ಪ್ರಧಾನಿ ರೋಡ್ ಶೋ; ಭದ್ರತೆಯ ಕಾರಣಕ್ಕೆ ವಧುವನ್ನು ತಡೆದ ಪೊಲೀಸರು | ಮೋದಿಯಂತೆ ವೇಷ ತೊಟ್ಟ ಬಾಲಕ

Police Chekking
Published on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಾಗಡಿ ರಸ್ತೆಯ ನೈಸ್ ರಸ್ತೆ ಜಂಕ್ಷನ್​ನಿಂದ ಸುಮನಹಳ್ಳಿಯವರೆಗೆ ನಾಲ್ಕು ಮುಕ್ಕಾಲು ಕಿ.ಮೀ ದೂರದವರೆಗೆ ರೋಡ್ ಶೋ ನಡೆಸುವ ಕಾರಣ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಮೋದಿ ರೋಡ್​ ಶೋ ವೀಕ್ಷಿಸಲು ಸಾವಿರಾರು ಜನರು ಆಗಮಿಸಿದ್ದಾರೆ.

ವಧುವನ್ನು ತಡೆದ ಪೊಲೀಸರು

ಮೋದಿ ರೋಡ್ ಶೋ ಹಿನ್ನೆಲೆ ಒದಗಿಸಲಾಗಿರುವ ಭದ್ರತೆ ಮದುಮಗಳಿಗೆ ಸಮಸ್ಯೆ ತಂದೊಡ್ಡಿದೆ. ಸುಂಕದ ಕಟ್ಟೆ ಬಳಿಯ ಕಲ್ಯಾಣ ಮಂಟಪಕ್ಕೆ ತೆರಳಲು ಮದುಮಗಳು ಬಂದಿದ್ದಾಳೆ. ಈ ವೇಳೆ ಭದ್ರತಾ ನಿರತ ಪೊಲೀಸರು ಮದುಮಗಳಿಗೆ ತೆರಳಲು ಅಡ್ಡಿಪಡಿಸಿದ್ದಾರೆ. ವಧುವನ್ನು ತಡೆದು ನಿಲ್ಲಿಸಿದ್ದಾರೆ.

ಕಲಶ ಹಿಡಿದು ಬಂದ ವಧು

ಕಲಶ ಹಿಡಿದು ಸ್ಕೂಟರ್​ನಲ್ಲಿ ಬಂದ ಮದುಮಗಳಿಗೆ ಭದ್ರತೆಯ ಕಾರಣದಿಂದ ಮದುವೆ ಮಂಟಪಕ್ಕೆ ತೆರಳಲು ಪೊಲೀಸರು ಅಡ್ಡಿ ಪಡಿಸಿದ ಘಟನೆ ನಡೆದಿದೆ. ವಿಚಾರಣೆ ನಡೆಸಿ, ಮಾಧ್ಯಮಗಳ ಕ್ಯಾಮರಾ ಕಂಡು ಕೊನಗೆ ಮದುಮಗಳಿಗೆ ತೆರಳಲು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ.

ಮೋದಿಯಂತೆ ವೇಷತೊಟ್ಟ ಬಾಲಕ

ಪ್ರಧಾನಿ ಮೋದಿ ರೋಡ್​ ಶೋ ವೀಕ್ಷಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಈ ವೇಳೆ ಯಲಹಂಕದ 5ನೇ ತರಗತಿ ವಿದ್ಯಾರ್ಥಿ ಶಶಾಂಕ್ ಮೋದಿಯಂತೆ ವೇಷ ತೊಟ್ಟು ಗಮನ ಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net