ವಿಜಯಪುರ: ದಲಿತರ ಅಭಿವೃದ್ಧಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಬಸವಣ್ಣನ ಸಾಮಾಜಿಕ ನ್ಯಾಯವನ್ನು ಕಾಂಗ್ರೆಸ್ ಎಂದೂ ಪರಿಗಣಿಸಿರಲಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಬೀದರ್ ಸಮಾವೇಶದ ಬಳಿಕ ವಿಜಯಪುರದಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಪಂಚನದಿಗಳ ನಾಡು ವಿಜಯಪುರದ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು. ಇಷ್ಟೊತ್ತು ನಾನು ಬಸವೇಶ್ವರರ ಕರ್ಮ ಭೂಮಿಯಲ್ಲಿ ಇದ್ದೆ. ಈಗ ನಾನು ಬಸವೇಶ್ವರರ ಜನ್ಮಭೂಮಿಯಲ್ಲಿ ಇದ್ದೇನೆ. ಸದ್ಯ ನಾನು ಸಿದ್ದೇಶ್ವರ ಶ್ರೀ ನಡೆದಾಡಿದ ಭೂಮಿಯಲ್ಲಿದ್ದೇನೆ. ಇಲ್ಲಿನ ಪರಂಪರೆಗೆ ಅವರು ಹಾಕಿಕೊಟ್ಟ ಮಾರ್ಗ ಸ್ಮರಣೀಯ ಎಂದರು.
ಇದನ್ನೂ ಓದಿ: ಜೂನ್ 1 ರಿಂದ ನೀವು ಕರೆಂಟ್ ಬಿಲ್ ಕಟ್ಟಬೇಡಿ: ಮಳವಳ್ಳಿಯಲ್ಲಿ ಡಿ.ಕೆ. ಶಿವಕುಮಾರ್ ಹೇಳಿಕೆ
ಬಹುಮತದ ಬಿಜೆಪಿ ಸರ್ಕಾರ
ಇಷ್ಟೊಂದು ಜನರು ಇಲ್ಲಿ ಸೇರಿದ್ದೀರಿ. ಇದರಿಂದಲೇ ಗೊತ್ತಾಗುತ್ತದೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು. ಬಸವಣ್ಣ ದಾಸೋಹ ಮತ್ತು ಕಾಯಕದ ಮಹತ್ವ ಸಾರಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಅದೇ ಮಾರ್ಗದಲ್ಲಿ ಸಾಗಿದೆ. ಸಮಾಜದ ಪ್ರತಿ ವರ್ಗಕ್ಕೂ ಬಿಜೆಪಿ ಆದ್ಯತೆ ನೀಡಿದೆ. ವಂಚಿತರಿಗೆ ಸಾಮಾಜಿಕ, ಆರ್ಥಿಕ ಸುರಕ್ಷತೆ ನೀಡಿದೆ. ಸಾಮಾಜಿಕ ನ್ಯಾಯವನ್ನು ಡಬಲ್ ಇಂಜಿನ್ ಸರ್ಕಾರ ಪಾಲಿಸುತ್ತಿದೆ. ಬಸವಣ್ಣನ ಸಾಮಾಜಿಕ ನ್ಯಾಯವನ್ನು ಕಾಂಗ್ರೆಸ್ ಪರಿಗಣಿಸಿರಲಿಲ್ಲ. ದೇಶ-ವಿದೇಶಗಳಲ್ಲಿ ಬಸವಣ್ಣನ ಸಂದೇಶ ಸಾರುವ ಅವಕಾಶ ಸಿಕ್ಕಿದೆ ಎಂದರು.
ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ
ದಲಿತರ ಅಭಿವೃದ್ಧಿಯನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಕಾಂಗ್ರೆಸ್ ಕಾಲದಲ್ಲಿ ಶೇ. 85 ರಷ್ಟು ಭ್ರಷ್ಟಾಚಾರ ಇತ್ತು. ಬಡವರ ಕಣ್ಣೀರನ್ನು ಒರೆಸುವ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ. ಇಷ್ಟು ವರ್ಷ ಯಾವ ಸರ್ಕಾರವು ಬಂಜಾರ, ಲಂಬಾಣಿ ಸಮುದಾಯಕ್ಕೆ ಆದ್ಯತೆ ನೀಡಿಲ್ಲ. ಬಿಜೆಪಿ ಸರ್ಕಾರದಿಂದ 9 ಲಕ್ಷ ಕುಟುಂಬಗಳಿಗೆ ನೂತನ ಮನೆಯ ಕನಸು ಸಾಕಾರಗೊಂಡಿದೆ. ಕರ್ನಾಟಕದ ಬಂಜಾರ ಸಮುದಾಯಗಳಿಗೆ ಹಕ್ಕುಪತ್ರ ನೀಡಲಾಗಿದೆ. ಕಾಂಗ್ರೆಸ್ ಆರಂಭಿಸಿದ ಯೋಜನೆಗಳಲ್ಲಿ ದಲ್ಲಾಳಿಗಳು ಮತ್ತು ಭ್ರಷ್ಟರಿಗೆ ಲಾಭವಾಗಿವೆ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟರ ಖಾತೆ ಸೇರುತ್ತಿತ್ತು
ಬಿಜೆಪಿ ಸರ್ಕಾರದಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಯಲ್ಲಿದೆ. 29 ಲಕ್ಷ ಕೋಟಿ ರೂ. ಹಣ ನೇರವಾಗಿ ಜನರ ಖಾತಗೆ ಜಮೆಯಾಗಿದೆ. ನೂರಕ್ಕೆ ನೂರರಷ್ಟು ಹಣ ಫಲಾನುಭವಿಗಳ ಖಾತೆಗೆ ಸೇರುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಆ ಎಲ್ಲ ಹಣ ಭ್ರಷ್ಟರ ಖಾತೆ ಸೇರುತ್ತಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಶೇ. 85 ರಷ್ಟು ಭ್ರಷ್ಟಾಚಾರ ನಡೆಯುತ್ತಿತ್ತು. ಬಡವರ ಕಣ್ಣೀರು ದೂರ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾಯ್ದರು.
