ಮಸ್ಕಿ: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ರಾಜ್ಯವನ್ನು ತಲ್ಲಣಗೊಳಿಸಿದ್ದು, ಕೊಲೆಗಾರನಿಗೆ ಕೂಡಲೇ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿ ಜಂಗಮ ಸಮಾಜ ಸೇವಾ ಸಂಸ್ಥೆಯ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಅರಮನೆ ಸುಧಾಗೆ ಗುರುವಾರ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಗಚ್ಚಿನ ಹಿರೇಮಠದಲ್ಲಿ ಸಭೆ ನಡೆಸಿ ನೇಹಾ ಹತ್ಯೆಯನ್ನು ಖಂಡಿಸಲಾಯಿತು. ಪ್ರಮುಖರಾದ ಶರಬಯ್ಯ ಸ್ವಾಮಿ ಬಳಗಾನೂರು, ಹಳ್ಳಿ ವಿರೂಪಾಕ್ಷಯ್ಯ, ಸಿದ್ದಲಿಂಗಯ್ಯ ಸೊಪ್ಪಿಮಠ, ಶಾರದಾ ಗಣಾಚಾರಿ, ನಾಗೇಶ ಕಡಾಮುಡಿಮಠ, ಪಂಚಾಕ್ಷರಯ್ಯ ಕಂಬಾಳಿಮಠ, ಬಸವರಾಜಸ್ವಾಮಿ ಹಸಮಕಲ್, ವಿಶ್ವನಾಥಸ್ವಾಮಿ ಶಂಕರದೇವರ ಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಶಿವಕುಮಾರ ಶಾಸ್ತ್ರೀಮಠ, ಮಹೇಶ ಕೊಟ್ಟೂರುಮಠ, ಗಂಗಾಧರಯ್ಯ ಕಂಬಾಳಿಮಠ, ಶಶಿಧರ ಹಂಚಿನಾಳ, ಸೋಮಶೇಖರಯ್ಯ ಶಿರವಾರಮಠ, ಶಿವಶಂಕ್ರಯ್ಯ ಸ್ಥಾವರಮಠ ಇತರರಿದ್ದರು.