More

    ಜೆಡಿಎಸ್​ಗೆ ಹಾಕುವ ಮತ ಕಾಂಗ್ರೆಸ್​ಗೆ ಹೋದಂತೆ: ಜೆಡಿಎಸ್ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ

    ಚನ್ನಪಟ್ಟಣ: ಕಾಂಗ್ರೆಸ್ ಪಕ್ಷ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್, ಜೆಡಿಎಸ್ ಎರಡು ಕುಟುಂಬ ಪಕ್ಷಗಳು. ಜೆಡಿಎಸ್​ಗೆ ಹಾಕುವ ಪ್ರತಿಯೊಂದು ಮತವೂ ಕಾಂಗ್ರೆಸ್​ಗೆ ಹೋಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮಾತನಾಡುತ್ತಾ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಮಹತ್ವದ್ದಾಗಿದೆ. ರಾಮನಗರದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಸಾಧ್ಯ. ಬಡಜನರ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡಿದ್ದು, ಬದಲಾವಣೆಗೆ ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಇದನ್ನೂ ಓದಿ: ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಹಿಳಾ ಮೋರ್ಚಾ ಪತ್ರಿಕಾಗೋಷ್ಠಿ: ಮಹಿಳಾ ಪರ ಯೋಜನೆಗಳ ಜಾರಿಗೆ ತಂದ ಬಿಜೆಪಿ ಸರ್ಕಾರ

    ಡಬಲ್ ಇಂಜಿನ್ ಸರ್ಕಾರ ಅಂದ್ರೆ ಅಭಿವೃದ್ಧಿ

    ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಲವರಷ್ಟೇ ಅವರಿಗೆ ಪರಿವಾರದವರು, ಕೆಲವರಿಗಷ್ಟೇ ಪ್ರಯೋಜನ ಸಿಗುತ್ತದೆ. ಆದರೆ ಬಿಜೆಪಿಗೆ ರಾಜ್ಯದ ಪ್ರತಿಯೊಬ್ಬರೂ ಪರಿವಾರದವರು. ಡಬಲ್ ಇಂಜಿನ್ ಸರ್ಕಾರದಲ್ಲಿ ರಾಮನಗರದ ಮೂರು ಲಕ್ಷ ಜನರ ಬ್ಯಾಂಕ್ ಖಾತೆ ತೆರೆಯಲಾಗಿದೆ. ಗ್ಯಾಸ್ ಸಂಪರ್ಕ, ಶೌಚಾಲಯ, ಉಚಿತ ಚಿಕಿತ್ಸೆ, ನಳ ಸಂಪರ್ಕ, ಉಚಿತ ರೇಷನ್ ಎಲ್ಲವೂ ಡಬಲ್ ಇಂಜಿನ್ ಸರ್ಕಾರದಲ್ಲಿ ಸಿಗುತ್ತದೆ. ಡಬಲ್ ಇಂಜಿನ್ ಸರ್ಕಾರ ಅಂದರೆ ಅಭಿವೃದ್ಧಿ ಎಂದರು.

    ವಿಶ್ವಾಸಘಾತುಕತನದ ಮತ್ತೊಂದು ಹೆಸರೇ ಕಾಂಗ್ರೆಸ್. ರೈತರ ಹೆಸರಿನಲ್ಲಿ ಕಾಂಗ್ರೆಸ್ ವಿಶ್ವಾಸದ್ರೋಹ ಮಾಡಿದೆ. ಕಾಂಗ್ರೆಸ್ ಸುಳ್ಳು ಸಾಲಮನ್ನು ಘೋಷಣೆ ಮಾಡಿತ್ತು. ಅವರ ಕಡೆಯವರೇ ಸಾಲ ಮನ್ನಾ ಯೋಜನೆಯ ಲಾಭ ಪಡೆದುಕೊಂಡರು. ಹೀಗಾಗಿ ನಿಜವಾದ ರೈತರಿಗೆ ಇದರ ಲಾಭ ಸಿಗಲಿಲ್ಲ. ರೈತರ ಸಾಲಮನ್ನಾದ ದೊಡ್ಡ ಭಾಗ ಭ್ರಷ್ಟಾಚಾರಿಗಳಿಗೆ, ಅವರ ಸಂಬಂಧಿಗಳಿಗೆ ಹೋಗಿತ್ತು. ಇದೇ ಕಾಂಗ್ರೆಸ್​ನ ಟ್ರ್ಯಾಕ್ ರೆಕಾರ್ಡ್ ಎಂದು ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: 2 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ… 3ನೇ ಬಾರಿ ಜನತೆ ಯಾಕೆ ಆಶೀರ್ವಾದ ಮಾಡಬಾರದು? ಡಿಕೆಶಿಗೆ ಟಾಂಗ್ ಕೊಟ್ಟ ಎಚ್​ಡಿಕೆ

    ಇದೇ ನಿಜವಾದ ಗ್ಯಾರಂಟಿ ಯೋಜನೆ

    ಕಾಂಗ್ರೆಸ್‌ನವರು ಚುನಾವಣೆಯ ದೃಷ್ಟಿಯಿಂದ ಸುಳ್ಳು ಗ್ಯಾರಂಟಿ ನೀಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಖಾತೆಗೆ ಇದುವರೆಗೆ 2.5 ಲಕ್ಷ ಕೋಟಿ ರೂ. ರೈತರ ಖಾತೆಗೆ ನೀಡಲಾಗಿದೆ. ರಾಮನಗರ ರೈತರ ಖಾತೆಗೆ 300 ಕೋಟಿ ರೂ. ಬಂದಿದೆ. 6+4 ಸೇರಿ ಹತ್ತು ಸಾವಿರ ರೂ. ಡಬಲ್ ಇಂಜಿನ್ ಸರ್ಕಾರ ಕೊಟ್ಟಿದೆ. ಇದೇ ನಿಜವಾದ ಗ್ಯಾರೆಂಟಿ ಯೋಜನೆ.

    ಕಾಂಗ್ರೆಸ್​ನ ಸ್ವಂತ ವ್ಯಾರಂಟಿ‌ ಮುಗಿದಿದೆ. ಹೀಗಾಗಿ ಕಾಂಗ್ರೆಸ್​ನ ಗ್ಯಾರೆಂಟಿ ಸುಳ್ಳು. ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರು. ಆದರೆ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಯಾವುದೇ ಗ್ಯಾರೆಂಟಿ ಯೋಜನೆಗಳನ್ನು ಜಾರಿಗ ತಂದಿಲ್ಲ. ಹಿಮಾಚಲ ಪ್ರದೇಶದ ಸಹೋದರಿಯರು ಒಂದೂವರೆ ಸಾವಿರ ರೂ. ಗ್ಯಾರಂಟಿ ಯೋಜನೆಗಾಗಿ ಕಾಯುತ್ತಿದ್ದಾರೆ. ಅಲ್ಲಿನ ಸಹೋದರಿಯರಿಗೆ ಕಾಂಗ್ರೆಸ್ ವಿಶ್ವಾಸ ದ್ರೋಹ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ಮೊದಲ ಸಂಪುಟದಲ್ಲಿ ಡೀಸೆಲ್ ದರ ಹೆಚ್ಚಿಸಿದರು. ಬಿಜೆಪಿ ಜನಪರ ಯೋಜನೆಗಳನ್ನು ರದ್ದು ಮಾಡಿದರು. ಇದುವೇ ಕಾಂಗ್ರೆಸ್​ನ ನಿಜವಾದ ಮುಖವಾಡ. ಅಧಿಕಾರ ಸಿಗುತ್ತಿದ್ದಂತೆ ಬಡವರನ್ನು ಮರೆಯುವುದು ಕಾಂಗ್ರೆಸ್​ನ ನೀತಿ ಎಂದು ಮೋದಿ ಹೇಳಿದರು.

    ಇದನ್ನೂ ಓದಿ: ರಾಣೆಬೆನ್ನೂರ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ವಿರುದ್ಧ ಎಫ್ಐಆರ್ ದಾಖಲು

    ಕಾಂಗ್ರೆಸ್ ರಿವರ್ಸ್ ಗೇರ್ ಹಾಕುತ್ತದೆ

    ಬಿಜೆಪಿ ಸದಾ ಯುವ ಸಮೂಹದ ಹಿತ ದೃಷ್ಟಿ ತಾಳಿದ್ದು, ಮುದ್ರಾ ಯೋಜನೆ ತಂದಿದೆ. ಇದರಡಿ ಏಳು ಲಕ್ಷ ಯುವಕರಿಗೆ ಲಾಭ ಸಿಕ್ಕಿದೆ. ರಾಮನಗರದ ಯುವಕರಿಗೆ ಇದರಡಿ 3 ಸಾವಿರ ಕೋಟಿ ಫಲ‌ ದೊರೆತಿದೆ. ಕಾಂಗ್ರೆಸ್ ಬಂದರೆ ಬಿಜೆಪಿಯ ಒಳ್ಳೆಯ ಯೋಜನೆಗಳಿಗೆ ರಿವರ್ಸ್ ಗೇರ್ ಹಾಕುತ್ತದೆ. ಜೆಡಿಎಸ್ ಬೆಂಬಲವೂ ಇದಕ್ಕೆ ಇದೆ. ಇಲ್ಲಿನ ಜನ ಕಾಂಗ್ರೆಸ್- ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

    ಚನ್ನಪಟ್ಟಣ ಗೊಂಬೆಗೆ ಪ್ರೋತ್ಸಾಹ

    ಕಾಂಗ್ರೆಸ್ ಚನ್ನಪಟ್ಟಣದ ಪರಂಪರೆಯ ಉದ್ಯೋಗವನ್ನು ಹಾಳು ಮಾಡಿತ್ತು. ಕಡಿಮೆ ದರದ ಕಳಪೆ ವಿದೇಶಿ ಗೊಂಬೆಗಳನ್ನು ಮಾರುಕಟ್ಟೆಗೆ ಬರುವಂತೆ ಮಾಡಿದ್ದೇ ಕಾಂಗ್ರೆಸ್. ಮನ್ ಕಿ ಬಾತ್​ನಲ್ಲಿ ಇಲ್ಲಿನ ಗೊಂಬೆಗಳ ಬಗ್ಗೆ ಮಾತಾಡಿದ್ದೆ. ಭಾರತದ ಗೊಂಬೆಗಳನ್ನು ಖರೀದಿಸಲು ನಾವು ಪ್ರೋತ್ಸಾಹ ನೀಡಿದ್ದೆವು. ಬಳಿಕ 1000 ಕೋಟಿ ರೂ. ಮೌಲ್ಯದ ಗೊಂಬೆಗಳ ರಪ್ತು ಆಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

    ಇದನ್ನೂ ಓದಿ: ಅಭಿವೃದ್ಧಿ ಜತೆಗೆ ಶಾಂತಿಗೆ ಆದ್ಯತೆ: ಮಹಾದೇವಪುರದ ಬಿಜೆಪಿ ಅಭ್ಯರ್ಥಿ ಮಂಜುಳಾ ಭರವಸೆ

    ಬೈಗುಳವನ್ನು ಸ್ವೀಕರಿಸುತ್ತೇನೆ

    ಕಾಂಗ್ರೆಸ್​ನವರು ನನ್ನನ್ನು ಬೈಯ್ಯುತ್ತಾ, ಸರ್ಪ ಎಂದು ಕರೆಯುತ್ತಾರೆ. ಹಾವು ಶಿವನ ಮಾಲೆ, ನನ್ನ ಮಾಲೆ ಜನರೇ ಆಗಿದ್ದಾರೆ. ಹೀಗಾಗಿ ಅವರ ಬೈಗುಳವನ್ನು ಸ್ವೀಕರಿಸುತ್ತೇನೆ. ನನ್ನ ವಿರುದ್ಧ ಕಾಂಗ್ರೆಸ್​ನಲ್ಲಿ ಬೈಗುಳದ ಸ್ಪರ್ಧೆ ನಡೆಯುತ್ತದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts