More

    ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಷೋ

    ನಗರದಲ್ಲಿ ಏ.30ರಂದು ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತ ಬೇಟೆ ನಡೆಸಲಿದ್ದಾರೆ. ಮೋದಿ ಆಗಮನದಿಂದಾಗಿ ಕಮಲ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ.


    ನವದೆಹಲಿಯಿಂದ ನೇರವಾಗಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ ನಂತರ ಓವಲ್ ಮೈದಾನಕ್ಕೆ ಹೆಲಿಕಾಪ್ಟರ್‌ನಲ್ಲಿ ಬರಲಿದ್ದು, ಮೈಸೂರಿನ ಪಾರಂಪರಿಕ ವಸ್ತುಗಳಾದ ವೀಳ್ಯದೆಲೆ, ಶ್ರೀಗಂಧ, ಮೈಸೂರು ಸಿಲ್ಕ್ ಬಟ್ಟೆ ನೀಡಿ ಅವರನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗಿದೆ. ನಾದಸ್ವರ ಸೇರಿದಂತೆ ಜಾನಪದ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು ಪ್ರಧಾನಿಯನ್ನು ಬರ ಮಾಡಿಕೊಳ್ಳಲಿದ್ದಾರೆ. 5 ಕಿಮೀ ರೋಡ್ ಶೋ ನಡೆಸಲಿದ್ದಾರೆ.


    ಯಾವ ಮಾರ್ಗ:
    ಓವಲ್ ಮೈದಾನದ ಹೆಲಿಪ್ಯಾಡ್‌ನಿಂದ ಸಂಜೆ 5.30ಕ್ಕೆ ಕಾರಿನಲ್ಲಿ ಮೋದಿ ರೋಡ್ ಶೋ ಪ್ರಾರಂಭಿಸಲಿದ್ದಾರೆ. ರೋಡ್ ಶೋ ಮುಡಾ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಸಂಸ್ಕೃತ ಪಾಠಶಾಲೆ, ನಗರ ಬಸ್ ನಿಲ್ದಾಣ, ಕೆ.ಆರ್.ವೃತ್ತ, ನ್ಯೂ ಸಯ್ಯಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಹಳೆಯ ಆರ್‌ಎಂಸಿ ರಸ್ತೆ, ಬಂಬೂಬಜಾರ್, ಹೈವೇ ವೃತ್ತ ಮೂಲಕ ಸಾಗಿ ಮಿಲೇನಿಯಂ ವೃತ್ತದಲ್ಲಿ ಅಂತ್ಯಗೊಳ್ಳಲಿದೆ.


    ಮೋದಿ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಪಾರಂಪರಿಕ ಉಡುಗೆ ತೊಟ್ಟ ಜನರು ಸ್ವಾಗತಿಸಲಿದ್ದಾರೆ. ಅಲ್ಲದೆ, ರಸ್ತೆ ಇಕ್ಕೆಲಗಳಲ್ಲಿ ನರೇಂದ್ರ ಮೋದಿ ಸಾಗಿಬಂದ ಹಾದಿ, ಅವರ ಅಭಿವೃದ್ಧಿ ಕಾರ್ಯಗಳು, ಅವರು ನೀಡಿದ ಕೊಡುಗೆಗಳ ಭಿತ್ತಿ ಚಿತ್ರ ಹಾಕಲಾಗಿದೆ. ಇದರೊಂದಿಗೆ ರಸ್ತೆಯ ಎರಡು ಬದಿಯಲ್ಲಿ ಪ್ರಧಾನಿ ಮೋದಿ ಅವರ ಸಾಧನೆ ಅನಾವರಣಗೊಳ್ಳಲಿದೆ. ರೋಡ್ ಶೋಗೆ 30ಕ್ಕೂ ಹೆಚ್ಚು ಕಲಾ ತಂಡಗಳು ಮೆರುಗು ನೀಡಲಿವೆ.


    ಹಿರಿಯ ನಾಗರಿಕರಿಗೆ 5 ಸ್ಥಳಗಳಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಿಲೇನಿಯಂ ವೃತ್ತದಲ್ಲಿ ರೋಡ್ ಶೋ ಅಂತ್ಯಗೊಂಡ ನಂತರ ಬನ್ನಿಮಂಟಪ ಹೆಲಿಪ್ಯಾಡ್‌ನಿಂದ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ನಂತರ ದೆಹಲಿಗೆ ತೆರಳಲಿದ್ದಾರೆ.


    ಬಿಗಿ ಪೊಲೀಸ್ ಬಂದೋಬಸ್ತ್:
    ಮೋದಿ ಅವರು ರೋಡ್ ಶೋ ನಡೆಸಲಿರುವ ಮಾರ್ಗದ ಎರಡು ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಸಾರ್ವಜನಿಕರು ದಾಟಿ ಹೊರಬರದಂತೆ ಕಬ್ಬಿಣದ ಜಾಲರಿ ಅಳವಡಿಸಲಾಗಿದೆ. ಆಯಕಟ್ಟಿನ ಜಾಗದಲ್ಲಿ ಈಗಾಗಲೇ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಎಸ್‌ಪಿಜಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ತಾಲೀಮು, ಸಂಚಾರ ದಟ್ಟಣೆ:
    ಶನಿವಾರ ಸಂಜೆ ಎಸ್‌ಪಿಜಿ ಮತ್ತು ನಗರ ಪೊಲೀಸ್ ಅಧಿಕಾರಿಗಳು ಪೂರ್ಣ ಪ್ರಮಾಣದ ತಾಲೀಮು ನಡೆಸಿದರು. ಇದರಿಂದಾಗಿ 2 ಗಂಟೆಗೂ ಅಧಿಕ ಕಾಲ ನಗರದಲ್ಲಿ ಸಂಚಾರ ದಟ್ಟಣೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts