More

    ರಾಜ್ಯ ವಿಧಾನಸಬೆ ಚುನಾವಣೆ; ಬಿಜೆಪಿ ಮೀಡಿಯಾ ಟೀಂಗೆ ಖಡಕ್​ ಸೂಚನೆ ನೀಡಿದ ಪ್ರಧಾನಿ ಮೋದಿ

    ಬೆಂಗಳೂರು: ರಾಜ್ಯ ವಿಧಾನಸಬೆ ಚುಣಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದಾರೆ.

    ಇನ್ನು ಪ್ರಧಾನಿ ನರೇಂದ್ರ ಮೋದಿ ಆಗಮನದ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಆನೆ ಬಲ ಬಂದಂತಾಗಿದ್ದು ನಾಯಕರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ.

    ಗಂಭೀರವಾಗಿ ತೆಗೆದುಕೊಂಡಿರುವ ಮೋದಿ

    ಇನ್ನು ರಾಜ್ಯ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ನಾಯಕರು ಶತಾಯ ಗತಾಯ ಈ ಭಾರಿ ಸ್ವಂತ ಬಲದ ಮೇಲೆ ಸರ್ಕಾರವನ್ನು ರಚಿಸಬೇಕೆಂದು ಪಣತೊಟ್ಟಿದ್ದಾರೆ.

    ಇನ್ನು ಶನಿವಾರ ನಗರದ ನೈಸ್​ ರೋಡ್​ ಜಂಕ್ಷನ್​ನಿಂದ ಸುಮನಹಳ್ಳಿ ಸಿಗ್ನಲ್​ವರೆಗೆ ರೋಡ್​ ಶೋ ನಡೆಸಿದ ಪ್ರಧಾನಿ ಮೋದಿ ಬಳಿಕ ಇಡೀ ರಾಜ್ಯದ ಸಮಗ್ರ ಮಾಹಿತಿಯನ್ಕನುಲೆ ಹಾಕಿದ್ದಾರೆ.

    modi

    ಇದನ್ನೂ ಓದಿ: ಬಿಜೆಪಿಯಿಂದ ಮಾತ್ರ ಕರ್ನಾಟಕ-ಕರಾವಳಿಯ ರಕ್ಷಣೆ: ಅಮಿತ್ ಷಾ

    ಮೀಡಿಯಾ ಟೀಂ​ ಜೊತೆ ಚರ್ಚೆ

    ಇನ್ನು ರೋಡ್​ ಶೋ ಮುಗಿಸಿ ವಾಪಸ್​ ಮಾದವಾರ ಹೆಲಿಪ್ಯಾಡ್​ ಕಡೆ ಪ್ರಯಾಣಿಸಿದ್ದ ಮೋದಿ ಬಳಿಕ ಬಿಜೆಪಿ ಮೀಡಿಯಾ ಟೀಂ ಜೊತೆ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.

    ಒಂದು ದಿನಕ್ಕೆ ಪಕ್ಷದ ಕಚೇರಿಯಲ್ಲಿ ಸಚಿವರು ಹಿರಿಯ ಮುಖಂಡರು ಕೇಂದ್ರ ಸಚಿವರು ನಡೆಸುತ್ತಿರುವ ಸುದ್ದಿಗೋಷ್ಠಿಗಳ ವಿವರ. ಮೋದಿ ವಿಷದ ಹಾವು ಇದ್ದಂತೆ ಎಂಬ ಖರ್ಗೆ ಹೇಳಿಕೆ ಬಗ್ಗೆ ಕೆಲಕಾಲ ಮೀಡಿಯಾ ಟೀಮ್ ಜೊತೆ ಮಾತುಕತೆ ನಡೆಸಿದ್ದಾರೆ.

    ವೈರಲ್ ಆಗಲು ಕಾರಣ ಏನು?

    ಇತ್ತೀಚಿಗೆ ಚುನಾವಣೆ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷಸರ್ಪ ಹೇಳಿಕೆ ಕುರಿತು ಪ್ರಧಾನಿ ಮೋದಿ ಮೀಡಿಯಾ ಟೀಂ ಜೊತೆ ಚರ್ಚಿಸಿದ್ದು ಹೇಳಿಕೆ ಇಷ್ಟು ವೈರಲ್​ ಆಗಲು ಕಾರಣ ಏನು ಎಂಬುದನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

    ಖರ್ಗೆ‌ ಹೇಳಿಕೆಯಿಂದ ಬಿಜೆಪಿಗೆ ಚುನಾವಣೆಯಲ್ಲಿ ಲಾಭೋ, ನಷ್ಟವೋ. ಮೀಡಿಯಾ ಟೀಮ್ ಮತ್ತು ಎಲೆಕ್ಷನ್ ವಾರ್ ರೂಮ್ ಗಳು‌ ಎಷ್ಟು‌ ಇವೆ ಯಾವ ರೀತಿ ಕೌಂಟರ್ ಕೊಡಲಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಟ್ವಿಟರ್ ಫೇಸ್ಬುಕ್ ವಾಟ್ಸಾಪ್ ಗ್ರೂಪ್ ಗಳಲ್ಲಿ ಚುನಾವಣೆ ಮುಗಿಯುವವರೆಗೂ ನಿರಂತರವಾಗಿ ಸಕ್ರಿಯರಾಗಿರುವಂತೆ ಕಿವಿ ಮಾತು. ಉಳಿದಿರುವ 13 ದಿನಗಳು ಬಿಜೆಪಿ ಪಾಲಿಗೆ ಗೋಲ್ಡನ್ ಟೈಮ್ಸ್ ಇದನ್ನ ಸದುಪಯೋಗಪಡಿಸಿಕೊಳ್ಳುವಂತೆ ಮೋದಿ ಮೀಡಿಯಾ ಟೀಂಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts