More

    ಸಾಲ ಕೊಡದಿದ್ರೆ ಬಾಂಬ್​ ಸ್ಫೋಟಿಸುವುದಾಗಿ ಬೆದರಿಸಿ ಬ್ಯಾಂಕ್​ನಿಂದ 9.9 ಲಕ್ಷ ದರೋಡೆ ಪ್ರಕರಣ; ಅಪರಾಧಿ ಟೆಕಿಗೆ 2 ವರ್ಷ ಜೈಲು

    ಬೆಂಗಳೂರು: ಸಾಲ ಕೇಳಲು ಬ್ಯಾಂಕ್​ಗೆ ಹೋಗಿದ್ದಾಗ ಲೋನ್ ಸಿಗುವುದಿಲ್ಲ ಎಂದು ಗೊತ್ತಾದ ನಂತರ ಬಾಂಬ್ ಸ್ಫೋಟಿಸುವುದಾಗಿ ಬೆದರಿಸಿ 9.90 ಲಕ್ಷ ರೂ. ದೋಚಿದ್ದ ಅಪರಾಧಿಗೆ 2 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

    ಸಾಫ್ಟ್​​ವೇರ್​ ಕಂಪನಿ ನೌಕರ ರಂಜಲ್ ಭಟ್ಟಾಚಾರ್ (40) ಶಿಕ್ಷೆಗೆ ಒಳಗಾದವ. ಟೆಕ್ಕಿಯಾಗಿದ್ದ ರಂಜಲ್, ಗೃಹಸಾಲಕ್ಕೆ ಹಲವು ಬ್ಯಾಂಕ್​​ಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ದಾಖಲೆ ಸರಿ ಇಲ್ಲವೆಂದು ವಾಪಸ್ ಕಳುಹಿಸಿದ್ದರು. ಅದೇ ರೀತಿ 2012ರ ಅಕ್ಟೋಬರ್ 19ರ ಮಧ್ಯಾಹ್ನ 3 ಗಂಟೆಯಲ್ಲಿ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿನ ಎಚ್‌ಡಿಎಫ್​ಸಿ ಬ್ಯಾಂಕಿಗೆ ಮುಖಕ್ಕೆ ಬ್ಯಾಂಡೇಜ್ ಬಟ್ಟೆ ಕಟ್ಟಿಕೊಂಡು ಹೋಗಿದ್ದ. ಬ್ಯಾಂಕ್ ವ್ಯವಸ್ಥಾಪಕರ ಬಳಿ ಹೋಗಿ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಅವರು ದಾಖಲೆ ಸರಿ ಇಲ್ಲವೆಂದು ಸಾಲ ಕೊಡಲು ನಿರಾಕರಿಸಿದ್ದರು.

    ಇದನ್ನೂ ಓದಿ: ನಿವೃತ್ತ ಎಸಿಪಿಗೇ ಮೋಸ; ನಿರ್ಮಾಣ್​ ಶೆಲ್ಟರ್ಸ್​ ವಿರುದ್ಧ ವಂಚನೆ ಆರೋಪ..

    ಆಗ ಬ್ಯಾಂಕ್ ಖಾತೆ ತೆರೆಯಲು ಅರ್ಜಿ ಕೊಟ್ಟಿದ್ದ. ಆ ದಾಖಲೆಯೂ ಸರಿ ಇಲ್ಲದ ಕಾರಣಕ್ಕೆ ಬ್ಯಾಂಕ್ ಖಾತೆನ್ನು ತೆರೆಯಲು ನಿರಾಕರಿಸಿದರು. ಕೋಪಗೊಂಡ ರಂಜಲ್, ಹಣ ಕೊಡುವಂತೆ ಬೆದರಿಕೆ ಒಡ್ಡಿದ್ದ. ಹಣ ಇಲ್ಲ ಹೊರಗೆ ಹೋಗು ಎಂದು ಸೂಚನೆ ಕೊಟ್ಟಾಗ ಸೊಂಟದಲ್ಲಿ ಕಟ್ಟಿಕೊಂಡಿದ್ದ ಸೆಲ್-ವಯರ್​ ಸೇರಿ ಬಾಂಬ್ ಮಾದರಿ ವಸ್ತುವನ್ನು ತೋರಿಸಿ ಸ್ಫೋಟ ಮಾಡುವುದಾಗಿ ಬೆದರಿಸಿದ್ದ. ಭಯಗೊಂಡ ಬ್ಯಾಂಕ್ ಸಿಬ್ಬಂದಿ ಮತ್ತು ಸಾರ್ವಜನಿಕರು ಬ್ಯಾಂಕ್‌ನಿಂದ ಹೊರ ಹೋಗಿದ್ದರು.

    ಇದನ್ನೂ ಓದಿ: ವೇಗದಲ್ಲಿದ್ದ ಕಾರು ಮರಕ್ಕೆ ಡಿಕ್ಕಿ, ಕುಲಸಚಿವ ಸ್ಥಳದಲ್ಲೇ ಸಾವು; ಜೇನುನೊಣಗಳ ದಾಳಿಗೆ ಅವರ ಪುತ್ರ-ಪತ್ನಿಯ ಸ್ಥಿತಿ ಗಂಭೀರ..

    ಈ ವೇಳೆ ಅಪರಾಧಿ ಕ್ಯಾಷ್ ಕೌಂಟರ್‌ಗೆ ಹೋಗಿ 9.9 ಲಕ್ಷ ರೂ. ದೋಚಿದ್ದ. ವಿಷಯ ತಿಳಿದ ಇಂದಿರಾನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಂಜಲ್​ನನ್ನು ಬಂಧಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಅಂದಿನ ಇನ್‌ಸ್ಪೆಕ್ಟರ್ (ಹಾಲಿ ಎಸಿಪಿ) ಡಿ.ಕುಮಾರ್ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. 10ನೇ ಎಸಿಎಂಎಂ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ರಂಜಲ್ ಭಟ್ಟಾಚಾರ್ ಅಪರಾಧಿ ಎಂದು ಘೋಷಣೆ ಮಾಡಿ 2 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.

    ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್​; ಇತ್ತ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಸಸ್ಪೆಂಡ್..​

    ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ; ಪ್ರತಿಭಟನಾನಿರತ ವಿದ್ಯಾರ್ಥಿನಿಗೆ ಡಿಸಿ ಬುದ್ಧಿವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts