

ಕಲಬುರಗಿ: ಭಗವಾನ್ ಶ್ರೀರಾಮನಿಗೆ ಆಂಜನೇಯ ಸಿಕ್ಕಿರುವುದು ಕರ್ನಾಟಕದ ಭೂಮಿಯಲ್ಲಿ. ಇದೀಗ ಭಗವಾನ್ ಶ್ರೀರಾಮನ ಭೂಮಿ ಅಯೋದ್ಯೆಯಿಂದ ಇಲ್ಲಿಗೆ ಬಂದಿದ್ದೆನೆ. ರಾಮನಿಗೆ ಸಂಕಟ ಬಂದಾಗ ಹನುಮ ಹೇಗಿದ್ದನೋ, ಅದೇ ಮಾದರಿಯಲ್ಲಿ ದೇಶಕ್ಕೆ ಸಂಕಟ ಬಂದಾಗ ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದ ಪ್ರಚಾರ ಸಭೆಯಲ್ಲ ಯೋಗಿ ಆದಿತ್ಯನಾಥ್ ಮಾತನಾಡುತ್ತಾ, ಪ್ರಧಾನಿ ಮೋದಿ ನೇತೃತ್ವದದಲ್ಲಿ ಭಾರತ ಬಲಿಷ್ಟ ರಾಷ್ಟ್ರವಾಗಿದೆ. ಮೋದಿ ನೇತೃತ್ವದದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಅನ್ನದಾತ ತೆಲೆ ತಗ್ಗಿಸಿ ನಡೆಯುವ ಬದಲು ತಲೆ ಎತ್ತಿ ನಡೆಯುವ ಹಾಗೆ ಮೋದಿ ಮಾಡಿದ್ದಾರೆ ಎಂದು ಹೇಳಿದರು.
45 ಕೋಟಿ ಜನರಿಗೆ ಜನಧನ್ ಖಾತೆ ಮೂಲಕ ಹಣ ಸಂದಾಯ ಮಾಡಲಾಗಿದೆ. 15 ಕೋಟಿ ಯುವಕರಿಗೆ ಸ್ಟಾರ್ಟ್ ಅಪ್ ಮೂಲಕ ಉದ್ಯೋಗ ನೀಡಲಾಗಿದೆ. ನಾವು ತುಷ್ಟಿಕರಣ ಮಾಡುವುದಿಲ್ಲ. ಬದಲಾಗಿ ಸಶಕ್ತಿಕರಣದ ದಾರಿಯಲ್ಲಿ ನಡೆಯುತ್ತೆವೆ. ಉತ್ತರ ಪ್ರದೇಶದಲ್ಲಿ ಯಾಕಿಷ್ಟು ಜನ ನಿಮ್ಮನ್ನ ಗೌರವಿಸ್ತಾರೆ ಎಂದು ನನ್ನನ್ನು ಅನೇಕ ಜನ ಕೇಳುತ್ತಾರೆ. ಡಬಲ್ ಇಂಜಿನ್ ಸರ್ಕಾರದಿಂದ ಇದೆಲ್ಲ ಸಾಧ್ಯ ಎಂದು ಅವರಿಗೆ ನಾನು ಉತ್ತರಿಸುತ್ತೇನೆ. ಯೋಗಿ ಆದಿತ್ಯನಾಥ್ ಮಾತನಾಡುತ್ತಾ, ಡಬಲ್ ಇಂಜಿನ್ ಸರ್ಕಾರದಿಂದ ಪಿಎಫ್ಐ ಕತ್ತು ಮುರಿಯುವ ಹಾಗೆ ಮಾಡಿದ್ದಾರೆ ಎಂದರು.
ಕಳೆದ ಬಾರಿ ಲೋಕಸಭಾ ಚುನಾಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಸೋಲಿಸಿದ್ದೀರಿ. ಬಿಜೆಪಿ ಕುಟಂಬ, ಜಾತಿವಾದ, ಅಸ್ಪೃಶ್ಯತೆಗೆ ಪ್ರಾಮುಖ್ಯತೆ ನೀಡುವುದಿಲ್ಲ. ಭಗವಾನ್ ಶ್ರೀರಾಮ, ಹನುಮಂತನನ್ನ ಭೇಟಿಯಾಗಿದ್ದ ಕರ್ನಾಟಕದಲ್ಲಿ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಸಮರ್ಥವಾಗಿ ಕೆಲಸ ಮಾಡಿದೆ. ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಕರೊನಾ ಸಂಧರ್ಭದಲ್ಲಿ ಬೆಂಗಳೂರುನಲ್ಲಿ ಕೂತಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ನಿಮ್ಮ ಪರವಾಗಿ ಕೆಲಸ ಮಾಡಿದ್ದಾರೆ. ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಸೋಲುವುದು ಗ್ಯಾರೆಂಟಿ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಮೋದಿಗೆ ವಿಷ ಸರ್ಪ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಖರ್ಗೆ ಹೇಳಿಕೆಯಿಂದ ಅವರ ಪುತ್ರ ಪ್ರಿಯಾಂಕ್ ಖರ್ಗೆ ಠೇವಣಿ ಕಳೆದುಕೊಳ್ಳುವುದು ಗ್ಯಾರೆಂಟಿ. ಖರ್ಗೆಯವರು ಮೋದಿಯನ್ನು ಅವಮಾನ ಮಾಡುವ ಮೂಲಕ ದೇಶಕ್ಕೆ ಅವಮಾನ ಮಾಡಿದ್ದಾರೆ. ಮೇ 13 ರಂದು ವಿಧಾನಸಭೆಗೆ ಹೆಚ್ಚಿನ ಪ್ರಮಾಣದಲ್ಲಿ ಯುವಕರು ಆಯ್ಕೆಯಾಗುತ್ತಾರೆ. ಮಣಿಕಂಠ ರಾಠೋಡ್ ಅವರನ್ನು ಗೆಲ್ಲಿಸುವ ಮೂಲಕ ಖರ್ಗೆ ಕುಟುಂಬದ ಠೇವಣಿ ಜಪ್ತಿ ಮಾಡುವಂತೆ ಮತದಾರರಿಗೆ ಯೋಗಿ ಆದಿತ್ಯನಾಥ್ ಕರೆ ನೀಡಿದರು.