More

    ಪ್ರಧಾನಿ ಬೆಂಗಳೂರು ರೋಡ್ ಶೋ ಸಕ್ಸೆಸ್ | ಎರಡು ದಿನವೂ ಮೊಳಗಿದ ‘ಮೋದಿ’ ಘೋಷಣೆ; ಬಿಜೆಪಿಗೆ ಸಿಕ್ತು ಬಿಗ್ ಬೂಸ್ಟ್

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ನಿನ್ನೆಯಷ್ಟೇ 26 ಕಿಮೀ ದೂರದ ಮೆಗಾ ರೋಡ್​ ನಡೆಸಿದ್ದ ಪ್ರಧಾನಿ ಮೋದಿ, ಇಂದು ಎರಡನೇ ಸುತ್ತಿನ ರೋಡ್​ ಶೋ ನಡೆಸಿದ್ದಾರೆ. ಬೆಳಗ್ಗೆ 10. 15ಕ್ಕೆ ನ್ಯೂ ತಿಪ್ಪಸಂದ್ರ ರಸ್ತೆಯಿಂದ ರೋಡ್​ ಶೋ ಆರಂಭವಾಗಿ, ಇಂದಿರಾನಗರ 12ನೇ ಮುಖ್ಯ ರಸ್ತೆ, 100 ಫೀಟ್ ರೋಡ್​, ಸಿ.ಎಂ.ಹೆಚ್ ರೋಡ್, ಎಸ್.ವಿ. ರೋಡ್ ಮೂಲಕ ಹಲಸೂರು ಪೊಲೀಸ್ ಠಾಣೆ ಮುಂದೆಯಿಂದ ಟ್ರಿನಿಟಿ ಜಂಕ್ಷನ್ ತೆರಳಿ ಕೊನೆಗೊಂಡಿತು.

    ಇದನ್ನೂ ಓದಿ: ಮೋದಿ ಬಲ ಬಿಜೆಪಿ ಸಬಲ ಕಾಂಗ್ರೆಸ್ ದುರ್ಬಲ: ಕೈ ಬಗ್ಗೆ ಜನರಿಗೆ ಗ್ಯಾರಂಟಿ ಇಲ್ಲ ಎಂದ ಸಿಎಂ ಬೊಮ್ಮಾಯಿ

    ಮಳೆಯನ್ನೂ ಲೆಕ್ಕಿಸದೆ ಮೋದಿ‌ ನೋಡಲು ಉತ್ಸಾಹದಿಂದ ಬೆಂಗಳೂರಿನ ಜನರು ಆಗಮಿಸಿದ್ದರು. ಮೋದಿ ‌ರೋಡ್ ಶೋನಲ್ಲಿ ಸಾಂಪ್ರದಾಯಿಕ ಕಲಾ ತಂಡಗಳು ಮಿಂಚಿದವು. ರೋಡ್ ಶೋ ಉದ್ಧಕ್ಕೂ ಅಬಾಲವೃದ್ಧರಾದಿಯಾಗಿ ಜನರ ಪಾಲ್ಗೊಂಡಿದ್ದರು. ರಸ್ತೆಯ ಎರಡೂ ಬದಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ದಾರಿಯುದ್ಧಕ್ಕೂ ಮೋದಿ… ಮೋದಿ… ಮೋದಿ ಎಂದು ಘೋಷಣೆ ಕೂಗಿದರು. ಇಂದಿರಾ ನಗರ ‌ಬಳಿ ಪ್ರಧಾನಿಯನ್ನು ಕಾಣಲು ನೂಕು ನುಗ್ಗಲು ಉಂಟಾಯಿತು. ಮಳೆ‌ ನಿಂತ ಪರಿಣಾಮ ಸಾಲು ಸಾಲಾಗಿ‌ ಮೋದಿಯನ್ನು‌ ನೋಡಲು ಜನರ ಆಗಮಿಸಿದ್ದರು. ಇಂದಿರಾ‌ನಗರ ಬಳಿಕ ಸಿಎಂಹೆಚ್ ಮೆಟ್ರೋ ಪಿಲ್ಲರ್ 75 ರಿಂದ ಹಲಸೂರು ಸ್ಟೇಷನ್​ವರೆಗೆ ಸುಮಾರು‌ 5-6 ಸಾವಿರ ಜನರು ಸೇರಿದ್ದರು.

    ಸಾಂಸ್ಕೃತಿಕ ಕಲೆಗಳ ಅನಾವರಣ

    ಸಾಂಸ್ಕೃತಿಕ ಕಲೆಗಳ ಅನಾವರಣದ ಮೂಲಕ ಪ್ರಧಾನಿಗೆ ಭವ್ಯ ಸ್ವಾಗತ ದೊರೆಯಿತು. ಸಂಗೀತಕ್ಕೆ ತಕ್ಕಂತೆ ಕೀಲುಗೊಂಬೆ ನೃತ್ಯ, ಕೇರಳದ ಚೆಂಡೆ ವಾದ್ಯ, ಮತ್ತೊಂದು ಕಡೆ ಗೊರವಯ್ಯನ ನೃತ್ಯ, ಕಂಸಾಳೆ ನೃತ್ಯ, ಕುಣಿದು ಕುಪ್ಪಣಿಸುತ್ತಿರುವ ಕಾರ್ಯಕರ್ತರು ರೋಡ್​ ಸಂಭ್ರಮದ ಕಳೆ ಹೆಚ್ಚಿಸಿದ್ದರು. ದಾರಿಯುದ್ದಕ್ಕೂ ಮೋದಿಗೆ ಮತ್ತೆ ಪುಷ್ಪಾಭಿಷೇಕ ನಡೆಯಿತು. ಮುಖಂಡರು ಟನ್ ಗಟ್ಟಲೇ ಹೂಗಳನ್ನು ಹೊತ್ತು ತಂದಿದ್ದರು.

    ಇದನ್ನೂ ಓದಿ: ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕು: ಶಶಿ ತರೂರ್

    ಚಂದನ್ ಶೆಟ್ಟಿ ಹಾಡಿನ ಅಬ್ಬರ

    ಚುನಾವಣೆ ಪ್ರಚಾರಕ್ಕೆಂದು ರ್ಯಾಪರ್ ಚಂದನ್ ಶೆಟ್ಟಿ ಹಾಡಿರುವ ಹಾಡು ಜನರನ್ನು ಹೆಚ್ಚೆದ್ದು ಕಣಿಯುವಂತೆ ಮಾಡಿತು. ರೋಡ್ ಶೋ ಸಾಗಿಬಂದ ಕಡೆ ಅನೇಕ ಕಡೆ ಚಂದನ್ ಶೆಟ್ಟಿ ಅವರ ಹಾಡನ್ನು ಪ್ರಸಾರ ಮಾಡಿದ್ದು, ಯುವಕರು, ಮಹಿಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು.

    ಕುಟುಂಬಗಳ ಹಾಜರಿ

    ಆದಿತ್ಯವಾರ ಆದುದರಿಂದ ಮೋದಿ ನೋಡಲು ಕುಟುಂಬ ಸಮೇತ ಆಗಮಿಸಿದವರ ಸಂಖ್ಯೆ ಹೆಚ್ಚಿತ್ತು. ತಮ್ಮ ಮಕ್ಕಳನ್ನು ಜತೆಗೆ ಕರೆತಂದಿದ್ದ ಕುಟುಂಬಗಳು ಗಂಟೆಗಟ್ಟಲೆ ಕಾದಿದ್ದರು. ಮೋದಿ ಆಗಮನವಾಗುತ್ತಿದ್ದಂತೆ ಮಕ್ಕಳನ್ನು ಎತ್ತಿ ಹಿಡಿದ ತೋರಿಸಿ ಖುಷಿಪಟ್ಟರು. ಮತ್ತೆ ಕೆಲವರು ದೂರದಿಂದಲೇ ಮೋದಿ ಜತೆ ತಮ್ಮ ಮಕ್ಕಳ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಿದ್ದೂ ಸಹ ಕಾಣಿಸಿತು.

    ಇದನ್ನೂ ಓದಿ: ಮೋದಿ ರೋಡ್ ಶೋ ಬಳಿ ಅನುಮಾನಾಸ್ಪದವಾಗಿ ಎಲೆಕ್ಟ್ರಿಕಲ್ ಸಾಮಗ್ರಿ ಹಿಡಿದು ನಿಂತುಕೊಂಡಿದ್ದ ವ್ಯಕ್ತಿ; ಮುಂದೇನಾಯ್ತು?

    ಮೋದಿಯಿಂದಲೇ ಪುಷ್ಪಾರ್ಚನೆ

    ಕೆಲವು ಕಡೆ ಜನರ ಉತ್ಸಾಹ ಕಂಡ ಮೋದಿ ತಮ್ಮತ್ತ ಬಂದಿದ್ದ ಹೂವನ್ನು ಪುನಃ ಜನರ ಮೇಲೆ ಎರಚಿ ಸಂಭ್ರಮಿಸಿದರು. ಮೋದಿ ಮೋದಿ ಘೋಷಣೆಗಳು ಇಡೀ ವಾತಾವರಣ ಕಳೆಗಟ್ಟುವಂತೆ ಮಾಡಿತು. ಅದರಲ್ಲೂ ಮಕ್ಕಳು ಹೆಚ್ಚಿದ್ದ ಕಡೆ ಮೋದಿ ಪುಷ್ಪ ಎರಚಿ ಖುಷಿಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts