More

    ಮುಳಬಾಗಿಲ ದೋಸೆ ಇಂದು ಸಂಪರ್ಕ ಕ್ಷೇತ್ರದ ಅಭಿವೃದ್ಧಿಯಿಂದಾಗಿ ಎಲ್ಲೆಡೆ ಪ್ರಸಿದ್ಧವಾಗಿದೆ: ಕೋಲಾರದಲ್ಲಿ ಮೋದಿ ಭಾಷಣ

    ಕೋಲಾರ: ಪ್ರಧಾನಿ ಮೋದಿ ಇಂದು ಎರಡನೇ ದಿನ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಈ ಸಂದರ್ಭ ಕೋಲಾರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು ಮುಳಬಾಗಿಲ ದೋಸೆಯನ್ನು ನೆನಪಿಸಿಕೊಂಡಿದ್ದಾರೆ. ಈ ಸಂದರ್ಭ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

    “ಚಿನ್ನದ ನಾಡು ಕೋಲಾರದ ಜನತೆಗೆ ನನ್ನ ನಮಸ್ಕಾರಗಳು” ಎನ್ನುತ್ತಾ ಭಾಷಣ ಶುರು ಮಾಡಿದ ಪ್ರಧಾನಿ ಮೋದಿ, “ಪೆಂಡಾಲ್​ನಿಂದ ಹೊರಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್​ನ ನಿದ್ದೆ ಹಾಳು ಮಾಡಲಿವೆ. ಕಾಂಗ್ರೆಸ್​ ಹಾಗೂ ಜೆಡಿಎಸ್​ ಸೇರಿಕೊಂಡು ಎಷ್ಟೇ ಆಟ ಆಡಿದರೂ ಅವರನ್ನು ಜನರು ಕ್ಲೀನ್ ಬೋಲ್ಡ್​ ಮಾಡಲಿದ್ದಾರೆ.

    ಕರ್ನಾಟಕದ ಜನರು ಈಗಾಗಲೇ ‘ಈ ಬಾರಿಯ ಸರ್ಕಾರ, ಬಹುಮತದ ಬಿಜೆಪಿ ಸರ್ಕಾರ’. ಕರ್ನಾಟಕದ ಈ ಚುನಾವಣೆ ಮುಂದಿನ 5 ವರ್ಷಗಳ ಕಾಲಕ್ಕೆ ಶಾಸಕರನ್ನು ಆಯ್ಕೆ ಮಾಡುವ ಚುನಾವಣೆ ಅಲ್ಲ. ಇದು ಮುಂದಿನ 25 ವರ್ಷಗಳ ಅಭಿವೃದ್ಧಿಗೆ ಸಂಬಂಧಿಸಿದ್ದು. ಈಗಾಗಲೇ ನೀವು ಅಸ್ಥಿರ ಸರ್ಕಾರದ ದುಷ್ಪರಿಣಾಮಗಳು ನೋಡಿದ್ದಾರೆ. ಅಸ್ಥಿರ ಸರ್ಕಾರದ ಅಡಿಯಲ್ಲಿ ಪ್ರಗತಿ ಸಾಧ್ಯವಿಲ್ಲ. ಇಂತಹ ಸರ್ಕಾರದಿಂದ ದೇಶದ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳು ತಡ ಆಗುತ್ತದೆ. ಆದರೆ ಭ್ರಷ್ಟಾಚಾರ ಮಾತ್ರ ವೇಗವಾಗಿ ಬೆಳೆಯುತ್ತದೆ.

    ಇದನ್ನೂ ಓದಿ:ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಷೋ

    ಕೇಂದ್ರದಲ್ಲಿ ಸ್ಥಿರ ಸರ್ಕಾರ ಬಂದದ್ದರಿಂದ ಅನೇಕ ವರ್ಷಗಳಿಂದ ಹಿಂದೆ ಬಿದ್ದಿದ್ದ ಯೋಜನೆಗಳನ್ನು ಬಿಜೆಪಿ ಪೂರ್ಣಗೊಳಿಸಿದೆ. ಕಾಂಗ್ರೆಸ್ ಸಮಯದಲ್ಲಿ ಇಡೀ ವಿಶ್ವವೇ ಭಾರತದ ಮೇಲಿನ ನಂಬಿಕೆಯನ್ನು ಕಳೆದುಕೊಂಡಿತ್ತು. ಆದರೆ ಬಿಜೆಪಿಗೆ ನೀವು ನೀಡಿದ ಮತದಿಂದಾಗಿ ಇಂದು ಭಾರತ ಜಗತ್ತಿನ ಬ್ರೈಟ್​ ಸ್ಪಾಟ್​ ಆಗಿದೆ. ಇಂದು ಭಾರತಕ್ಕೆ ತನ್ನದೇ ಆದಂತಹ ಪ್ರತಿಷ್ಟೆ ಇದೆ. ಇಡೀ ಭಾರತಕ್ಕೆ ಕೋವಿಡ್​ ವ್ಯಾಕ್ಸೀನ್​ ನೀಡಲಾಗಿದ್ದು ಇತರೆ ದೇಶಗಳಿಗೂ ನೀಡಿದ್ದೇವೆ. ನಾವು ಕರೋನಾ ಕಾಲದಲ್ಲಿ ನಡೆದುಕೊಂಡ ರೀತಿ ಜಗತ್ತಿಗೇ ಮಾದರಿಯಾಗಿತ್ತು.

