“ಈ ಬಾರಿಯ ನಿರ್ಧಾರ, ಬಿಜೆಪಿ ಸರ್ಕಾರ”: ಕುಡಚಿಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ಮೋದಿ!

ಬೆಳಗಾವಿ: ಸೈನಿಕ ಸ್ಕೂಲ್ ನಲ್ಲಿ ಬಿಜೆಪಿ ಪ್ರಚಾರ ಸಭೆ ಮುಗಿಸಿ ಹೆಲಿಪ್ಯಾಡ್ ಗೆ ತೆರಳಿದ ಮೋದಿ, ಸೇನಾ ಹೆಲಿಕ್ಯಾಪ್ಟರ್​ನಲ್ಲಿ ಅಲ್ಲಿಂದ ನಿರ್ಗಮಿಸಿದರು. ನಂತರ ಬೆಳಗಾವಿ ಜಿಲ್ಲೆಯ ಕುಡಚಿ ಪ್ರಚಾರ ಸಭೆಗೆ ತೆರಳಿದ್ದಾರೆ.

2.45ರಿಂದ 3.25 ರ ವರೆಗೂ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದು ಅರ್ಧ ಗಂಟೆಗಳ ಕಾಲ ಮತದಾರರನ್ನುದ್ದೇಶಿಸಿ ಮಾತನಾಡಿದ್ದಾರೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿ ಭಾಗಿಯಾಗಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಭರದಿಂದ ನಡೆದ ಸಿದ್ದತೆ ನಡೆದಿದ್ದು ಎಸ್‌ಪಿ ನೇತೃತ್ವದಲ್ಲಿ ಒಂದೂವರೆ ಸಾವಿರಕ್ಕೂ ಅಧಿಕ ಪೊಲೀಸರಿಂದ ಬಂದೋಬಸ್ತ್ ಆಗಿದ್ದಾರೆ. ಕುಡಚಿಯಲ್ಲಿ ಮಾತನಾಡಿರುವ ಪ್ರಧಾನಿ, ಅಥಣಿ, ಕಾಗವಾಡ, ರಾಯಬಾಗ ಕುಡಚಿ ಕ್ಷೇತ್ರದ ಮೇಲೂ ಗಮನ ಇರಿಸಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ: ಕುಡಚಿಯಲ್ಲಿ ಕಾಂಗ್ರೆಸ್​ ಮೇಲೆ ವಾಗ್ದಾಳಿ ಮಾಡಿದ ಪ್ರಧಾನಿ ಮೋದಿ

ಜಿಲ್ಲೆಯಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲಲು ಮೋದಿ ಅಖಾಡಕ್ಕೆ ಇಳಿದಿದ್ದಾರೆ. ಸಮಾವೇಶದಲ್ಲಿ “ಕುಡಚಿಯ ನನ್ನ ಸೋದರ ಸೋದರಿಯರಿಗೆ ನಮಸ್ಕಾರಗಳು” ಎನ್ನುತ್ತಾ ಭಾಷಣ ಪ್ರಾರಂಭಿಸಿದ ಪ್ರಧಾನಿ ಮೋದಿ “ಕುಡಚಿಯ ಈ ಭೂಮಿ ವೀರರ ಶೌರ್ಯವಬನ್ನು ಕಂಡಿದೆ. ಛತ್ರಪತಿ ಶಿವಾಜಿ ಮಹಾರಾಜರ ಸುಶಾಸನ ಕಂಡಿದೆ. ಇಂದು ಇಲ್ಲಿ ವಿಕಸಿತ ಭಾರತ ಹಾಗೂ ವಿಕಸಿತ ಕರ್ನಾಟಕದ ಮಂತ್ರ ಕೇಳುತ್ತಿದೆ.

ಹಿಂದೆ ಬೆಳಗಾವಿಗೆ ಬಂದಿದ್ದಾಗ ಇಲ್ಲಿನ ತಾಯಂದಿರು ನನ್ನನ್ನು ಆಶೀರ್ವದಿಸಿದ್ದರು. ಇದನ್ನು ನಾನು ಮರೆಯಲು ಸಾಧ್ಯವಿಲ್ಲ. ಇಲ್ಲಿ ಪೆಂಡಾಲ್​ನ ಹೊರಗೂ ಜನ ಇರುವುದು ‘ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ’ ಎನ್ನುವುದಕ್ಕೆ ಸಾಕ್ಷಿಯಾಗಿದೆ”ಎಂದಿದ್ದಾರೆ.

ವೀರೆ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣರ ಶೌರ್ಯ ದೇಶಭಕ್ತರಿಗೆ ಪ್ರೇರಣೆ ನೀಡುತ್ತದೆ. ಕುಶಲ ಆಡಳಿತ ಮಾಡಿದ್ದ ಶಿವಾಜಿ ಮಹಾರಾಜರ ಮೂರ್ತಿಯನ್ನು ರಾಜಹಂಸ ಕೋಟೆಯಲ್ಲಿ ಸ್ಥಾಪಿಸಲು ನಮಗೂ ಹೆಮ್ಮೆ ಎನಿಸುತ್ತಿದೆ.

ಇದನ್ನೂ ಓದಿ: ಪ್ರಧಾನಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ; ಯತ್ನಾಳ್ ವಿರುದ್ಧ ಎಂ.ಬಿ.ಪಾಟೀಲ್ ಆಕ್ರೋಶ

ಕರ್ನಾಟಕದಲ್ಲಿ ಸಂಸ್ಕೃತಿ ಹಾಗೂ ಟೆಕ್ನಾಲಜಿ ಎರಡೂ ಜತೆಜತೆಗೇ ಸಾಗುತ್ತಿದೆ. ಇಲ್ಲಿ ಭಾರತದ ಪುರಾತನ ಹಾಗೂ ನೂತನ ಗುರುತು ಕಾಣಿಸುತ್ತಿದೆ. ಇದು ಡಬಲ್ ಎಂಜಿನ್​ ಸರ್ಕಾರದ ಪರಿಣಾಮ. ಬಿಜೆಪಿ ಜನರನ್ನೇ ಜನಾರ್ದನ ಎಂದು ಭಾವಿಸುತ್ತದೆ. ನೀವು ಕರ್ನಾಟಕವನ್ನು ದೇಶದ ನಂ.1 ರಾಜ್ಯ ಮಾಡಲು ನೀವೆಲ್ಲರೂ ಮೇ 10ರಂದು ಮತದಾನ ಮಾಡಬೇಕು. ಇಲ್ಲಿ ಮತ್ತೊಮ್ಮೆ ಡಬಲ್​ ಇಂಜಿನ್ ಸರ್ಕಾರ ಸ್ಥಾಪಿಸಲು ನಿಮ್ಮ ಆಶೀರ್ವಾದ ಬೇಕೇ ಬೇಕು. ಬಿಜೆಪಿ ಕರ್ನಾಟಕದ ಅಭಿವೃದ್ಧಿಗಾಗಿ ಹಳಬರ ಅನುಭವ ಹಾಗೂ ಹೊಸಬರ ಚೈತನ್ಯ ಇರುವ ಒಂದು ತಂಡ ತಯಾರಿಸಿದ್ದೇವೆ. ಅದಕ್ಕಾಗಿ ನಿಮ್ಮ ಆಶೀರ್ವಾದ ಬೇಕು” ಎಂದು ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Share This Article

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…

ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುವ ಈ 5 ಜನರ ಬಳಿ ನೀವು ಎಂದಿಗೂ ಹೋಗಬೇಡಿ

ಭಾರತದ ಉತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಒಬ್ಬರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಚಾಣಕ್ಯ ತಿಳಿಯದ ವಿಷಯವು…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