

ಬೆಲಹೊಂಗಲ: ರೆತರ ಸಂಕಷ್ಟಕ್ಕೆ ಸ್ಪಂದಿಸಿ ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡುವಂತೆ ಸದನದಲ್ಲಿ ಶಾಸಕರು ಧ್ವನಿ ಎತ್ತಲಿ ಎಂದು ರೆತ ಮುಖಂಡ ಮಲ್ಲಿಕಾರ್ಜುನ ಹುಂಬಿ ಆಗ್ರಹಿಸಿದರು. ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಕಾಲಕ್ಕೆ ಮುಂಗಾರು ಮಳೆ ಬಾರದಿರುವ ಹಿನ್ನೆಲೆಯಲ್ಲಿ ಬೆಲಹೊಂಗಲ, ಸವದತ್ತಿ, ಕಿತ್ತೂರು ಭಾಗದ ಅನ್ನದಾತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೆತರು ಬಿತ್ತಿರುವ ಬೆಳೆಗಳು ಮೊಳಕೆ ಒಡೆಯದೆ ಕಮರಿ ಹೋಗಿದೆ. ಈಗಾಗಲೇ ಹಲವಾರು ಬಾರಿ ಈ ಭಾಗದ ರೆತ ಮುಖಂಡರು, ಗಣ್ಯರು ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ರೆತರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಬೆಲಹೊಂಗಲ, ಸವದತ್ತಿ, ಕಿತ್ತೂರ ಭಾಗದ ವಿವಿಧ ರೆತ ಸಂಘಟನೆಗಳ ನೇತತ್ವದಲ್ಲಿ ಜು.24 ರಂದು ಬೆಲಹೊಂಗಲ ಪಟ್ಟಣದಲ್ಲಿ ಬಹತ್ ಪ್ರತಿಭಟನೆ ನಡೆಸಲಾಗುವುದು ಎಂದರು. ಯಲ್ಲಪ್ಪ ಕರಡಿಗುಡ್ಡಿ, ಶಿವಬಸಪ್ಪ ಮದ್ನಳ್ಳಿ, ಬಸಯ್ಯ ತಿಪ್ಪಯ್ಯನವರ, ಬಸವರಾಜ ಹಿತ್ತಲಮಣಿ, ಬಸಪ್ಪ ಚಳಕೊಪ್ಪ, ಗೌಡಪ್ಪ ನಾವಲಗಟ್ಟಿ,ಮಡಿವಾಳಪ್ಪ ಹಿರೇಹೊಳಿ, ವಿರೇಶಪ್ಪ ಚಳಕೊಪ್ಪ, ಮಹೇಶ ಕಾದ್ರೊಳ್ಳಿ, ಬಸವರಾಜ ಹಣ್ಣಿಕೇರಿ, ಮಲ್ಲೇಶಪ್ಪ ಬಿಡಶೆಟ್ಟಿ, ಸೋಮಪ್ಪ ಹುಂಬಿ, ಲಕ್ಕಪ್ಪ ಗುಂಡಿ, ದೇಮನಗೌಡ ಪಾಟೀಲ ಇದ್ದರು.