ಅರಮನೆ ನಗರಿಯಲ್ಲಿ ಪ್ರಧಾನಿ ರೋಡ್ ಶೋ; ಮೈಸೂರಿನಲ್ಲಿ ಮೋದಿ ಹವಾ

Modi Road Show mysuru
Published on

ಮೈಸೂರು: ವಿಧಾನಸಭೆ ಚುನಾವಣಾ ಪ್ರಚಾರ ಕಣಕ್ಕೆ ಧುಮುಕಿರುವ ಪ್ರಧಾನಿ ನರೇಂದ್ರ ಮೋದಿ ಕೋಲಾರ, ಚನ್ನಪಟ್ಟ ಹಾಗೂ ಬೇಲೂರಿನಲ್ಲಿ ಸಮಾವೇಶದಲ್ಲಿ ಪಾಲ್ಗೊಂಡು, ಇದೀಗ ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಮೂರು ಸ್ಥಳಗಳಲ್ಲಿ ಸಾರ್ವಜನಿಕ ಸಭೆ ಉದ್ಧೇಶಿದ ಬಳಿಕ ಮೈಸೂರಿನಲ್ಲಿ ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸುವ ಮೂಲಕ ಹವಾ ಸೃಷ್ಟಿಸಿದರು. ರಸ್ತೆಯುದ್ದಕ್ಕೂ ನೆರದ ಜನಸ್ತೋಮ ಹೂಮಳೆಗರೆದು, ಜಯಘೋಷ ಮೊಳಗಿಸಿತು. ರಸ್ತೆಯ ಎರಡೂ ಬದಿಯಲ್ಲಿ ಸೇರಿದ್ದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಮೋದಿ... ಮೋದಿ... ಮೋದಿ... ಎಂದು ಘೋಷಣೆ ಕೂಗಿದರು.

ಜನರತ್ತ ಕೈಬೀಸಿದ ಮೋದಿ, ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್​ವರೆಗೆ ರೋಡ್ ಶೋ ನಡೆಸಿದರು. ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ರಾಮ್ ದಾಸ್​ ಪ್ರಧಾನಿಗೆ ಸಾಥ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net