ಬೆಳಗಾವಿ: ಕುಡಚಿಯ ನನ್ನ ಸೋದರ ಸೋದರಿಯರಿಗೆ ನಮಸ್ಕಾರಗಳು” ಎನ್ನುತ್ತಾ ಭಾಷಣ ಪ್ರಾರಂಭಿಸಿದ ಪ್ರಧಾನಿ ಮೋದಿ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿಯ ಸರ್ಕಾರ ಎಂದು ಘೋಷಣೆ ಕೂಗಿದರು.
ನಂತರ ಅವರು “ಬಿಜೆಪಿ ಕರ್ನಾಟಕದ ಹಳಬರ ಅನುಭವ ಹಾಗೂ ಹೊಸಬರ ಚೈತನ್ಯ ಇರುವ ತಂಡವನ್ನು ಕಟ್ಟಿದ್ದೇವೆ. ನಾವು ಅಮೃತ ಕಾಲದ ಸಂಕಲ್ಪಗಳನ್ನು ಸಶಕ್ತಗೊಳಿಸಲು ನಿಮ್ಮ ಆಶೀರ್ವಾದ ಬೇಕಿದೆ.
ಇದನ್ನೂ ಓದಿ: ನೆಚ್ಚಿನ ಪ್ರಧಾನಿಗೆ ಬೆಲ್ಲದ ಮೋದಿ ಮೂರ್ತಿಯ ಉಡುಗೊರೆ!
ನೀವೆಲ್ಲರೂ ಬಿಜೆಪಿ ಸರ್ಕಾರದ ಮೊದಲು ಸಮ್ಮಿಶ್ರ ಸರ್ಕಾರದ ಎಲ್ಲಾ ಗಮನ ಸರ್ಕಾರವನ್ನು ಉಳಿಸುವುದರಲ್ಲೇ ಇತ್ತು. ಇದರಿಂದಾಗಿ ಕರ್ನಾಟಕ ಹಲವು ಅವಕಾಶಗಳನ್ನು ಕಳೆದುಕೊಂಡಿದೆ. ಕರ್ನಾಟಕದಂತಹ ಸಮೃದ್ಧ ರಾಜ್ಯ ಅಸ್ಥಿರ ರಾಜಕೀಯದ ಕಾರಣ, ಇಲ್ಲಿನ ಯುವಜನರ ಕನಸುಗಳು ನುಚ್ಚುನೂರಾಗಿದೆ. ಇಲ್ಲಿ ಸ್ಥಿರ ಸರ್ಕಾರ, ಬಹುಮತದ ಸರ್ಕಾರದ ಅವಶ್ಯಕತೆ ಇದೆ. ಕರ್ನಾಟಕಕ್ಕೆ ಬಿಜೆಪಿ ಮಾತ್ರವೇ ಸ್ಥಿರ ಸರ್ಕಾರವನ್ನು ನೀಡಬಲ್ಲದು” ಎಂದರು.
ಇದನ್ನೂ ಓದಿ: “ಈ ಬಾರಿಯ ನಿರ್ಧಾರ, ಬಿಜೆಪಿ ಸರ್ಕಾರ”: ಕುಡಚಿಯಲ್ಲಿ ಕನ್ನಡದಲ್ಲಿ ಮಾತನಾಡಿದ ಪ್ರಧಾನಿ ಮೋದಿ!
ಈ ಸಂದರ್ಭ ಕಾಂಗ್ರೆಸ್ ಮೇಲೆ ಮುಗಿಬಿದ್ದ ಅವರು “ಕಾಂಗ್ರೆಸ್ನ ಭ್ರಷ್ಟಾಚಾರದ ಕಾಲದಲ್ಲಿ ಬಡವರು, ದಲಿತರು, ಹಿಂದುಳಿದವರು, ಆದಿವಾಸಿ ಹಾಗೂ ಪ್ರತಿಯೊಬ್ಬರೂ ತಮ್ಮ ಹಕ್ಕಿನಿಂದ ವಂಚಿತರಾಗಿದ್ದರು. ಕಡಿಮೆ ಬೆಲೆಯ ರೇಷನ್ ನಮ್ಮ ದೇಶದಲ್ಲಿ ಅನೇಕ ವರ್ಷಗಳಿಂದ ಇತ್ತು. ಆದರೆ ಕಾಂಗ್ರೆಸ್ನ ಭ್ರಷ್ಟಾಚಾರದ ಕಾಲದಲ್ಲಿ ಫಲಾನುಭವಿಗೆ ರೇಷನ್ ಪೂರ್ತಿಯಾಗಿ ಲಭಿಸುತ್ತಿರಲಿಲ್ಲ. ಇದರಿಂದಾಗಿ ಎಸ್.ಸಿ, ಎಸ್.ಟಿ, ಒಬಿಸಿ ಸಮುದಾಯದವರು ತೊಂದರೆಗೆ ಈಡಾದರು. ಆದರೆ ಡಬಲ್ ಎಂಜಿನ್ ಸರ್ಕಾರದ ಅಡಿಯಲ್ಲಿ ಪೂರ್ಣಪ್ರಮಾಣದಲ್ಲಿ ರೇಷನ್ ಲಭಿಸುತ್ತಿದೆ” ಎಂದು ಹೇಳಿದರು.
ಸಮಾವೇಶ ಕಾರ್ಯಕ್ರಮದ ನಂತರ ಅವರು ಸಂಜೆ 3.40ಕ್ಕೆ ಕೋಳಿಗುಡ್ಡ – ಯಬರಟ್ಟಿ ಗ್ರಾಮದ ಹೆಲಿಪ್ಯಾಡ್‌ದಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತೆರಳಿದ್ದು ಸಂಜೆ 4.25ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ.