More

    ಬಿಜೆಪಿ ಚುನಾವಣಾ ಕಚೇರಿಯಲ್ಲಿ ಮಹಿಳಾ ಮೋರ್ಚಾ ಪತ್ರಿಕಾಗೋಷ್ಠಿ: ಮಹಿಳಾ ಪರ ಯೋಜನೆಗಳ ಜಾರಿಗೆ ತಂದ ಬಿಜೆಪಿ ಸರ್ಕಾರ

    ತುಮಕೂರು: ಗೃಹಿಣಿ ಶಕ್ತಿ ಯೋಜನೆ ಮೂಲಕ ಭೂ ರಹಿತ ಮಹಿಳಾ ಕಾರ್ಮಿಕರಿಗೆ 1000 ರೂ.ಗಳ ಆರ್ಥಿಕ ನೆರವು ಸ್ತ್ರೀ ಸಾಮಥ್ಯ ಯೋಜನೆ ಮೂಲಕ 53000ಕ್ಕೂ ಹೆಚ್ಚು ಎಸ್.ಹೆಚ್.ಜಿಗಳಿಗೆ ತಲಾ 1.5 ಲಕ್ಷ ರೂ.ಗಳ ಬಂಡಾವಳ ಒದಗಿಸಲಾಗುತ್ತಿದೆ ಹಾಗೂ ಸ್ತ್ರೀ ಸಾಮರ್ಥ್ಯ ನಮೋ ಸ್ತ್ರೀ ಯೋಜನೆ ಮೂಲಕ ಹರಳೆಣ್ಣೆ, ಜಾಮ್, ಮಣ್ಣಿ ಪಾತ್ರಗಳು, ಚಿಪ್ಸ್ ಮುಂತಾದ ಪದಾರ್ಥಗಳನ್ನು ತಯಾರಿಸುವ ಗೃಹಕೈಗಾರಿಕ ಘಟಕ ಸ್ಥಾಪಿಸಲು ರಾಜ್ಯದ 9800ಕ್ಕೂ ಹೆಚ್ಚು ಮಹಿಳಾ ಸ್ವ-ಸಹಾಯ ಗುಂಪುಗಳು ಅಭ್ಯಧಯಕ್ಕಾಗಿ 500 ಕೋಟಿ ರೂ.ಗಳ ಆರ್ಥಿಕ ನೆರವು ಕೇಂದ್ರ ಮತ್ತು ರಾಜ್ಯದ ಡಬ್ಬಲ್ ಇಂಜಿನ ಸರ್ಕಾರ ನೀಡುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಮೋರ್ಚಾ ಖಜಾಂಚಿ ಹಾಗೂ ಶಾಸಕಿ ಲತಿಕಾ ಶರ್ಮಾ ಹೇಳಿದರು.

    ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್ ಮಾತನಾಡಿ,
    2014ರಲ್ಲಿ ಜಾರಿಗೆ ಬಂದ ಕೇಂದ್ರ ಸರ್ಕಾರ ಲಿಂಗಾನುಪಾತ ವ್ಯತ್ಯಸವನ್ನು ಮನಗಂಡು ಮತ್ತು ಮಹಿಳಾ ಪ್ರಾದಾನ್ಯತೆ ದೃಷ್ಠಿಯಿಂದ “ಭೇಟಿ ಬಚಾವೋ- ಭೇಟಿ ಪಡವೋ” ಯೋಜನೆಯನ್ನು ಸನ್ಮಾನ್ಯ ಪ್ರಧಾಣ ಮಂತ್ರಿಗಳಾದ ನರೇಂದ್ರ ಮೋದಿರವರು ಜಾರಿಗೆ ತಂದರು. ಈ ಮೂಲಕ ಲಿಂಗಾನುಪಾತ ಗಣನೀಯ ಏರಿಕೆ ಕಂಡಿದೆ. 2014-15ರಲ್ಲಿ 918 ಇದ್ದದು, 2021-22ನೇ ಸಾಲಿನಲ್ಲಿ 934ಕ್ಕೆ ಏರಿಕೆ ಕಂಡಿದೆ. ಅದಲ್ಲದೇ ಶೈಕ್ಷಣಿಕ ದೃಷ್ಠಿಯಿಂದಲು ಹೆಣ್ಣು ಮಕ್ಕಳ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿದೆ ಎಂದರು.

    ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರೇಮಾ ಹೆಗ್ಡೆ ಮಾತನಾಡಿ, ಮುದ್ರ ಯೋಜನೆಯ ಬಗ್ಗೆ ತಿಳಿಸಿ ಶೇಕಡ 71% ಮಹಿಳಾ ಉದ್ಯಾಮಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.

    ಜಿಲ್ಲಾ ಉಪಾಧ್ಯಕ್ಷೆ ನಾಗರತ್ನಮ್ಮ ಮತಾನಾಡಿ, ಸಂಧ್ಯಾ ಸುರಕ್ಷ ಯೋಜನೆ 1000 ದಿಂದ 1200ಕ್ಕೆ ಏರಿಕೆ ಹಾಗೂ ವೃದ್ಯಾಪ್ಯ ಪಿಂಚಣಿ ವಿಧವಾ ಪಿಂಚಣಿ 600 – 800 ರೂ.ಗೆ ಏರಿಕೆಯಾಗಿದ್ದು, ಕೇಂದದ್ರ ಮತ್ತು ರಾಜ್ಯ ಸರ್ಕಾರದ ಡಬ್ಬಲ್ ಇಂಜಿನ್ ಸರ್ಕಾರಗಳು ಇನ್ನು ಹಲವಾರು ಯೋಜನೆ ನೀಡುವ ಮೂಲಕ ಜನಪರ ಸರ್ಕಾರವಾಗಿದೆ ಎಂದು ಹೇಳಿದರು.

    ತುಮಕೂರು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಆಧ್ಯಾ ರಾಜುಗೌಡ, ದಾವಣಗೆರೆ ವಿಭಾಗ ಪಂಚಾಯತ್ ಗ್ರಾಮೀಣ ಪ್ರಕೋಷ್ಠದ ಸಹಸಂಚಾಲಕಿ ಜ್ಯೋತಿ ತಿಪ್ಪೇಸ್ವಾಮಿ, ಪ್ರಮುಖರಾದ ರಶ್ಮಿ, ಜಿಲ್ಲಾ ಮಾಧ್ಯಮ ಪ್ರಮುಖ್ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ್ ಜೆ.ಜಗದೀಶ್, ಕೈಗಾರಿಕ ಪ್ರಕೋಷ್ಠದ ಜಿಲ್ಲಾ ಸಹಸಂಚಾಲಕ ಅಕ್ಷಯ್ ಚೌಧರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts