More

    ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ… ನಾಟಕ ಮಾಡಬೇಕಾದ ಅವಶ್ಯಕತೆ ನನಗಿಲ್ಲ: ಜಿ.ಪರಮೇಶ್ವರ್

    ತುಮಕೂರು: ಚುನಾವಣಾ ಪ್ರಚಾರಕ್ಕೆ ಬಂದಾಗ ಸಾವಿರಾರು ಕಾರ್ಯಕರ್ತರು ಸೇರಿ, ನನ್ನನ್ನು ಮೇಲೆತ್ತಿಕೊಂಡರು. ಜೆಸಿಬಿ ಮೇಲೆಯಿಂದ ಹೂವು ಹಾಕುತ್ತಿದ್ದರು. ಈ ವೇಳೆ ನನ್ನ ತಲೆಯಿಂದ ರಕ್ತ ಬರಲು ಆರಂಭವಾಯಿತು. ಬಳಿಕ ನಮ್ಮ ಆಸ್ಪತ್ರೆಯ ವೈದ್ಯರು ಭೇಟಿ ಮಾಡಿ ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಅಕ್ಕಿರಾಂಪುರದ ಆರೋಗ್ಯ ಕೇಂದ್ರಕ್ಕೆ‌ ಕರೆತಂದರು ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ರಾಹುಲ್ ಗಾಂಧಿಗೆ ಬುದ್ದಿ ಭ್ರಮಣೆಯಾಗಿದ್ದು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಬಿಎಸ್​ವೈ

    ದುಷ್ಕರ್ಮಿಗಳ ಕೃತ್ಯ

    ಜಿ. ಪರಮೇಶ್ವರ್​ ಮೇಲೆ ಕೊರಟಗೆರೆ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕಲ್ಲು ತೂರಾಟ ನಡೆದ ಪ್ರಕರಣ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಜಿ.ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಹೂವಿನಲ್ಲಿ ಕಲ್ಲು ಬಂದಿಲ್ಲ. ಯಾರೋ ದುಷ್ಕರ್ಮಿಗಳು ಎಸೆದಿದ್ದಾರೆ ಎಂದು ಹೇಳಿದ್ದಾರೆ.

    ರಾಜಕೀಯ ಉದ್ದೇಶ ಇರಬಹುದು

    ರಾಜಕೀಯ ಉದ್ದೇಶಕ್ಕೆ ಕಲ್ಲು ಎಸೆದಿರುವ ಸಾಧ್ಯತೆಯೂ ಇದೆ. ಒಂದೂವರೆ ಇಂಚಿನಷ್ಟು ಗಾಯ ಆಗಿದ್ದು, ಸರ್ಜಿಕಲ್ ಗಮ್ ಕ್ಲೂ ಹಾಕಿದ್ದಾರೆ. ನಾಟಕ ಮಾಡುವ ಅವಶ್ಯಕತೆ ನನಗಿಲ್ಲ. ಏಟು ತಿಂದವನು ನಾನು, ನೋವು ನನಗೆ ಗೊತ್ತು. ಎಲ್ಲರೂ ಶಾಂತಿಯಿಂದ ಚುನಾವಣೆ ಮಾಡಬೇಕು ಎಂದು ಹೇಳಿದರು.

    ಇದನ್ನೂ ಓದಿ: ಕುಡಚಿಯಲ್ಲಿ ಕಾಂಗ್ರೆಸ್​ ಮೇಲೆ ವಾಗ್ದಾಳಿ ಮಾಡಿದ ಪ್ರಧಾನಿ ಮೋದಿ

    ತನಿಖೆ ನಡೆಯಲಿ

    ನಾನು 35 ವರ್ಷ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನಗೆ ವಿರೋಧಿಗಳು ಬಹಳ ಕಡಿಮೆ. ದ್ವೇಷ ಇದ್ದರೆ ಈ ರೀತಿಯಲ್ಲಿ ಮಾಡಬಾರದು. ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಪೊಲೀಸರು ದೂರ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಹಿಂದೆ 1999ರಲ್ಲಿ ಒಂದು ಬಾರಿ ಚಾಕುವಿನಲ್ಲಿ ಹಲ್ಲೆ ಮಾಡಿದ್ದರು. ಪದೇ ಪದೇ ನನ್ನ ಮೇಲೆ ಈ ರೀತಿಯಲ್ಲಿ ಆಗುತ್ತಿದ್ದು, ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ಜಿ.ಪರಮೇಶ್ವರ್ ಆಗ್ರಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts