More

    ನೀತಿ ಸಂಹಿತೆ ಉಲ್ಲಂಘನೆ; ಕೆಕೆಆರ್​ ಆಟಗಾರನಿಗೆ ದಂಡ ವಿಧಿಸಿ ನಿಷೇಧ ಹೇರಿದ ಬಿಸಿಸಿಐ

    ಕಲ್ಕತ್ತಾ: ಇಲ್ಲಿನ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಡೆಲ್ಲಿ ಕ್ಯಾಪಿಟಲ್ಸ್​ ಎದುರು ಕಲ್ಕತ್ತಾ ನೈಟ್​ರೈಡರ್ಸ್​ 7 ವಿಕೆಟ್​ಗಳ ಜಯ ಸಾಧಿಸಿದೆ. ಗೆಲುವಿನ ಸಂಭ್ರಮದಲ್ಲಿರುವ ಕಲ್ಕತ್ತಾ ನೈಟ್​ರೈಡರ್ಸ್​ಗೆ ಶಾಕ್​ ಒಂದು ಎದುರಾಗಿದ್ದು, ತಂಡದ ವೇಗಿಗೆ ಶೇ. 100 ರಷ್ಟು ದಂಡ ವಿಧಿಸಿ ನಿಷೇಧ ಹೇರಲಾಗಿದೆ.

    ತಮ್ಮ ಬಿಗಿ ಬೌಲಿಂಗ್​ ದಾಳಿ ಮೂಲಕ ಕೆಕೆಆರ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಹರ್ಷಿತ್​ ರಾಣಾ ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರ ಬೆನ್ನಲ್ಲೇ ಅವರಿಗೆ ಬಿಸಿಸಿಐ ಪಂದ್ಯದ ಶೇ. 100ರಷ್ಟು ದಂಡ ವಿಧಿಸಿ ಒಂದು ಪಂದ್ಯ ಆಡದಂತೆ ನಿಷೇಧ ಹೇರಿದೆ.

    ಇದನ್ನೂ ಓದಿ: ಸಂಪೂರ್ಣ ಆಘಾತಕಾರಿ; ಕೆಕೆಆರ್​ ಆಟಗಾರನ ನಡೆಗೆ ಸುನೀಲ್​ ಗಾವಸ್ಕರ್ ಕೆಂಡ

    ಈ ಪಂದ್ಯದಲ್ಲಿ ಡೆಲ್ಲಿ ಬ್ಯಾಟ್ಸ್​ಮನ್​ಗಳಾದ ಅಭಿಷೇಕ್​ ಪೊರೆಲ್​ ಹಾಗೂ ರಶಿಕ್​ ಸಲಾಂ ಅವರ ವಿಕೆಟ್​ ಪಡೆದ ಹರ್ಷಿತ್​ ರಾಣಾ ಅತಿಯಾದ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಹೀಗಾಗಿ ಎರಡು ಬಾರಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾ ಅವರ ಒಟ್ಟು ಪಂದ್ಯ ಶುಲ್ಕದ ಮೇಲೆ ಶೇಕಡ 100 ರಷ್ಟು ದಂಡ ವಿಧಿಸಲಾಗಿದ್ದು, ಒಂದು ಪಂದ್ಯದ ಆಡದಂತೆ ನಿಷೇಧ ಹೇರಲಾಗಿದೆ.

    ಈ ಪಂದ್ಯದಲ್ಲಿ 4 ಓವರ್​ಗಳನ್ನು ಬೌಲಿಂಗ್ ಮಾಡಿದ್ದ ಹರ್ಷಿತ್ ಒಟ್ಟು 28 ರನ್​ ನೀಡಿ 2 ವಿಕೆಟ್​ ಕಬಳಿಸಿದರು. ಇತ್ತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬೆನ್ನಲ್ಲೇ ಯುವ ವೇಗಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts