More

    ಜನತಾದಳಕ್ಕೆ ಹಾಕುವ ಮತದಿಂದ ಕನ್ನಡಿಗರಿಗೆ ಪ್ರಯೋಜನವಾಗುತ್ತದೆ; ಮೋದಿ ಹೇಳಿಕೆ ವಿರುದ್ಧ ಗರಂ ಆದ ಜೆಡಿಎಸ್!

    ಬೆಂಗಳೂರು: ಜೆಡಿಎಸ್​ಗೆ ಮತ ಹಾಕಿದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಲಾಭ ಪಡೆಯಲು ಖಂಡಿತಾ ಅಸಾಧ್ಯ. ಜನತಾದಳಕ್ಕೆ ಹಾಕುವ ಒಂದೊಂದು ಮತದಿಂದ ಕನ್ನಡಿಗರಿಗೆ ಪ್ರಯೋಜನವಾಗುತ್ತದೆ. ಕನ್ನಡಕ್ಕೆ ಲಾಭವಾಗುತ್ತದೆ. ಕನ್ನಡ ಅಸ್ಮಿತೆ ಉಳಿಸಲು ಸಹಕಾರಿಯಾಗುತ್ತದೆ. ಕನ್ನಡತನ ಸದಾ ಉಸಿರಾಡುತ್ತದೆ ಎಂದು ಜೆಡಿಎಸ್ ಸರಣಿ ಟ್ವೀಟ್ ಮಾಡಿದೆ.

    ಜೆಡಿಎಸ್ ಸರಣಿ ಟ್ವೀಟ್ ಮಾಡುತ್ತಾ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ವಿರುದ್ಧ ಕಿಡಿಕಾರಿದೆ. ಪ್ರದಾನಿ ಮೋದಿ ಇಂದು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡುತ್ತಾ, ಜೆಡಿಎಸ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು. ರಾಜ್ಯದ ಜನರು ಜೆಡಿಎಸ್​ಗೆ ಹಾಕುವ ಒಂದೊಂದು ಮತವೂ ಕಾಂಗ್ರೆಸ್​ ಹಾಕಿದಂತೆ ಎಂದು ಹೇಳಿದ್ದರು.

    ಇದನ್ನೂ ಓದಿ: 2 ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ… 3ನೇ ಬಾರಿ ಜನತೆ ಯಾಕೆ ಆಶೀರ್ವಾದ ಮಾಡಬಾರದು? ಡಿಕೆಶಿಗೆ ಟಾಂಗ್ ಕೊಟ್ಟ ಎಚ್​ಡಿಕೆ

    ಜೆಡಿಎಸ್‌ ಪ್ರೈವೇಟ್ ಲಿಮಿಟೆಡ್ ಪಾರ್ಟಿ ಎಂದ ಮೋದಿ

    ಮೋದಿ ಜೆಡಿಎಸ್ ವಿರುದ್ಧ ಮಾತನಾಡುತ್ತಾ, ಜೆಡಿಎಸ್‌ ಪ್ರೈವೇಟ್ ಲಿಮಿಟೆಡ್ ಪಾರ್ಟಿ ಎಂದು ವ್ಯಂಗ್ಯವಾಡಿದ್ದರು. ಅಲ್ಲದೆ, ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧಿಗಳಂತೆ ನಾಟಕವಾಡುತ್ತಾರೆ ಎಂದು ಟೀಕಿಸಿದರು.

    ಕೆಸರೆರಚಾಟ ನಿಲ್ಲಸಿ ಅಭಿವೃದ್ಧಿ ಬಗ್ಗ ಮಾತಾಡಿ

    ಇದೀಗ ಮೋದಿ ಹೇಳಿಕೆ ವಿರುದ್ಧ ಜೆಡಿಎಸ್ ಟ್ವೀಟ್ ಮಾಡಿದ್ದು, ನಾಳೆಯಿಂದ ‘ಎ-ಟೀಂ ಮತ್ತು ಬಿ-ಟೀಂ’ ಕೆಸರೆರಚಾಟ ನಿಲ್ಲಿಸಿ ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಜನರು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಕೇಂದ್ರ ನಾಯಕರಿಗೆ ಷರತ್ತು ಹಾಕಿದರೆ ನರೇಂದ್ರ ಮೋದಿ, ಅಮಿತ್ ಷಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ರಾಜ್ಯದಿಂದ ಇಂದೇ ದೆಹಲಿ ವಿಮಾನ ಹತ್ತುತ್ತಾರೆ ಎಂದು ವ್ಯಂಗ್ಯವಾಡಿದೆ.

    ಇದೊಂದು ಮೂರ್ಖತನ

    ಬಿಜೆಪಿ ಹಾಗೂ ಕಾಂಗ್ರೆಸ್ ಗುಲಾಮಿ ಪಕ್ಷಗಳು ಪ್ರಾದೇಶಿಕ ಪಕ್ಷವನ್ನು ಮಟ್ಟ ಹಾಕಲು ಪಣತೊಟ್ಟಿವೆ. ಸುದೀರ್ಘವಾದ ಆಡಳಿತ ನಡೆಸಿಯೂ ಮಾಡಿದ ಅಭಿವೃದ್ಧಿ ಶೂನ್ಯ ಎಂದು ಗೊತ್ತಾದ ಮೇಲೆ ಕುತಂತ್ರದಿಂದ ಮತ ಪಡೆಯಲು ಹೊಂಚು ಹಾಕುತ್ತಿವೆ. ಕನ್ನಡಿಗರನ್ನು ಮೂರ್ಖರೆಂದು ತಿಳಿದು ಈ ರೀತಿ ನಡೆದುಕೊಳ್ಳುವುದೇ ದೊಡ್ಡ ಮೂರ್ಖತನ ಎಂದು ನೆನಪಿರಲಿ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts