ವಿಡಿಯೋ ಕಾಲ್​ ಮಾಡಿ ಅಶ್ಲೀಲ ದೃಶ್ಯ ತೋರಿಸಿ ಶಾಸಕರಿಗೇ ಬೆದರಿಕೆ! ಇಬ್ಬರ ಬಂಧನ

VIDEO CALL alert
Published on

ನವದೆಹಲಿ:ಕೇಂದ್ರ ಸಚಿವರಿಗೆ ವಂಚನೆ ಕರೆ ಮಾಡಿದ ಆರೋಪದ ಮೇಲೆ ರಾಜಸ್ಥಾನದ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಜೂನ್‌ನಲ್ಲಿ ಸಚಿವರಿಗೆ ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಬಂದಿದ್ದು, ಅವರು ಸ್ವೀಕರಿಸಿದ ಕ್ಷಣದಲ್ಲಿ ಪೋರ್ನ್ ವೀಡಿಯೊ ಪ್ಲೇ ಆಗಲು ಶುರುವಾಗಿತ್ತು. ಇದರಿಂದ ಮುಜುಗರಕ್ಕೆ ಈಡಾದ ಶಾಸಕರು, ತಕ್ಷಣ ಕರೆ ಸ್ಥಗಿತಗೊಳಿಸಿದ್ದಾರೆ.

ನಂತರ ಸಚಿವರಿಗೆ ಇನ್ನೊಂದು ಕರೆ ಬಂದಿದ್ದು. ಕಡೆಯ ವ್ಯಕ್ತಿಗೆ ಕರೆ ಮಾಡಿ ಈ ವಿಡಿಯೋ ಕ್ಲಿಪ್ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಆರೋಪಿ ಮೊಹಮ್ಮದ್ ವಕೀಲ್ ಮತ್ತು ಮೊಹಮ್ಮದ್ ಸಾಹಿಬ್ ಅವರ ವಿರುದ್ಧ ಜೂನ್‌ನಲ್ಲಿ ದೂರು ದಾಖಲಿಸಲಾಗಿದ್ದು, ಜುಲೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಅಪರಾಧ ವಿಭಾಗದ ಘಟಕವು ಹಗರಣದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿ ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net