

ಮುಂಬೈ: 2008ರಲ್ಲಿ ನಿರ್ದೇಶಕ ಮುರುಗದಾಸ್ ನಿರ್ದೇಶನದ, ಬಾಲಿವುಡ್ನ ಸ್ಟಾರ್ ನಟ ಅಮೀರ್ ಖಾನ್ ಮತ್ತು ನಟಿ ಅಸಿನ್ ಮುಖ್ಯಭೂಮಿಕೆಯಲ್ಲಿ ನಟಿಸಿದ 'ಗಜಿನಿ' ಸಿನಿಮಾ ಅಂದಿನ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬ್ಲಾಕ್ಬಸ್ಟರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತು. ಅಂದು ಈ ಸಿನಿಮಾ ನೋಡಿ, ಥ್ರಿಲ್ ಆಗಿದ್ದ ಸಿನಿಪ್ರೇಕ್ಷಕರು ಇಂದು ಕೂಡ ಈ ಚಿತ್ರವನ್ನು ನೋಡಿದ್ರೆ, ಅಷ್ಟೇ ಥ್ರಿಲ್ ಆಗುವುದರಲ್ಲಿ ಅನುಮಾನವೇ ಬೇಡ.
ಇದನ್ನೂ ಓದಿ: ದೇವಳದಿಂದ ಸನಾತನ ಧರ್ಮದ ರಕ್ಷಣೆ : ಯು.ಹರೀಶ ಭಟ್ ಹೇಳಿಕೆ
ಎ.ಆರ್. ಮುರಗದಾಸ್ ನಿರ್ದೇಶಿಸಿ, ಟಾಗೋರ್ ಮತ್ತು ಮಧು ಮಂತೇನಾ ನಿರ್ಮಾಣದ 'ಗಜನಿ' ಚಿತ್ರದಲ್ಲಿ ನಟ ಅಮೀರ್ ಖಾನ್ ತಲೆಗೆ ಕಬ್ಬಿಣದ ರಾಡ್ನಿಂದ ಬಲವಾದ ಪೆಟ್ಟು ಬಿದ್ದಿರುತ್ತದೆ. ಇದರ ಪರಿಣಾಮ ಅವರಿಗೆ ಯಾವ ಘಟನೆಗಳು ನೆನಪಿನಲ್ಲಿ ಇರುವುದಿಲ್ಲ. ಪ್ರತಿ 15 ನಿಮಿಷ ಹಿಂದೆ ನಡೆದ ಘಟನೆ ಗಜಿನಿ ನೆನಪಿನಲ್ಲಿ ಉಳಿದಿರುವುದಿಲ್ಲ. ಇದೇ ಚಿತ್ರದ ಕಥಾಹಂದರವಾಗಿದ್ದು, ಪ್ರೇಮಕಥೆಯು ಕೂಡ ಸಿನಿಮಾದ ಬಹುದೊಡ್ಡ ಯಶಸ್ಸಿಗೆ ಪ್ರಮುಖ ಕಾರಣವಾಯಿತು.
ಇನ್ನು ಅಮೀರ್ ಖಾನ್ ಅವರ ಪಾತ್ರದ ಬಗ್ಗೆ ಮಾತನಾಡಿದ ವಿಲನ್ ಪಾತ್ರಧಾರಿ ಪ್ರದೀಪ್ ರಾವತ್, 'ಗಜನಿ' ಪಾತ್ರಕ್ಕೆ ನಮ್ಮ ನಿರ್ದೇಶಕರು ಮೊದಲು ಆಯ್ಕೆ ಮಾಡಿದ್ದು, ಅಮೀರ್ ಖಾನ್ನಲ್ಲ ಬದಲಿಗೆ ಬಾಲಿವುಡ್ನ ಸೂಪರ್ಸ್ಟಾರ್ ಸಲ್ಮಾನ್ ಖಾನ್ರನ್ನು. ಅಸಲಿಗೆ ಅಮೀರ್ ಜಾಗಕ್ಕೆ ಸಲ್ಲು ಅವರನ್ನು ನೋಡಲು ಮುರುಗದಾಸ್ ಬಯಸಿದ್ದರು. ಆದರೆ, ಅದು ಅಂದುಕೊಂಡಂತೆ ನಡೆಯಲಿಲ್ಲ ಎಂದರು.
2005ರಲ್ಲಿ ರಿಲೀಸ್ ಆಗಿದ್ದ ತಮಿಳು ಭಾಷೆಯ 'ಗಜನಿ' ಚಿತ್ರದ ಶೀರ್ಷಿಕೆಯನ್ನೇ ಬಳಸಿ ರೀಮೇಕ್ ಮಾಡಿದ ನಿರ್ದೇಶಕ ಮುರುಗದಾಸ್, ಸಿನಿಮಾಗೆ ನಾಯಕನಾಗಿ ಸಲ್ಮಾನ್ ಖಾನ್ರನ್ನು ನೋಡಲು ಬಯಸಿದ್ದರು. ಆದರೆ, ಆನಂತರ ಚಿತ್ರಕ್ಕೆ ಸಲ್ಮಾನ್ ಸರಿಯಾದ ಆಯ್ಕೆ ಎಂದು ಅವರು ಭಾವಿಸಲಿಲ್ಲ. ಯಾಕಂದ್ರೆ, ಸಲ್ಮಾನ್ಗೆ ತಕ್ಷಣವೇ ಕೋಪ ಬರುತ್ತದೆ. ಇದು ಪಾತ್ರದ ಚಿತ್ರೀಕರಣಕ್ಕೆ ಕಷ್ಟವಾಗಬಹುದು ಎಂಬ ಯೋಚನೆಯಲ್ಲಿ ನಿರ್ಧಾರ ಬದಲಿಸಿದರು ಎಂದು ಹೇಳಿದ್ದಾರೆ.
ಸದ್ಯ ಈ ವಿಷಯ ಇಲ್ಲಿಯವರೆಗೂ ಅನೇಕರಿಗೆ ತಿಳಿದೇ ಇರಲಿಲ್ಲ. ಆದರೆ, ಇದೀಗ ಪ್ರದೀಪ್ ಹಂಚಿಕೊಂಡ ಶಾಕಿಂಗ್ ಮಾಹಿತಿ, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅಭಿಮಾನಿಗಳನ್ನು ಒಂದು ನಿಮಿಷ ಭಾರೀ ಅಚ್ಚರಿ ದೂಡಿತು ಎಂದರೆ ತಪ್ಪಾಗಲಾರದು,(ಏಜೆನ್ಸೀಸ್).