ಇದನ್ನೂ ಓದಿ: ಗಟ್ಟಿ ಮುಟ್ಟಾಗಿದ್ದೇನೆ ಎಂದು ಟ್ವೀಟ್ ಮಾಡಿ ಅಭಿಮಾನಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ…
ಯೋಜನೆ ರೂಪಿಸುತ್ತಿದೆ
ಕರ್ನಾಟಕದ ಜನತೆಗೆ ಉಚಿತ ರೇಷನ್ ಸಿಗುತ್ತಿದೆ. ಕಾಂಗ್ರೆಸ್ ಇದ್ದಿದ್ದರೆ ಅದರಲ್ಲೂ ಕಡಿತ ಆಗುತ್ತಿತ್ತು. ಈಗ ರೈತರ ಖಾತೆಗೆ ಹಣ ನೇರವಾಗಿ ಜಮೆ ಆಗುತ್ತಿದ್ದೆ. ಕಾಂಗ್ರೆಸ್ ಇದ್ದಿದ್ದರೆ ಈ ಹಣ ನಿಮಗೆ ತಲುಪುತ್ತಿರಲಿಲ್ಲ. ರೈತರ ಅಗತ್ಯಗಳನ್ನು ಗಮನಿಸಿ ಬಿಜೆಪಿ ಸರ್ಕಾರ ಯೋಜನೆ ರೂಪಿಸುತ್ತಿದೆ. ಬಿಜ ವಿತರಣೆಯಿಂದ ಮಾರುಕಟ್ಟೆವರೆಗೆ ರೈತ ಸಂಪರ್ಕ ಜಾಲ ಸೃಷ್ಟಿಸಿದೆ. ಜೋಳವನ್ನು ಕೂಡ ದೇಶ-ವಿದೇಶಗಳಲ್ಲಿ ಬ್ರ್ಯಾಂಡ್ ಮಾಡಲಾಗುತ್ತಿದೆ ಎಂದರು.
ಸುಮ್ಮನಾಗಬೇಡಿ
ನನಗೆ ಗೊತ್ತಿದೆ ಕರ್ನಾಟಕದ ಜನತೆ ಕಾಂಗ್ರೆಸ್ಗೆ ವೋಟು ಹಾಕಲ್ಲ. ಬದಲಿಗೆ ಬಿಜೆಪಿ ಅಭ್ಯರ್ಥಿಗಳಿಗೆ ವೋಟು ಹಾಕುತ್ತಾರೆ. ಮೋದಿ ಬಂದ ಭಾಷಣ ಮಾಡಿದ, ಉತ್ಸಾಹ ಜೋರಿತ್ತು ಎಂದು ಸುಮ್ಮನಾಗಬೇಡಿ. ಮೇ 10ಕ್ಕೆ ಮತ ಹಾಕಿ, ಬಿಜೆಪಿ ಚುನಾಯಿಸಿ. ಕರ್ನಾಟಕವನ್ನು ನಂಬರ್ ಒನ್ ಮಾಡಲು ಮೋದಿ ನಿಮ್ಮ ಆಶೀರ್ವಾದ ಕೇಳಿದ್ದಾರೆ ಎಂದು ಹೇಳಿ ಮೋದಿ ಭಾಷಣ ಮುಗಿಸಿದರು.
ಕರ್ನಾಟಕವನ್ನು ನಂ. 1 ಮಾಡುವ ಚುನಾವಣೆ ಇದಾಗಿದೆ: ಬೀದರ್ನಲ್ಲಿ ಪ್ರಧಾನಿ ಮೋದಿ ಹೇಳಿಕೆ
ಮೋದಿ ರೋಡ್ ಶೋಗೆ ತಣ್ಣೀರು ಎರಚುತ್ತಾನಾ ಮಳೆರಾಯ? ನಗರದಲ್ಲಿ ಮೂರುಗಂಟೆಗಳ ಕಾಲ ಮಳೆಯಾಗುವ ಮುನ್ಸೂಚನೆ
ಹಾಗಾದ್ರೆ ನನ್ನ ಸ್ನೇಹಿತ ಡಿ.ಕೆ.ಶಿವಕುಮಾರ್ ಸಿಎಂ ಆಗ್ಲಿ! ರಾಜ್ಯಸಭಾ ಸದಸ್ಯ ಜಗ್ಗೇಶ್