    ಬಿಜೆಪಿಯ ಸಂಕಲ್ಪ ಕರ್ನಾಟಕವನ್ನು ದೇಶದ ನಂ.1 ರಾಜ್ಯ ಮಾಡುವುದಾಗಿದೆ. ಇದಕ್ಕಾಗಿ ಇಲ್ಲಿ ಡಬಲ್ ಇಂಜಿನ್​ ಸರ್ಕಾರದ ಅವಶ್ಯಕತೆ ಇದೆ. ಎಲ್ಲಿಯವರೆಗೆ ಕಾಂಗ್ರೆಸ್​ ಹಾಗೂ ಜೆಡಿಎಸ್​ನ ಸಂಘಟನೆ ಇಲ್ಲಿ ಇರುತ್ತದೋ ಅಲ್ಲಿಯವರೆಗೆ ಕರ್ನಾಟಕ ಹಿಂದೆ ಉಳಿದಿರುತ್ತದೆ. ಕಾಂಗ್ರೆಸ್​ನ ಹಳೆಯ ಇಂಜಿನ್​ ಕರ್ನಾಟಕವನ್ನು ವಿಕಸಿತವನ್ನಾಗಿ ಮಾಡುವುದಿಲ್ಲ.

    ಇದನ್ನೂ ಓದಿ: ರಾಜ್ಯ ವಿಧಾನಸಬೆ ಚುನಾವಣೆ; ಬಿಜೆಪಿ ಮೀಡಿಯಾ ಟೀಂಗೆ ಖಡಕ್​ ಸೂಚನೆ ನೀಡಿದ ಪ್ರಧಾನಿ ಮೋದಿ

    ಡಬಲ್ ಇಂಜಿನ್ ಆಧುನಿಕ ಸಂಪರ್ಕಕ್ಕಾಗಿ ಮಾಡುತ್ತಿರುವ ಕೆಲಸ ಇಲ್ಲಿನ ಅಭಿವೃದ್ಧಿಗೆ ಪೂರಕವಾಗಿ ಇರುತ್ತದೆ. ಒಳ್ಳೆಯ ಸಂಪರ್ಕದಿಂದಾಗಿ ಮುಳಬಾಗಿಲಿನ ದೋಸೆಯನ್ನು ದೂರ ದೂರದವರೆಗೆ ಕರೆದೊಯ್ದಿದೆ.

    ಇತ್ತೀಚೆಗೆ ಕಾಂಗ್ರೆಸ್​ ಸುಳ್ಳು ಗ್ಯಾರೆಂಟಿಗಳ ಬಂಡಲ್​ಗಳನ್ನು ತೆರೆದಿವೆ. ಅವರು ಯಾವುದೇ ಗ್ಯಾರೆಂಟಿಗಳನ್ನು ಪೂರೈಸುವುದಿಲ್ಲ. ಕಾಂಗ್ರೆಸ್ 2005ರಲ್ಲಿ ಪ್ರತೀ ಮನೆಗೂ ವಿದ್ಯುತ್​ ಸಂಪರ್ಕವನ್ನು ಕಲ್ಪಿಸುವ ಆಶ್ವಾಸನೆ ನೀಡಿದ್ದರು. ಈ ಆಶ್ವಾಸನೆಗಳನ್ನು ಪೂರೈಸಲು ಅವರಿಗೆ ಸುಮಾರು ಒಂಭತ್ತು ವರ್ಷಗಳ ಅವಧಿ ಇತ್ತು. ಆದರೆ ನಾವು 2014ರಲ್ಲಿ ಅಧಿಕಾರಕ್ಕೆ ಬಂದ ಒಂದು ಸಾವಿರ ದಿನಗಳಲ್ಲಿ ಈ ಗ್ಯಾರೆಂಟಿಗಳನ್ನು ನಾವು ಪೂರೈಸಿದ್ದೇವೆ. ಕಾಂಗ್ರೆಸ್​ ಗ್ಯಾರೆಂಟಿಗಳನ್ನು ನೀಡುತ್ತದೆ, ವಿಶ್ವಾಸ ದ್ರೋಹ ಮಾಡುತ್ತದೆ. ಆದರೆ ಬಿಜೆಪಿ ಕೆಲಸ ಮಾಡುತ್ತದೆ” ಎಂದು ಕಾಂಗ್ರೆಸ್​ ಮೇಲೆ ಹರಿಹಾಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts