More

    ಬ್ಯಾಂಕ್‍ ದರೋಡೆಗೆಂದು ತೆರಳಿದ ಕಳ್ಳ ಪೊಲೀಸರು ಬರುವವರೆಗೂ ಕಾಯುತ್ತಿದ್ದ! ಯಾಕೆ?

    ಫ್ಲೋರಿಡಾ: ವಿಚಿತ್ರ ಘಟನೆಯೊಂದರಲ್ಲಿ, ಬ್ಯಾಂಕ್‍ ದರೋಡೆಗೆಂದು ತೆರಳಿದ್ದ ಕಳ್ಳ, ತನಗೆ ಅರಿವೇ ಇಲ್ಲದಂತೆ ಪೊಲೀಸರು ಬರುವವರೆಗೂ ಕಾಯುತ್ತಿದ್ದ! ಈ ದರೋಡೆಕೋರನನ್ನು ಜೇಮ್ಸ್ ಟಿಮತಿ ಕೆಲ್ಲಿ ಎಂದು ಗುರುತಿಸಲಾಗಿದೆ

    ಅಂದ ಹಾಗೆ ಈ ಕಳ್ಳತನ ನಡೆಯದಂತೆ ತಡೆದದ್ದು ಓರ್ವ ಮಹಿಳಾ ಉದ್ಯೋಗಿ. ಆಕೆಯೇ ಈ ಕಳ್ಳನನ್ನು ಕಾಯುವಂತೆ ಮಾಡಿದ್ದು! ಈ ಮೂಲಕ ಬ್ಯಾಂಕ್‍ ದರೋಡೆ ತಡೆದ ಆ ಮಹಿಳಾ ಉದ್ಯೋಗಿಯ ಬುದ್ಧಿವಂತಿಕೆಗೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಇದನ್ನೂ ಓದಿ: ಬ್ಯಾಂಕ್ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಹೊಡೆದಾಡಿ ಬ್ಯಾಂಕ್ ದರೋಡೆ ತಪ್ಪಿಸಿದ ಮಹಿಳಾ ಕಾನ್​​ಸ್ಟೇಬಲ್​ಗಳು!

    ಸ್ಕೈನ್ಯೂಸ್ ಪ್ರಕಾರ, ಫ್ಲೋರಿಡಾದ PNC ಬ್ಯಾಂಕ್‍ನ ಶಾಖೆಯಲ್ಲಿ ಜುಲೈ 7ರ ಶುಕ್ರವಾರ ನಡೆದ ಘಟನೆಯಲ್ಲಿ ದರೋಡೆಕೋರನು ಜಾಲರಿಯ ರೀತಿಯಿದ್ದ ಚೀಲವನ್ನು ಹೊತ್ತುಕೊಂಡು ಬ್ಯಾಂಕ್‍ಗೆ ಪ್ರವೇಶಿಸಿ ನಿಮ್ಮಲ್ಲಿರುವ ಎಲ್ಲ ಹಣವನ್ನು ಕೊಡಿ ಎಂದು ಅಲ್ಲಿದ್ದ ಕ್ಯಾಷಿಯರ್ ಕೈಗೆ ಚೀಟಿ ಕೊಟ್ಟಿದ್ದಾನೆ.

    ಕ್ಯಾಷಿಯರ್ ಕಳ್ಳ ಕೊಟ್ಟ ಚೀಟಿಯನ್ನು ನೋಡದಂತೆ ನಟಿಸಿದಾಗ ತಾನು ಬ್ಯಾಂಕನ್ನು ದೋಚಲು ಅಲ್ಲಿದ್ದೆ ಎಂದು ಸ್ಪಷ್ಟವಾಗಿ ಹೇಳಿದ್ದಾನೆ. ತನ್ನ ಮತ್ತು ಇತರರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿದ ಬ್ಯಾಂಕ್ ಉದ್ಯೋಗಿ ಜಾಣತನದಿಂದ ಕೆಲ್ಲಿಗೆ ಹಣ ವಿಥ್‍ಡ್ರಾ ಮಾಡುವ ಸ್ಲಿಪ್ಅನ್ನು ಹಸ್ತಾಂತರಿಸಿದ್ದು, ಅದನ್ನು ಭರ್ತಿ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಈ ಟಿಮತಿ ಕೆಲ್ಲಿ, ನಾನು ನಿಮ್ಮನ್ನು ದೋಚಲು ಬಂದಿದ್ದೇನೆ ಎಂದು ಸ್ಪಷ್ಟಬಾಗಿ ಕ್ಯಾಷಿಯರ್ ಗೆ ಹೇಳಿದ್ದಾನೆ.

    ಇದನ್ನೂ ಓದಿ: ಬೇವೂರು ಕರ್ನಾಟಕ ಬ್ಯಾಂಕ್ ದರೋಡೆಕೋರರ ಬಂಧನ

    ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಕ್ಯಾಷಿಯರ್, ಆಫೀಸಿನಲ್ಲಿ ಕಂಪ್ಯೂಟರ್ ಸಮಸ್ಯೆ ಇದೆ ಎಂದು ನಟಿಸಿ, ಹಣ ತರುವ ತನಕ ಕಾಯಿರಿ ಎಂದು ಕೇಳಿಕೊಂಡಿದ್ದಾರೆ. ಅಮೆರಿಕದ ಪತ್ರಿಕೆಗಳ ವರದಿಗಳ ಪ್ರಕಾರ, ಕೆಲ್ಲಿ ಕ್ಯಾಷಿಯರ್ ನೀಡಿದ ಸೂಚನೆಗಳನ್ನು ಪಾಲಿಸಿದ. ಈ ಸಂದರ್ಭ ಒಳ ಹೋದ ಕ್ಯಾಷಿಯರ್‍ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾಳೆ. ಇದ್ಯಾವುದರ ಪರಿವೆಯೇ ಇಲ್ಲದೇ ಆತ ಪೊಲೀಸರು ಬರುವ ತನಕವೂ ಕಾಯುತ್ತಿದ್ದ ಕಾರಣ ಸಿಕ್ಕಿಬಿದ್ದಿದ್ದಾನೆ.

    ಇದನ್ನೂ ಓದಿ: ಸಾಲ ಕೊಡದಿದ್ರೆ ಬಾಂಬ್​ ಸ್ಫೋಟಿಸುವುದಾಗಿ ಬೆದರಿಸಿ ಬ್ಯಾಂಕ್​ನಿಂದ 9.9 ಲಕ್ಷ ದರೋಡೆ ಪ್ರಕರಣ; ಅಪರಾಧಿ ಟೆಕಿಗೆ 2 ವರ್ಷ ಜೈಲು

    ಟಿಮತಿ ಕೆಲ್ಲಿಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಮಿಯಾಮಿ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಆತ ಬ್ಯಾಂಕ್ ಶಾಖೆಯಲ್ಲಿ ದರೋಡೆಗೆ ಪ್ರಯತ್ನಿಸಿದ್ದನ್ನು ಒಪ್ಪಿಕೊಂಡ. ಜೇಮ್ಸ್ ಟಿಮತಿ ಕೆಲ್ಲಿ ತನ್ನ ವಿಫಲ ದರೋಡೆ ಪ್ರಯತ್ನಕ್ಕಾಗಿ ಗರಿಷ್ಠ 20 ವರ್ಷಗಳ ಜೈಲು ಶಿಕ್ಷೆಯನ್ನು ಪಡೆದಿದ್ದಾನೆ. ಕ್ಯಾಷಿಯರ್, ತನ್ನ ತ್ವರಿತ ಆಲೋಚನೆ ಮತ್ತು ಮನವೊಲಿಸುವ ಸಾಮರ್ಥ್ಯಗಳಿಗಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts