More

    ಆಂಟಿ ಎಂಬುದು ಇಂದು ಅಶ್ಲೀಲ ಪದವಾಗಿದೆ: ಆಂಟಿ ಟ್ರೆಂಡ್​ಗೆ ನಟಿ ಕಸ್ತೂರಿ ಖಡಕ್​ ತಿರುಗೇಟು

    ಹೈದರಾಬಾದ್​: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು. ರಾಜಕೀಯ ಹಾಗೂ ಸಿನಿಮಾಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್​ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ.

    ಇದೀಗ ಕಸ್ತೂರಿ ಅವರು ಮತ್ತೊಂದು ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಟಾಲಿವುಡ್​ನ ಸ್ಟಾರ್​ ಆ್ಯಂಕರ್​ ಮತ್ತು ನಟಿಯಾಗಿರುವ ಅನಸೂಯ ಭಾರಧ್ವಜ್​ ಅವರನ್ನು ಕೆಲ ನೆಟ್ಟಿಗರು ಆಂಟಿ ಎಂದು ಕರೆದಿದ್ದಾರೆ. ಇದಕ್ಕೆ ಅನುಸೂಯ ಅವರು ಭಾರೀ ಆಕ್ರೋಶ ಹೊರಹಾಕಿದ್ದಾರೆ. ಆದರೂ ಆಗಾಗ ಅನಸೂಯ ಅವರನ್ನು ಕೆಲ ನೆಟ್ಟಿಗರು ಆಂಟಿ ಎಂದು ಟ್ರೋಲ್​ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಅನಸೂಯ ಅವರು ಕೂಡ ಸಾಕಷ್ಟು ಬಾರಿ ಬೇಸರ ಹೊರಹಾಕಿದ್ದಾರೆ.

    ಇದನ್ನೂ ಓದಿ: 5 ರಿಂದ 15 ವರ್ಷದ ಹೆಣ್ಣುಮಕ್ಕಳ ಅಶ್ಲೀಲ ಫೋಟೋ, ವಿಡಿಯೋಗಳು ಶೇರಿಂಗ್​: ಟೆಕ್ಕಿಗಳು ಸೇರಿ 12 ಮಂದಿ ಅರೆಸ್ಟ್​

    ಈ ಆಂಟಿ ಟ್ರೋಲ್​ ಬಗ್ಗೆ ಮಾಧ್ಯಮದ ಸಂದರ್ಶನವೊಂದರಲ್ಲಿ ಕಸ್ತೂರಿ ಅವರು ಮಾತನಾಡಿದ್ದಾರೆ. ಆಂಟಿ ಎಂದು ಮಕ್ಕಳು ಕರೆಯುವುದಕ್ಕೂ ಮತ್ತು ವಯಸ್ಸಾದವರು ಕರೆಯುವುದಕ್ಕೂ ಭಾರೀ ವ್ಯತ್ಯಾಸ ಇದೆ. ಹೆಣ್ಣನ್ನು ಆಂಟಿ ಎಂದು ಕರೆಯುವ ಹಕ್ಕು ಮಕ್ಕಳನ್ನು ಹೊರತುಪಡಿಸಿ ಯಾರಿಗೂ ಇಲ್ಲ. ಚಿಕ್ಕ ಮಕ್ಕಳು ವಯಸ್ಸನ್ನು ಲೆಕ್ಕಿಸದೆ ಯಾವುದೇ ಮಹಿಳೆಯನ್ನು ಆಂಟಿ ಎಂದು ಕರೆಯುವುದು ಸರಿ. ಆದರೆ, ವಯಸ್ಕರು ಮಹಿಳೆಯನ್ನು ಆಂಟಿ ಎಂದು ಕರೆಯುವುದು ನಿಜಕ್ಕೂ ಅದು ಅಗೌರವ ತೋರಿದಂತೆ. ನಾಯಕ ಅಥವಾ ನಟನ ಬಳಿಗೆ ಹೋಗಿ ಅವರನ್ನು ಅಂಕಲ್ ಎಂದು ಕರೆಯುವುದೇ? ನಿಜ ಹೇಳಬೇಕೆಂದರೆ, ಆಂಟಿ ಎಂಬ ಪದ ಇಂದು ಅಶ್ಲೀಲ ಅರ್ಥದ ಪದವಾಗಿದೆ. ಅನಸೂಯಗಿಂತ ಎರಡು ಪಟ್ಟು ವಯಸ್ಸು ಹೆಚ್ಚಾಗಿರುವ ಹೀರೋಗಳನ್ನು ಅಂಕಲ್​ ಎಂದು ನೀವು ಕರೆಯುತ್ತೀರಾ? ಸದ್ಯ ಈ ಟ್ರೋಲ್​ ವಿಚಾರದಲ್ಲಿ ನಾನು ಅನುಸೂಯ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಕಸ್ತೂರಿ ಅವರು ಹೇಳಿದ್ದಾರೆ.

    ಯಾರನ್ನಾದರೂ ಹೇಗೆ ಕರೆಯಬೇಕೆಂದು ನಿಮಗೆ ತಿಳಿಯದೇ ಹೋದರೆ, ಮೇಡಂ ಎಂದು ಕರೆಯಿರಿ ಅಥವಾ ಸಹೋದರಿ, ತಾಯಿ ಎನ್ನಿರಿ ಎನ್ನುವ ಮೂಲಕ ಅಣುಕಿಸುವ ನೆಟ್ಟಿಗರಿಗೆ ಕಸ್ತೂರಿ ಬುದ್ಧಿಮಾತು ಹೇಳಿದರು. ಇನ್‌ಸ್ಟಾ ಚಾಟಿಂಗ್‌ನಲ್ಲಿ ನನ್ನೊಂದಿಗೆ ಎಲ್ಲೆ ಮೀರಿ ಕಾಮೆಂಟ್‌ ಮಾಡುವವರಿಗೆ ನಾನು ಹಾಸ್ಯಮಯ ಉತ್ತರವನ್ನು ನೀಡಲು ಪ್ರಯತ್ನಿಸುತ್ತೇನೆ. ಆದಾಗ್ಯೂ, ಕೆಲವರು ಅತಿರೇಕಕ್ಕೆ ಮುಜುಗರ ಉಂಟುಮಾಡಿದರೆ ಅಂಥವರನ್ನು ನಾನು ನಿರ್ಬಂಧಿಸುತ್ತೇನೆ. ಏಕೆಂದರೆ, ಬೇರೆ ದಾರಿಯೇ ಇಲ್ಲ ಎಂದರು.

    ಐದು ವರ್ಷಗಳ ಹಿಂದೆಯೇ ಶುರು
    ಐದು ವರ್ಷಗಳ ಹಿಂದೆ ನಟ ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತೆಲುಗು ನಟಿ ಅನಸೂಯಾ ಭಾರದ್ವಾಜ್ ಅವರ ‘ಆಂಟಿ’ ಟ್ರೆಂಡ್ ಸೃಷ್ಟಿಯಾಯಿತು. ಅಂದಿನಿಂದ ಅವರನ್ನು ಟ್ರೋಲ್​ ಮಾಡುತ್ತಲೇ ಇದ್ದಾರೆ.

    ಇದನ್ನೂ ಓದಿ: ‘ರಸಗುಲ್ಲಾ ಚಹಾ’ ಬಗ್ಗೆ ಕೇಳಿದ್ದೀರಾ? ನಟ ಆಶಿಶ್ ವಿದ್ಯಾರ್ಥಿ ಹಂಚಿಕೊಂಡ ವೀಡಿಯೋ ಇಲ್ಲಿದೆ….

    ಏನಿದು ಅರ್ಜುನ್​ ರೆಡ್ಡಿ ವಿವಾದ?
    ಐದು ವರ್ಷಗಳ ಹಿಂದೆ ಬಿಡುಗಡೆಯಾದ ವಿಜಯ್​ ನಟನೆಯ ಅರ್ಜುನ್​ ರೆಡ್ಡಿ ಸಿನಿಮಾ ಸೂಪರ್​ ಹಿಟ್​​ ಆಗಿತ್ತು. ಆದರೆ, ಅದರಲ್ಲಿ ತಾಯಿಯ ಬಗೆಗಿನ ಕೆಟ್ಟ ಬೈಗುಳ ಭಾರೀ ವಿವಾದ ಹೆಬ್ಬಿಸಿತ್ತು. ಅನೇಕರು ಮಹಿಳೆಯರು ಬೈಗುಳದ ವಿರುದ್ಧ ಧ್ವನಿಯೇರಿಸಿದ್ದರು. ಅದರಲ್ಲಿ ಅನಸೂಯ ಭಾರಧ್ವಜ್​ ಕೂಡ ಒಬ್ಬರು. ಅರ್ಜುನ್​ ರೆಡ್ಡಿ ಸಿನಿಮಾ ಕಾರ್ಯಕ್ರಮದಲ್ಲಿಯೂ ವಿಜಯ್​ ಆ ಡೈಲಾಗ್​ ಅನ್ನು ಎಲ್ಲರ ಎದುರು ಹೇಳಿದಕ್ಕೆ ಅನಸೂಯ ಕೆಂಡಾಮಂಡಲವಾಗಿದ್ದರು. ನೇರವಾಗಿಯೇ ವಿಜಯ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಟಿವಿ ಚರ್ಚಾ ಕಾರ್ಯಕ್ರಮಗಳಲ್ಲೂ ಅನಸೂಯಾ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದರು. ಆದರೆ, ಯಾವುದಕ್ಕೂ ವಿಜಯ್​ ಮಾತ್ರ ಪ್ರತಿಕ್ರಿಯೆ ನೀಡಿರಲಿಲ್ಲ. ಐದು ವರ್ಷಗಳ ಬಳಿಕ ಅನಸೂಯ ಮತ್ತೊಮ್ಮೆ ವಿಜಯ್​ ವಿರುದ್ಧ ಟ್ವೀಟ್​ ಮಾಡಿದರು. ಇತ್ತೀಚೆಗೆ ತೆರೆಕಂಡ ಲೈಗರ್​ ಸಿನಿಮಾದ ಸೋಲನ್ನು ಕರ್ಮಕ್ಕೆ ಹೋಲಿಕೆ ಮಾಡಿ ಟ್ವೀಟ್​ ಮಾಡುವ ಮೂಲಕ ವಿಜಯ್​ಗೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)

    ಸಲಿಂಗ ಕಾಮದ ಅನುಭವವಿದೆಯೇ? ನೆಟ್ಟಿಗನ ಪ್ರಶ್ನೆಗೆ ಅನಸೂಯ ಕೊಟ್ಟ ಬೋಲ್ಡ್​ ಉತ್ತರ ವೈರಲ್​

    ಆ ಒಂದು ಕೆಟ್ಟ ಬೈಗುಳ: 5 ವರ್ಷದ ಬಳಿಕ ವಿಜಯ್​ ದೇವರಕೊಂಡ ವಿರುದ್ಧ ಸೇಡು ತೀರಿಸಿಕೊಂಡ ಅನಸೂಯ!

    ಲೈಗರ್​ ಸಿನಿಮಾ ಸೋಲು: ನಟಿ ಅನಸೂಯ ವಿರುದ್ಧ ಮುಗಿಬಿದ್ದ ವಿಜಯ್​ ದೇವರಕೊಂಡ ಫ್ಯಾನ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts