More

    ಎಸ್​ಸಿ/ಎಸ್​ಟಿ ಕುರಿತ ಸೋಷಿಯಲ್​ ಮೀಡಿಯಾ ಪೋಸ್ಟ್​: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಮಾಳವಿಯಾಗೆ ಕರ್ನಾಟಕ ಪೊಲೀಸರಿಂದ ಸಮನ್ಸ್​

    ಮುಂಬೈ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಸದಸ್ಯ ಅಮಿತ್ ಮಾಳವಿಯಾ ಅವರಿಗೆ ಒಂದು ವಾರದೊಳಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಕರ್ನಾಟಕ ಪೊಲೀಸರು ಸಮನ್ಸ್ ನೀಡಿದ್ದಾರೆ.

    ಎಸ್‌ಸಿ/ಎಸ್‌ಟಿ ಸಮುದಾಯ ಕುರಿತು ಕರ್ನಾಟಕ ಬಿಜೆಪಿ ಘಟಕವು ಹಂಚಿಕೊಂಡ ಟ್ವೀಟ್‌ಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಹಾಜರಾಗಲು ಸಮನ್ಸ್​ ಜಾರಿ ಮಾಡಲಾಗಿದೆ.

    “ಈ ಪ್ರಕರಣದ ತನಿಖೆಯ ಉದ್ದೇಶಕ್ಕಾಗಿ, ಈ ಸೂಚನೆಯನ್ನು ಸ್ವೀಕರಿಸಿದ 7 ದಿನಗಳೊಳಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 11 ಗಂಟೆಗೆ ಕೆಳಗಿರುವ ತನಿಖಾಧಿಕಾರಿಯ ಮುಂದೆ ಹಾಜರಾಗಲು ನಿಮಗೆ ಈ ಮೂಲಕ ಸೂಚಿಸಲಾಗಿದೆ” ಎಂದು ಸಮನ್ಸ್​ನಲ್ಲಿ ಹೇಳಲಾಗಿದೆ.

    ಬಿಜೆಪಿ ರಾಜ್ಯ ಘಟಕ ಶೇರ್ ಮಾಡಿರುವ ಅನಿಮೇಟೆಡ್ ವಿಡಿಯೋವನ್ನು ತೆಗೆದುಹಾಕುವಂತೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ಗೆ ಪೊಲೀಸರು ಮಂಗಳವಾರ ಸೂಚಿಸಿದ್ದಾರೆ.

    ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಜೆಪಿ ನಡ್ಡಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚುನಾವಣೆ ಆಯೋಗಕ್ಕೆ ದೂರು ನೀಡಿದ ನಂತರ ಈಗ ಈ ಬೆಳವಣಿಗೆ ನಡೆದಿದೆ.

    ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕದಂತೆ ಎಸ್‌ಸಿ ಮತ್ತು ಎಸ್‌ಟಿ ಸದಸ್ಯರನ್ನು ಬೆದರಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

    ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಕೆಪಿಸಿಸಿ ನೀಡಿದ ದೂರಿನಲ್ಲಿ, ಅಮಿತ್ ಮಾಳವಿಯಾ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಭಾರತೀಯ ಜನತಾ ಪಕ್ಷದ ಅಧಿಕೃತ ಖಾತೆಯಿಂದ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವನ್ನು ಕಾಂಗ್ರೆಸ್ ಹೈಲೈಟ್ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಾಮಾಜಿಕ ಮಾಧ್ಯಮ ಉಸ್ತುವಾರಿ- ಕರ್ನಾಟಕ ಬಿಜೆಪಿ ಅವರ ಸೂಚನೆಯ ಮೇರೆಗೆ ಪೋಸ್ಟ್ ಮಾಡಲಾಗಿದೆ ಎನ್ನಲಾದ ವಿಡಿಯೋವನ್ನು ಮೇ 4 ರಂದು ಪೋಸ್ಟ್ ಮಾಡಲಾಗಿದೆ.

    ಬಿಜೆಪಿ ಹೇಳಿಕೊಂಡಂತೆ SC, ST ಮತ್ತು OBC ಸಮುದಾಯಗಳಿಂದ ಮುಸ್ಲಿಂ ಸಮುದಾಯಕ್ಕೆ ಹಣವನ್ನು ತಿರುಗಿಸುವ ಪ್ರಸ್ತಾಪವು ತನ್ನ ಪ್ರಣಾಳಿಕೆಯಲ್ಲಿಲ್ಲ ಎಂದು ಕಾಂಗ್ರೆಸ್​ ಹೇಳಿದೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿಯವರು ಮತ ಯಾಚನೆಗಾಗಿ ಸುಳ್ಳು ಮಾಹಿತಿ ಹಬ್ಬಿಸಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ.

    ಲೋಕಸಭೆ ಚುನಾವಣೆಯಲ್ಲಿ ಮತಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ವೀಡಿಯೊವನ್ನು ಪ್ರಸಾರ ಮಾಡಲಾಗಿದೆ ಎಂದು ಕೆಪಿಸಿಸಿ ಆರೋಪಿಸಿದೆ.

    ಅಕ್ಷಯ ತೃತೀಯದಲ್ಲಿ ಚಿನ್ನ ಖರೀದಿಸಿದವರು ಶ್ರೀಮಂತರಾದರು: ಕಳೆದ 12 ವರ್ಷಗಳ ದಾಖಲೆ ಹೀಗಿದೆ ನೋಡಿ..

    ಲಿವ್ ಇನ್ ರಿಲೇಶನ್​ಶಿಪ್​ನಲ್ಲಿ ಇರಲು ಮುಸ್ಲಿಮರಿಗೆ ಹಕ್ಕಿಲ್ಲ: ಹೈಕೋರ್ಟ್ ಈ ಆದೇಶ ನೀಡಿದ್ದೇಕೆ?

    ಐಶ್ವರ್ಯಾ ರೈ – ಕತ್ರಿನಾ ಕೈಫ್ ಇವರಲ್ಲಿ ಯಾರು ಹೆಚ್ಚು ಸುಂದರಿ?: ಈ ಪ್ರಶ್ನೆಗೆ ಸಲ್ಮಾನ್​ ಖಾನ್​ ಉತ್ತರಿಸಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts