More

    ಕನ್ನಡಕ್ಕಿಂತ ಹೆಚ್ಚು ಬೇರೆ ಭಾಷೆಗಳಲ್ಲಿ ‘ಕೆಜಿಎಫ್​ 2’ ಟ್ರೈಲರ್ ಮಾಡಿರುವ ಮೋಡಿ ಎಂಥದ್ದು ಗೊತ್ತಾ?

    ಕೆಜಿಎಫ್ಮತ್ತು ಕೆಜಿಎಫ್-2′ ಸಿನಿಮಾಗೆ ಮತ್ತು ದಾಖಲೆಗಳಿಗೂ ಅದೇನೋ ನಂಟು ಅನಿಸುತ್ತೆ. ಹೌದು, ‘ಕೆಜಿಎಫ್-2′ ಸಿನಿಮಾದ ಮಾಹಿತಿಗಳಿಗೂ ಹೊಸ ದಾಖಲೆಗಳನ್ನು ಬರೆಯುವ ಶಕ್ತಿ ಇದೆ ಎಂದೇ ಹೇಳಬೇಕು. ಈಗಾಗಲೇ, ‘ಕೆಜಿಎಫ್-2′ ಸಿನಿಮಾದ ಟೀಸರ್ ಮತ್ತು ಹಾಡುಗಳು ಹಲವು ಹೊಸ ದಾಖಲೆಗಳನ್ನು ಬರೆದಿದ್ದು, ಹಲವು ದಾಖಲೆಗಳನ್ನು ಮುರಿದಿವೆ. ಇನ್ನು, ಮಾರ್ಚ್ 27 ರಂದು ರೀಲಿಸ್ ಆದ ಕೆಜಿಎಫ್ 2′ ಟ್ರೈಲರ್ ಕೇವಲ 24 ಗಂಟೆಗಳಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದು ಹೊಸ ದಾಖಲೆ ಸೃಷ್ಟಿಸಿತು. ಹೌದು, ಕನ್ನಡ ಸೇರಿದಂತೆ ಟ್ರೈಲರ್ ರಿಲೀಸ್ ಆದ ಬೇರೆ ನಾಲ್ಕು ಭಾಷೆಗಳಲ್ಲಿ 24 ಗಂಟೆಗಳಲ್ಲಿಯೇ 100 ಮಿಲಿಯನ್ ವೀವ್ಸ್ ಪಡೆದಿದೆ.
    ಇಲ್ಲಿಯವರೆಗೆ, 24 ಗಂಟೆಯಲ್ಲಿ ಇಷ್ಟೋಂದು ವೀವ್ಸ್ ಪಡೆದ ಸಿನಿಮಾ ಭಾರತದಲ್ಲಿಲ್ಲ ಮತ್ತೊಂದು ಇಲ್ಲ. ಈ ಮಾಹಿತಿಯನ್ನು ಸ್ವತಃ ಈ ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅವರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದೆ. ಆದರೆ, ಇಲ್ಲಿ ಗಮನಿಸುವ ವಿಷಯವೆಂದರೆ ಕನ್ನಡ ಭಾಷೆಯ ಕೆಜಿಎಫ್-2′ ಸಿನಿಮಾದ ಟ್ರೈಲರ್ ಗಿಂತಲೂ, ಚಿತ್ರದ ಬೇರೆ ಭಾಷೆಯ ಟ್ರೈಲರ್​ಗಳೇ ಯೂಟ್ಯೂಬ್‌ನಲ್ಲಿ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ. ಕನ್ನಡದ ಟ್ರೈಲರ್ 1.80 ಕೋಟಿ ವೀವ್ಸ್ ಪಡೆದಿದ್ದರೆ, ಹಿಂದಿಯಲ್ಲಿ ಟ್ರೈಲರ್ ಬರೋಬ್ಬರಿ 5 ಕೋಟಿಗೂ ಹೆಚ್ಚು ವೀವ್ಸ್ ಗಳಿಸಿದೆ. ತೆಲುಗಿನ ಟ್ರೈಲರ್ 2 ಕೋಟಿಗೂ ಹೆಚ್ಚು ವೀವ್ಸ್‌ಗಳನ್ನು ಗಳಿಸಿದ್ದು, ತಮಿಳಿನ ಟ್ರೈಲರ್ 1.20 ಕೋಟಿ ವೀವ್ಸ್ ಪಡೆದಿದೆ. ಕನ್ನಡದ ಪ್ಯಾನ್ ಇಂಡಿಯನ್ ಸಿನಿಮಾಗೆ ಬೇರೆ ಭಾಷೆಗಳಲ್ಲಿ ಇಷ್ಟು ಬೇಡಿಕೆ ಇರುವುದು ಕನ್ನಡಿಗರಿಗೆ ಸಂತಸ ತಂದಿದೆ.
    ಇನ್ನು, ಬೇರೆ ಯಾವ ಭಾಷೆಯ ಪ್ಯಾನ್ ಇಂಡಿಯನ್ ಸಿನಿಮಾ ಟ್ರೈಲರ್​ಗೂ ನಮ್ಮ ಕರುನಾಡಲ್ಲಿ ಆ ಭಾಷೆಯ ಟ್ರೈಲರ್​ಗಿಂತ ಹೆಚ್ಚು ವೀಕ್ಷಣೆಗಳು ಸಿಕ್ಕಿಲ್ಲ. ಹಾಗೆಯೇ, ಮಲಯಾಳಂ ಭಾಷೆಯ ಈ ಟ್ರೈಲರ್ 80 ಲಕ್ಷ ವೀವ್ಸ್ ಗಿಟ್ಟಿಸಿಕೊಂಡಿದೆ. ಈ ಮೂಲಕ ಕೆಜಿಎಫ್-2′ ಚಿತ್ರದ ಬಗ್ಗೆ ಉತ್ತರ ಭಾರತದಲ್ಲಿ ಮತ್ತು ದಕ್ಷಿಣದ ಬೇರೆ ಭಾಷೆಗಳಲ್ಲೇ ಭಾರಿ ಕ್ರೇಜ್ ಇದೆ ಎಂಬಂತೆ ಕಾಣಸುತ್ತಿದೆ. ಹೌದು, ಬಾಲಿವುಡ್‌ನ ಸ್ಟಾರ್ ನಟ ಸಂಜಯ್ ದತ್ ಹಾಗೂ ನಟಿ ರವೀನಾ ಟಂಡನ್ ಈ ಸಿನಿಮಾದಲ್ಲಿ ನಟಿಸಿರುವುದು ಚಿತ್ರದ ಮೇಲಿನ ಕ್ರೇಜ್, ನಿರೀಕ್ಷೆಯನ್ನು ಹೆಚ್ಚಿಸಿದೆ. ‘ಕೆಜಿಎಫ್ 2′ ಸಿನಿಮಾ ಏಪ್ರಿಲ್ 14 ರಂದು ತೆರೆಗಪ್ಪಳಿಸಲಿದೆ. ರಿಲೀಸ್​ಗೂ ಮುನ್ನವೇ ಇಷ್ಟೋಂದು ದಾಖಲೆಗಳನ್ನು ಬರೆಯುತ್ತಿರುವ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂದು ಕಾದು ನೋಡಬೇಕಿದೆ

    ರಶ್ಮಿಕಾ ನೋಡಲು ಮಾತ್ರ ನಾಜೂಕು… ಆದ್ರೆ ವರ್ಕ್ಔಟ್ ಮಾತ್ರ ಯಾವ ಹೀರೋಗೂ ಕಮ್ಮಿ ಇಲ್ಲ!

    ಪುನೀತ್ ಹೆಸರಲ್ಲಿ ಪ್ರಕಾಶ್ ರಾಜ್ ಮಾಡುತ್ತಿರುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts