂದೆ ಒಂದು ಕೆ.ಜಿ.ಗೆ 400 ರೂಪಾಯಿಯಂತೆ ಮಾರಾಟವಾಗುತ್ತಿದ್ದ ನೇರಳೆಹಣ್ಣು ಈಗ ಕೆ.ಜಿ.ಗೆ 80-100 ರೂಪಾಯಿಯಂತೆ ಸಿಗುತ್ತಿದೆ. ಹಾಗಂತ ನೇರಳೆಹಣ್ಣುಗಳನ್ನು ಅತಿಯಾಗಿ ಸೇವಿಸುವಂತಿಲ್ಲ. ಅತಿಯಾದರೆ ಅಮೃತವೂ ವಿಷ ಎನ್ನುವಂಥ ಮಾತು ನೇರಳೆಗೂ ಅನ್ವಯಿಸಲಿದೆ. ಅರ್ಥಾತ್, ಅತಿಯಾದ ನೇರಳೆ ಸೇವನೆ ಅಪಾಯಕಾರಿ ಎಂದು ಹೇಳಲಾಗುತ್ತಿದೆ.

    ಮುಂಗಾರು ಸಮಯದಲ್ಲಿ ಸಿಗುವ ನೇರಳೆ ಹಣ್ಣು ಹಲವು ಆರೋಗ್ಯಕರ ಅಂಶಗಳನ್ನು ಹೊಂದಿರುವುದಂತೂ ನಿಜ. ಅದರಲ್ಲೂ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಧುಮೇಹ ಮಾತ್ರವಲ್ಲದೆ ಮಲಬದ್ಧತೆ, ಕೊಲೆಸ್ಟೆರಾಲ್ ನಿಯಂತ್ರಣದಲ್ಲೂ ನೇರಳೆ ಹಣ್ಣು ಪ್ರಯೋಜನಕಾರಿ. ಆದರೆ ಇವೆಲ್ಲ ಮಿತ ಪ್ರಮಾಣದಲ್ಲಿ ಇದ್ದಾಗ ಮಾತ್ರ ಒಳಿತು. ಏಕೆಂದರೆ ನೇರಳೆಯನ್ನು ಅತಿಯಾಗಿ ಸೇವಿಸುವುದು ಅಪಾಯಕಾರಿ.

    ಇದನ್ನೂ ಓದಿ: ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

    ನೇರಳೆ ಹಣ್ಣುಗಳನ್ನು ಒಂದೇ ಸಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅದರಲ್ಲಿನ ವಿಟಮನ್ ಸಿ ಮಲಬದ್ಧತೆ ಕಾರಣವಾಗಬಲ್ಲದು. ಮಾತ್ರವಲ್ಲ, ಅತಿಯಾದ ನೇರಳೆ ಸೇವನೆ ರಕ್ತದಲ್ಲಿನ ಸಕ್ಕರೆಪ್ರಮಾಣವನ್ನು ಏರುಪೇರಾಗಿಸಬಲ್ಲದು. ಪರಿಣಾಮವಾಗಿ ಸುಸ್ತು, ಕಣ್ಣು ಮಂಜಾಗುವುದು, ತಲೆನೋವು, ಅತಿ ಬಾಯಾರಿಕೆ ಮುಂತಾದ ಸಮಸ್ಯೆಗಳೂ ಕಾಣಿಸಬಹುದು. ಕೆಲವೊಮ್ಮೆ ಮೊಡವೆ ಹಾಗೂ ಚರ್ಮ ಸಂಬಂಧಿತ ಸಮಸ್ಯೆಗಳಿಗೂ ಕಾರಣವಾಗಬಲ್ಲದು.

    ಕಣ್ಣು ಮಿಟುಕಿಸಲಾಗದ್ದಕ್ಕೇ ಬ್ಯಾಂಕ್ ಖಾತೆ ಸಿಗದಂತಾದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts