More

    ಮೋದಿ ರೋಡ್ ಶೋ ಬಳಿ ಅನುಮಾನಾಸ್ಪದವಾಗಿ ಎಲೆಕ್ಟ್ರಿಕಲ್ ಸಾಮಗ್ರಿ ಹಿಡಿದು ನಿಂತುಕೊಂಡಿದ್ದ ವ್ಯಕ್ತಿ; ಮುಂದೇನಾಯ್ತು?

    ಬೆಂಗಳೂರು: ಪ್ರಧಾನಿ ಮೋದಿ ಚುನಾವಣಾ ಪ್ರಚಾರಕ್ಕಾಗಿ ನಿನ್ನೆಯಿಂದ ಬೆಂಗಳೂರಿನಲ್ಲಿ ರೋಡ್ ಶೋ ನಡೆಸುತ್ತಿದ್ದು ರಕ್ಷಣಾ ದಳದವರ ಬಿಗಿ ಜೋರಾಗಿಯೇ ಇದೆ. ದೇಶದ ಪ್ರಧಾನಿಯ ರಕ್ಷಣೆಯಲ್ಲಿ ಏನೂ ಲೋಪ ಆಗಬಾರದು ಎಂಬ ದೃಷ್ಟಿಯಲ್ಲಿ ಸಣ್ಣ ಅನುಮಾನ ವ್ಯಕ್ತವಾದರೂ ನಿಲ್ಲಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಅನುಮಾಸ್ಪದ ಬ್ಯಾಗ್ ಪತ್ತೆ..!

    ಈತ ಎಲೆಕ್ಟ್ರಿಕಲ್ ಸಾಮಗ್ರಿ ಇರುವ ಚೀಲ ಹಿಡಿದುಕೊಂಡು ಪ್ರಧಾನಿ ರೋಡ್ ಶೋದಲ್ಲಿ ತದೇಕ ಚಿತ್ತನಾಗಿ ಮೋದಿಯನ್ನು ನೋಡಲು ಟ್ರಿನಿಟಿ ಸರ್ಕಲ್ ಬಳಿ ಕಾಯುತ್ತಿದ್ದ ಎನ್ನಲಾಗಿದ್ದು ಈ ವರ್ತನೆ ಪೊಲೀಸರ ಕಣ್ಣಿಗೆ ಅನುಮಾನಾಸ್ಪದವಾಗಿ ಕಂಡಿದೆ.ಈ ಹಿನ್ನೆಲೆಯಲ್ಲಿ ಆತನನ್ನು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ.

    ಈ ಸಂದರ್ಭದಲ್ಲಿ ಪೊಲೀಸರು ವ್ಯಕ್ತಿಯನ್ನು ಹಾಗೂ ಆ ಬ್ಯಾಗ್​ಅನ್ನೂ ಪರಿಶೀಲಿಸಿದ್ದು ಈತ ಬೈಕ್​ನಲ್ಲಿ ಬ್ಯಾಗ್​ಅನ್ನು ತಂದಿದ್ದ ಎನ್ನಲಾಗಿದೆ. ಪರಿಶೀಲನೆ ವೇಳೆ ಬ್ಯಾಗ್​ನಲ್ಲಿ ಕೆಲ ಎಲೆಕ್ಟ್ರಿಕಲ್ ವಸ್ತುಗಳು, ಮಷೀನ್ ಪತ್ತೆಯಾಗಿದೆ. ಸ್ಥಳದಲ್ಲೇ ವ್ಯಕ್ತಿಯನ್ನ ವಿಚಾರಣೆ ನಡೆಸಲಾಗಿದ್ದು ಈ ವೇಳೆ ಆತ ಎಲೆಕ್ಟಿಟ್ರಿಷನ್, ಕೆಲಸಕ್ಕೆ ಹೋಗೋ‌ ಮಧ್ಯೆ ರೋಡ್ ಶೋ ನೋಡಲು ನಿಂತಿದ್ದ ಎನ್ನುವುದು ತಿಳಿದುಬಂದಿದೆ. ಸದ್ಯ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ಮಾಡಿ ಕಳಿಸಿದ್ದಾರೆ.

    ಇದೀಗ ಟ್ರಿನಿಟಿ ಸರ್ಕಲ್ ಗೆ ಡಿಸಿಪಿ ಸಿ.ಕೆ ಬಾಬ ಆಗಮಿಸಿದ್ದು ಬಂದೋಬಸ್ತ್ ಪರಿಶೀಲನೆ ಮಾಡಿ ಇನ್ಸ್ಪೆಕ್ಟರ್​ಗಳಿಂದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts