ಹೌದು, ಸದ್ಯ ವಿವೇಕ್ ಅಗ್ನಿಹೋತ್ರಿ ಅವರ ಸಿನಿಮಾಗೆ ವಿಶ್ವಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬ್ರಿಟನ್ ಸಂಸತ್ತಿನಿಂದ ಅವರಿಗೆ ವಿಶೇಷ ಆಹ್ವಾನ ಬಂದಿದೆಯಂತೆ. ಈ ಬಗ್ಗೆ ಸ್ವತಃ ವಿವೇಕ್ ಅಗ್ನಿಹೋತ್ರಿ ಅವರು, ''ಪತ್ನಿ ಪಲ್ಲವಿ ಮತ್ತು ನನ್ನನ್ನು ಬ್ರಿಟನ್ ಸಂಸತ್ನವರು ಆಹ್ವಾನಿಸಿದ್ದಾರೆ. ಮುಂದಿನ ತಿಂಗಳು ನಾವು ಅಲ್ಲಿಗೆ ಹೋಗುತ್ತೇವೆ. ಕಾಶ್ಮೀರಿ ಪಂಡಿತರ ನರಮೇಧದ ಸಂದೇಶವನ್ನು ಪ್ರಪಂಚದ ಮೂಲೆ ಮೂಲೆಗೆ ತಲುಪಿಸುವ ಉದ್ದೇಶದಿಂದ ಕಾಶ್ಮೀರಿ ಫೈಲ್ಸ್ ಸಿನಿಮಾ ಮಾಡಲಾಗಿದೆ. ಬ್ರಿಟನ್ ಸಂಸತ್ತಿಗೆ ಹೋಗುತ್ತಿರುವುದಕ್ಕೆ ನನಗೆ ಖುಷಿಯಿದೆ'', ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.