

ನವದೆಹಲಿ: ಅಕ್ಷಯ್ ಕುಮಾರ್, ಬಾಲಿವುಡ್ ನಟರಲ್ಲಿ ಫಿಟ್‍ನೆಸ್‍ಗೆ ಹೆಸರಾಗಿರುವ ನಟರಲ್ಲಿ ಒಬ್ಬರೆಂದು ಪರಿಗಣಿಸಬಹುದು. ಅವರ ಮುಂಬರುವ ಚಿತ್ರ ಒಎಂಜಿ 2 ರ ಟೀಸರ್ನಲ್ಲಿ, ತೆರೆಯ ಮೇಲೆ ಶಿವನಾಗಿ ಕಾಣಿಸಿಕೊಳ್ಳುತ್ತಿದ್ದು ಅನೇಕರು ಹೊಸ ಅವತಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಅವರು ಕೇವಲ ಜಿಮ್ನಲ್ಲಿ ಗಂಟೆಗಟ್ಟಲೆ ಕಳೆದು ಬಾಡಿ ಬಿಲ್ಡ್ ಮಾಡುವುದಿಲ್ಲ ಎನ್ನುವ ಮಾತಿದೆ. ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವ ಕಡೆಗೆ ಅವರ ಸಂಪೂರ್ಣ ಗಮನ ಇರುತ್ತದೆ ಎನ್ನಬಹುದು. ಅವರ ಹೊಸ ಲುಕ್ ೀ ಜೀವನಶೈಲಿಯದ್ದೇ ಫಲಿತಾಂಶವಾಗಿದೆ ಎನ್ನಬಹುದು. 55 ನೇ ವಯಸ್ಸಿನಲ್ಲೂ ನಟ ಹೇಗೆ ಫಿಟ್ ಮತ್ತು ಆರೋಗ್ಯಕರವಾಗಿ ಕಾಣುತ್ತಾನೆ ಎಂದು ಎಂದಾದರೂ ಆಶ್ಚರ್ಯ ಪಡುವ ಪ್ರತಿಯೊಬ್ಬರೂ ಅವರ ಸಲಹೆಗಳನ್ನು ಅನುಸರಿಸಬಹುದಾಗಿದೆ.
ಅಕ್ಷಯ್ ಕುಮಾರ್, ಸಂದರ್ಶನವೊಂದರಲ್ಲಿ ತಮ್ಮ ಫಿಟ್‍ನೆಸ್ ಬಗ್ಗೆ ಮಾತನಾಡಿದ್ದು ಆ ಸಂದರ್ಭದಲ್ಲಿ ಒಟ್ಟು 5 ವಿಚಾರಗಳನ್ನು ಮುನ್ನೆಲೆಗೆ ತಂದಿದ್ದಾರೆ. ಅವರ ಜೀವನಶೈಲಿ ಎಂತಹದ್ದು ಎನ್ನುವುದು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಅವರು ಜನರಿಗಾಗಿ ನೀಡಿದ 5 ಟಿಪ್ಸ್ ಹೀಗಿದೆ: