More

    ಬೆರಳಿನ ಬದಲು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು; ಮುಂದೆ ನಡೆದಿದ್ದು ಮಾತ್ರ…!

    ತಿರುವನಂತಪುರಂ: ರೋಗಿಯೊಬ್ಬರಿಗೆ ಬೆರಳಿನ ಬದಲು ವೈದ್ಯರು ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ವೈದ್ಯರು ಎಡವಟ್ಟು ಮಾಡಿ ಪೇಚಿಗೆ ಸಿಲುಕಿರುವ ಘಟನೆ ಕೋಝಿಕ್ಕೋಡ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ನಡೆದಿದೆ.

    ವೈದ್ಯರ ಈ ನಿರ್ಲಕ್ಷ್ಯಕ್ಕೆ ಹಲವರು ಕಿಡಿಕಾರಿದ್ದು, ಮಗುವಿನ ಪೋಷಕರು ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇತ್ತ ವಿಚಾರಣೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಸಚಿವರು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಗುವಿನ ಪೋಷಕರು, ನಮ್ಮ ಮಗಳ ಕೈಯಲ್ಲಿ ಆರು ಬೆರಳುಗಳಿದ್ದ ಕಾರಣ ಅದನ್ನು ತೆಗೆಸಲು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಂತೆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆದಿದೆ. ಶಸ್ತ್ರಚಿಕಿತ್ಸೆಯ ಕೆಲ ಹೊತ್ತಿನ ಬಳಿಕ ಮಗಳನ್ನು ಮಾತನಾಡಿಸಲು ಹೋದಾಗ ಆಕೆಯ ಬಾಯಿಗೆ ಹತ್ತಿ ಇಟ್ಟು ಪ್ಲ್ಯಾಸ್ಟರ್​ ಸುತ್ತಿ ಕಳಿಸಲಾಗಿತ್ತು.

    Six Fingers

    ಇದನ್ನೂ ಓದಿ: ಪಂದ್ಯದ ವೇಳೆ ಹಳಸಿದ ಆಹಾರ ನೀಡಿದ ಆರೋಪ; ಕೆಎಸ್​ಸಿಎ ವಿರುದ್ಧ FIR ದಾಖಲು

    ಪರಿಶೀಲಿಸಿದಾಗ ಮಗುವಿನ ಕೈಯನ್ನು ಪರೀಕ್ಷಿಸಿದಾಗ ಆರನೇ ಬೆರಳು ಹಾಗೆಯೇ ಇತ್ತು. ಕೆಲ ಹೊತ್ತಿನ ಬಳಿಕ ಬೆರಳಿನ ಆಪರೇಷನ್​​ ಬದಲಾಗಿ ತಪ್ಪಾಗಿ ವೈದ್ಯರು ನಾಲಿಗೆ ಆಪರೇಷನ್​ ಮಾಡಿರುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಸರ್ಕಾರದ ಆರೋಗ್ಯ ಸಚಿವೆ ವೀಣಾ, ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿಯಾಗದಂತೆ ಕ್ರಮ ವಹಿಸಲಾಗುವುದು. ಮಗುವಿನ ನಾಲಿಗೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts