More

    ಬೆಂಗಳೂರಲ್ಲಿಂದು ಪ್ರಧಾನಿ ಮೋದಿಯಿಂದ ಮತ್ತೊಂದು ರೋಡ್ ಶೋ: ಪೊಲೀಸರಿಂದ ಬಿಗಿ ಭದ್ರತೆ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆಯಷ್ಟೇ 26 ಕಿಮೀ ದೂರದ ಮೆಗಾ ರೋಡ್​ ನಡೆಸಿದ್ದ ಪ್ರಧಾನಿ ಮೋದಿ, ಇಂದು ಮತ್ತೊಂದು ಸುತ್ತಿನ ರೋಡ್​ ಶೋ ನಡೆಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಯಿಂದ 11.30ರವರೆಗೆ ರೋಡ್​ ಶೋ ನಡೆಯಲಿದೆ.

    ಇಂದು ಜೀವನ್ ಭೀಮಾ ನಗರದ ಬೆಮೆಲ್ ಸರ್ಕಲ್​​​ನಿಂದ ಶುರುವಾಗುವ ಮೋದಿ ರೋಡ್ ಶೋ, ಟ್ರಿನಿಟಿ ಜಂಕ್ಷನ್​​ನಲ್ಲಿ ಕೊನೆಯಾಗಲಿದೆ. ರೋಡ್​ಗೆ ಭಾರೀ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಭದ್ರತೆಗೆ ಒಟ್ಟು ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

    ಇದನ್ನೂ ಓದಿ: ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

    ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರಿ ವಿಶೇಷ ಆಯುಕ್ತ ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಜಂಟಿ ಆಯುಕ್ತರಾದ ಡಾ. ಶರಣಪ್ಪ, ಅನುಚೇತ್, ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹಾಗೂ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ. ಇಪತ್ತು ಮಂದಿ ಎಸಿಪಿ ಮತ್ತು 60 ಇನ್​ಸ್ಪೆಕ್ಟರ್​ಗಳು ಸೇರಿ ಒಟ್ಟು ಎರಡು ಸಾವಿರ ಪೊಲೀಸ್​ ಸಿಬ್ಬಂದಿ ಪ್ರಧಾನಿ ಮೋದಿ ರಕ್ಷಣೆಗೆ ಸರ್ಪಗಾವಲಾಗಿ ಇರಲಿದ್ದಾರೆ.

    ಇಂದು ಬೆಳಗ್ಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಬಂದಿಳಿಯಲಿದ್ದಾರೆ. ಬಳಿಕ ಹತ್ತು ಗಂಟೆಗೆ ಬೆಮೆಲ್ ಸರ್ಕಲ್​​ನಿಂದ ರೋಡ್ ಶೋ ಪ್ರಾರಂಭವಾಗಲಿದೆ. ನ್ಯೂ ತಿಪ್ಪಸಂದ್ರ ರಸ್ತೆ ಮೂಲಕ 80 ಫೀಟ್ ರೋಡ್, ಇಂದಿರಾನಗರ 12ನೇ ಮುಖ್ಯ ರಸ್ತೆ, 100 ಫೀಟ್ ರೋಡ್​, ಸಿ.ಎಂ.ಹೆಚ್ ರೋಡ್, ಎಸ್.ವಿ. ರೋಡ್ ಮೂಲಕ ಹಲಸೂರು ಪೊಲೀಸ್ ಠಾಣೆ ಮುಂದೆಯಿಂದ ಟ್ರಿನಿಟಿ ಜಂಕ್ಷನ್ ತೆರಳಿ ಅಲ್ಲಿ ರೋಡ್​ ಶೋ ಅಂತ್ಯವಾಗಲಿದೆ.

    ನಿನ್ನೆ (ಮೇ. 6) ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಆರಂಭವಾದ ರೋಡ್​ ಶೋ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಕೊನೆಯಾಯಿತು.

    ಇದನ್ನೂ ಓದಿ: ಚಾಲುಕ್ಯರ ನಾಡಲ್ಲಿ ನಮೋ ಮೇನಿಯಾ..! – ಹರಿದು ಬಂದ ಜನಸಾಗರ

    ವಿಶೇಷ ಸೂಚನೆ

    * ರೋಡ್ ಶೋ ಮಾರ್ಗದ ಅಕ್ಕಪಕ್ಕದ ಕಟ್ಟಡ, ಮನೆಗಳ ಮಹಡಿ ಮೇಲೆ ನಿಲ್ಲಲು ಅವಕಾಶವಿಲ್ಲ.
    * ಹೋಟೆಲ್, ಅಂಗಡಿ, ಮಳಿಗೆಗಳ ವಹಿವಾಟು ಬಂದ್.
    * ಕಟ್ಟಡಗಳ ಬಳಿ, ಒಳಗೆ ಅಪರಿಚಿತರು ಒಳಪ್ರವೇಶಿಸದಂತೆ ನಿರ್ಬಂಧ.
    * ನಿಗದಿತ ಸ್ಥಳದಲ್ಲಿ ನಿಂತು ರೋಡ್ ಶೋ ವೀಕ್ಷಿಸಬೇಕು.
    * ಕಟ್ಟಡಗಳ ಒಳಗೆ ಮತ್ತು ಹೊರಗೆ ಅಡ್ಡಾಡಲು ಅವಕಾಶವಿಲ್ಲ

    ಉಪಾಯ ಅಪಾಯ: ಆ ಕ್ಷಣ ಅಂಕಣ…

    ಯಾರ್ಯಾರಿಗೆ ಒಲಿಯಲಿದೆ ಸಿಂಹಾಸನ?: ದೇವೇಗೌಡರ ಕೋಟೆ ಭೇದಿಸಲು ಕೈ-ಕಮಲ ಯತ್ನ

    ಜಲಸುರಂಗ, ಅಚ್ಚರಿ ತರಂಗ: ಹೂಗ್ಲಿ ನದಿಯಡಿ ದೇಶದ ಮೊದಲ ಮೆಟ್ರೋ ಮಾರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts