More

    85% ಕಮಿಷನ್ ಕಾಂಗ್ರೆಸ್​ನ ಟ್ರ್ಯಾಕ್ ರೆಕಾರ್ಡ್: ಪ್ರಧಾನಿ ಮೋದಿ

    ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಲ್ಲ. ಯಾವುದೇ ಅಭಿವೃದ್ಧಿ ಮಾಡದೆ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಇರದೆ ಓಡಿ ಹೋಗಿದ್ದಾರೆ ಬಡವರ ಕಷ್ಟಗಳನ್ನು ಅರ್ಥ ಮಾಡಿಕೊಂಡಿಲ್ಲ. ಅಂತೆಯೇ ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    85% ಕಾಂಗ್ರೆಸ್​ನ ಟ್ರ್ಯಾಕ್ ರೆಕಾರ್ಡ್

    ಬಾದಾಮಿಯಲ್ಲಿ ಬಿಜೆಪಿ ಚುನಾವಣಾ ಬಹಿರಂಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ, ಬಿಜೆಪಿಗೆ ಜನರ ಬೆಂಬಲ ನೋಡಿ ಕಾಂಗ್ರೆಸ್ ಭಯ ಆರಂಭವಾಗಿದೆ. ಹೀಗಾಗಿ ನಿರಂತರವಾಗಿ ಟೀಕಿಸುತ್ತಾ ಬರುತ್ತಿದ್ದಾರೆ. 85% ಕಾಂಗ್ರೆಸ್​ನ ಟ್ರ್ಯಾಕ್ ರೆಕಾರ್ಡ್. ರಾಜೀವ್ ಗಾಂಧಿಯವರೇ ಇದನ್ನು ಹೇಳಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್​ನ ಭ್ರಷ್ಟಾಚಾರವನ್ನು ಬಂದ್ ಮಾಡಿದ್ದೇವೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ಗುಡುಗಿದರು.

    ಇದನ್ನೂ ಓದಿ: ಪ್ರಧಾನಿ ಮೆಗಾ ರೋಡ್ ಶೋ ಅಂತ್ಯ | ದಾರಿಯುದ್ದಕ್ಕೂ ಮೊಳಗಿದ ‘ಮೋದಿ…ಮೋದಿ…’ ಘೋಷಣೆ;

    ದೆಹಲಿಯಿಂದ 1 ರೂ. ಬಿಡುಗಡೆ ಆದರೆ ಜನರಿಗೆ 15 ಪೈಸೆ ತಲುಪುತ್ತದೆ ಎಂಬುದನ್ನು ಸ್ವತಃ ಕಾಂಗ್ರೆಸ್​ನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೇಳುತ್ತಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಫಲಾನುಭವಿ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಕಳ್ಳಾಟ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    10 ರೂಪಾಯಿಗೆ 1GB ಡಾಟಾ ನೀಡುತ್ತಿದ್ದೇವೆ

    ಕಾಂಗ್ರೆಸ್ ಅವಧಿಯಲ್ಲಿ 1GB Data ಬೆಲೆ 300 ರೂಪಾಯಿ ಇತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 10 ರುಪಾಯಿಗೆ ಒಂದು GB ಡಾಟಾ ನೀಡುತ್ತಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಗತಿ ಸಾಧಿಸಿದೆ. ಹೀಗಾಗಿ ಕಾಂಗ್ರೆಸ್​ನವರು ನನ್ನನ್ನು ಬೈಯ್ಯುತ್ತಾರೆ ಎಂದು ಪ್ರಧಾನ ಮೋದಿ ಹೇಳಿದರು.

    ಇದನ್ನೂ ಓದಿ: ಪ್ರಧಾನಿ ಹಾಗೂ ಮಣಿಕಂಠ ರಾಠೋಡ್ ವಿರುದ್ಧ ದೂರು ನೀಡಿದ ಕಾಂಗ್ರೆಸ್ ನಿಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts