More

    ಸಂಪೂರ್ಣ ಆಘಾತಕಾರಿ; ಕೆಕೆಆರ್​ ಆಟಗಾರನ ನಡೆಗೆ ಸುನೀಲ್​ ಗಾವಸ್ಕರ್ ಕೆಂಡ

    ಕಲ್ಕತ್ತಾ: ಇಲ್ಲಿನ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ 46ನೇ ಐಪಿಎಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಶ್ರೇಯಸ್​ ಅಯ್ಯರ್​ ನಾಯಕತ್ವದ ಕಲ್ಕತ್ತಾ ನೈಟ್​ರೈಡರ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ.

    ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಇನ್ನಿಲ್ಲದಂತೆ ಕಾಡಿದ ಕಲ್ಕತ್ತಾ ಬೌಲರ್​ಗಳು ಎದುರಾಳಿ ತಂಡವನ್ನು 20 ಓವರ್​ಗಳಲ್ಲಿ 153 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 154 ರನ್​ಗಳ ಗುರಿ ಬೆನ್ನತ್ತಿದ್ದ ಕಲ್ಕತ್ತಾ ನೈಟ್​ರೈಡರ್ಸ್​ ತಂಡವು ಫಿಲ್​ ಸಾಲ್ಟ್​ (68 ರನ್​, 33 ಎಸೆತ, 7 ಬೌಂಡರಿ, 5 ಸಿಕ್ಸರ್) ಅರ್ಧಶತಕದ ಫಲವಾಗಿ 16.3 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 157 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

    Vaibhav Arora

    ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಕಾಲ್​ಸೆಂಟರ್​ ಬಂದ್; ಲಕ್ಷಾಂತರ​ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಿದೆ AI

    ಇನ್ನು ಪಂದ್ಯದ ಬಳಿಕ ಕೆಕೆಆರ್​ ಪ್ರದರ್ಶನದ ಕುರಿತು ಮಾತನಾಡಿದ ಮಾಜಿ ಆಟಗಾರ ಸುನೀಲ್​ ಗಾವಸ್ಕರ್, ವೇಗಿ ವೈಭವ್​ ಅರೋರಾ ಪ್ರದರ್ಶನದ ಕುರಿತು ಕಿಡಿಕಾರಿದ್ದಾರೆ. 18ನೇ ಓವರ್​ನಲ್ಲಿ ಕುಲ್​ದೀಪ್​ ಯಾದವ್​ ಬ್ಯಾಟಿಂಗ್​ ಮಾಡುವ ವೇಳೆ ವೇಗಿ ವೈಭವ್​ ಅರೋರಾ ಎಸೆದ ಚೆಂಡು ಬ್ಯಾಟ್ಸ್​ಮನ್​ ಪ್ಯಾಡಿಗೆ ತಗುಲಿತ್ತು. ಈ ವೇಳೆ ಅಂಪೈರ್​ಗೆ ಮನವಿ ಮಾಡಲಾಯಿತು. ಅದನ್ನು ನೋಡುವುದಾದರೆ ಚೆಂಡು ಸ್ಪಷ್ಟವಾಗಿ ವಿಕೆಟ್ಸ್​ಗೆ ತಾಗದೆ ಕಾಲಿನ ಕೆಳಗೆ ಹೋಗುತ್ತಿರುವುದನ್ನು ನೋಡಬಹುದಾಗಿದೆ.

    ಈ ವೇಳೆ ವೈಭವ್​ ಅರೋರಾ ನಾಯಕ ಶ್ರೇಯಸ್​ ಅಯ್ಯರ್​ಗೆ ಒತ್ತಾಯಪೂರ್ವಕವಾಗಿ ಡಿಆರ್​ಎಸ್​ ತೆಗೆದುಕೊಳ್ಳುವಂತೆ ಮಾಡುತ್ತಾರೆ. ಬಳಿಕ ರಿವೀವ್​ ವೇಸ್ಟ್​ ಆಗುತ್ತದೆ. ನನ್ನ ಪ್ರಕಾರ ವೇಗಿ ವೈಭವ್​ ಅರೋರಾ ತಾವೆಸೆದ ಚೆಂಡನ್ನು ಅಂದಾಜಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಈ ವಿಚಾರ ನನಗೆ ಆಘಾತಕಾರಿ ಎನ್ನಿಸಿದೆ. ಅವರ ನಿರ್ಧಾರದಿಂದ ಕೆಕೆಆರ್​ ಬಳಿ ಉಳಿದುಕೊಂಡಿದ್ದ ಡಿಆರ್​ಎಸ್​ ವ್ಯರ್ಥವಾಯಿತು. ವೇಗಿ ವೈಭವ್​ ಅರೋರಾ ತೆಗೆದುಕೊಂಡ ತಪ್ಪು ನಿರ್ಧಾರದಿಂದ ತಂಡ ಬೆಲೆ ತೆರಬಾಕಾಯಿತು ಎಂದು ಮಾಜಿ ಕ್ರಿಕೆಟಿಗ ಸುನೀಲ್​ ಗಾವಸ್ಕರ್​ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts